1. ಸುದ್ದಿಗಳು

ಮೂರು ಸಾವಿರ ಚೀನೀ ಉತ್ಪನ್ನಗಳಿಗೆ ನಿರ್ಬಂಧ

ಭಾರತ ಚೀನಾ ಸಂಘರ್ಷದಲ್ಲಿ ಕರ್ನಲ್ ಸೇರಿದಂತೆ 20 ಯೋಧರು ಹುತಾತ್ಮರಾದ ಬಳಿಕ  ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ದೇಶಾದ್ಯಂತ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಲು ಭಾರತ ಸಿದ್ದವಾಗಿದೆ.

ಭಾರತ ತನ್ನ ಮಾರುಕಟ್ಟೆಯನ್ನೇ ಅಸ್ತ್ರವನ್ನಾಗಿಸಿ ಚೀನಾವನ್ನು ದೂರವಿಡುವ ಮತ್ತು ಸ್ವಾವಲಂಬಿಯಾಗುವ ಕಾರ‍್ಯತಂತ್ರ ಅನುಸರಿಸಲು ಸಜ್ಜಾಗುತ್ತಿದೆ.

ಸುಮಾರು 3 ಸಾವಿರ ಚೀನೀ ಉತ್ಪನ್ನಗಳಿಗೆ ನಿರ್ಬಂಧ ಘೋಷಿಸುವ ಮೂಲಕ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಚೀನಕ್ಕೆ ಮಹಾನ್‌ ಬರೆ ಎಳೆದಿದೆ. ಕಾಸ್ಮೆಟಿಕ್ಸ್‌, ಬ್ಯಾಗ್‌, ಗೊಂಬೆ, ಪೀಠೊಪಕರಣ, ಪಾದರಕ್ಷೆ, ವಾಚ್‌ ಸೇರಿದಂತೆ 450 ಸಂಸ್ಥೆಗಳ 3 ಸಾವಿರ ಉತ್ಪನ್ನಗಳಿಗೆ ನಿರ್ಬಂಧ ಹೇರಿದೆ.

ಬಿಎಸ್​ಎನ್​ಎಲ್​ 4ಜಿ ಅಪ್​ಗ್ರೇಡ್​ಗೆ ಚೀನಾ ಸಾಧನಗಳನ್ನು ಬಳಸದಿರಲು ನಿರ್ಧಾರ

ಭಾರತ್ ಸಂಚಾರ್ ನಿಗಮ ನಿಯಮಿತ (ಬಿಎಸ್ಎನ್ಎಲ್)ದ 4ಜಿ ಸಾಧನವನ್ನು ಅಪ್ಗ್ರೇಡ್ ಮಾಡಲು ಚೀನಾ ಸಾಧನಗಳನ್ನು ಬಳಸದಂತೆ ನಿರ್ಧರಿಸಿದೆ.

ಚೀನಾ ಸಂಸ್ಥೆಗಳ ಸಾಧನಗಳ ಮೇಲಿನ ಅವಲಂಬನೆಯನ್ನು ಹಂತ ಹಂತವಾಗಿ ಕಡಿಮೆ ಮಾಡಿಕೊಳ್ಳಲು ಸೂಚಿಸಿದೆ. ಭಾರ್ತಿ ಏರ್ಟೆಲ್ ಮತ್ತು ವಡಾಫೋನ್ ಐಡಿಯಾ ಕಂಪನಿಗಳು ಪ್ರಸ್ತುತ ಚೀನಾ ಮೂಲದ ಬಹುರಾಷ್ಟ್ರೀಯ ದೂರಸಂಪರ್ಕ ಉಪಕರಣಗಳ ಕಂಪನಿ ಹುವಾಯಿ ಕಂಪನಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಬಿಎಸ್ಎನ್ಎಲ್ ಸಹ ಚೀನಾ ಮೂಲದ ಝಡ್ಟಿಇ ಕಂಪನಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇವುಗಳ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಲು ಸರ್ಕಾರ ಹೆಜ್ಜೆ ಇಟ್ಟಿದೆ.

Published On: 18 June 2020, 12:52 PM English Summary: boycott chinese products

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.