1. ಸುದ್ದಿಗಳು

ಬ್ರೇಕಿಂಗ್‌; 276 ಕಳಪೆ ಬೀಜ ವಿತರಣೆ ಪ್ರಕರಣ ದಾಖಲು, 416 ಪರವಾನಗಿ ರದ್ದು!

Kalmesh T
Kalmesh T
ಕಳಪೆ ಬೀಜ ವಿತರಣೆ

ರೈತರಿಗೆ ಕಳಪೆ ಬಿತ್ತನೆ ಬೀಜ ಪೂರೈಸುವವರ ವಿರುದ್ಧ ಒಟ್ಟು 276 ಪ್ರಕರಣ ದಾಖಲಾಗಿವೆ. ಹಾಗೂ 416 ಪರವಾನಗಿಗಳು ರದ್ದುಗೊಳಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ ಹೇಳಿದರು.

ಇದನ್ನೂ ಓದಿರಿ: ಗುಡ್‌ನ್ಯೂಸ್‌: ರಾಜ್ಯದ ರೈತರ ಏಳ್ಗೆಗಾಗಿ 400 ಕೋಟಿ ಅನುದಾನ ಮೀಸಲು- ಸಚಿವ ಬಿ.ಸಿ. ಪಾಟೀಲ

ರೈತರಿಗೆ ಕಳಪೆ ಬಿತ್ತನೆ ಬೀಜ ಪೂರೈಸುವವರ ವಿರುದ್ಧ ಒಟ್ಟು 276 ಪ್ರಕರಣ ದಾಖಲಾಗಿವೆ. ಹಾಗೂ 416 ಪರವಾನಗಿಗಳು ರದ್ದುಗೊಳಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ ಹೇಳಿದರು.

ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಬಿ.ಸಿ. ಪಾಟೀಲ ಮಾತನಾಡಿದರು.

ಅಷ್ಟೇ ಅಲ್ಲದೇ ಕಳಪೆ ಬೀಜ ಪೂರೈಕೆ ಮಾಡುವವರನ್ನು ಪತ್ತೆ ಹಚ್ಚಿ ಅವರಿಂದ ಸರಿಸುಮಾರು 55 ಲಕ್ಷ ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಮುಂದುವರೆಯಲಿದೆ ಮಳೆಯಬ್ಬರ; ಇನ್ನೂ 4-5 ದಿನಗಳ ಕಾಲ ಭಾರೀ ಮಳೆ..!

ಆ ರೀತಿ ವಂಚನೆ ಮಾಡುತ್ತಿರುವುದು ಕಂಡು ಬಂದಲ್ಲಿ ಕೃಷಿ ಜಾಗೃತ ಕೋಶಕ್ಕೆ ಮಾಹಿತಿ ನೀಡುವಂತೆ ರೈತರಿಗೆ ಸಚಿವ ಬಿ.ಸಿ. ಪಾಟೀಲ ಸೂಚನೆ ನೀಡಿದರು.

ರಸಗೊಬ್ಬರ, ಬಿತ್ತನೆ ಬೀಜ, ದನ, ಕೃಷಿ ಯಂತ್ರೋಪಕರಣಗಳು, ರಸಗೊಬ್ಬರಗಳ ಸಬ್ಸಿಡಿಯನ್ನು ಮುಂದುವರಿಸಲಾಗಿದ್ದು, ಸ್ಪ್ರಿಂಕ್ಲರ್‌ಗಳಿಗೆ ಶೇಕಡ 90ರಷ್ಟು ರಿಯಾಯಿತಿ  ನೀಡಲಾಗುತ್ತಿದೆ ಎಂದರು.

2022ರಲ್ಲಿ ಭಾರತದ ಕಾಫಿ ರಫ್ತು 19 ರಷ್ಟು ಏರಿಕೆ; 1,88,736 ಟನ್‌ ರಫ್ತು!

ಕೃಷಿ ಚಟುವಟಿಕೆಗಳಿಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದ್ದು, ರೈತರು ಸೌಲಭ್ಯಗಳನ್ನು ಬಳಸಿಕೊಂಡು ಉತ್ಪನ್ನ ಹೆಚ್ಚಿಸಿ ಲಾಭ ಗಳಿಸಿಕೊಂಡು ಉತ್ಪನ್ನ ಹೆಚ್ಚಿಸಿ ಲಾಭ ಗಳಿಸುವಂತೆ ಸಲಹೆ ನೀಡಿದರು.

Published On: 06 July 2022, 04:35 PM English Summary: breaking; 276 cases of poor seed distribution registered, 416 licenses cancelled!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.