ನಮ್ಮ ದೇಶದಲ್ಲಿ ಬಿರಿಯಾನಿ (Biryani) ರುಚಿ ಸವಿಯುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಬಿರಿಯಾನಿಯಿಂದಲೇ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತಿದೆ.
ಬಿರಿಯಾನಿ (Biryani) ಬಗ್ಗೆ ಸಖತ್ ಇಂಟ್ರಸ್ಟಿಂಗ್ ಆಗಿರುವ ವಿಷಯಗಳು ಇಲ್ಲಿವೆ.
ಮಾಂಸದೂಡದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಬಾಡೇ ನಮ್ಮ ಗಾಡು, ನನ್ನ ಆಹಾರ ನನ್ನ ಇಷ್ಟ ಎನ್ನುವ ಅಭಿಯಾನಗಳು ನಡೆದಿದ್ದವು.
ಅದೆಲ್ಲ ಮಾಂಸದೂಟವನ್ನು ಹೀಯಾಳಿಸುವವರ ವಿರುದ್ಧವಿದ್ದ ಹಾಗೂ ಮಾಂಸ ಆಹಾರವೂ ಕೀಳಲ್ಲ ಎನ್ನುವ ಅಭಿಮಾನದ ಅಭಿಯಾನಗಳು.
ಮಾಂಸಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಮಾಂಸದೂಟದ ಚಿತ್ರಗಳನ್ನು ಹಾಕುವ ಮೂಲಕ ಅವರ ಅಭಿರುಚಿಯನ್ನು ಹೆಮ್ಮೆಯಿಂದಲೇ ಹೇಳಿದ್ದರು.
ಇದೀಗ ಮಾಂಸದೂಟ ಹಾಗೂ ಬಿರಿಯಾನಿ ಪ್ರಿಯರ ಬಗ್ಗೆ ಅಂತಹದ್ದೇ ಒಂದು ಸುದ್ದಿ ಹೆಚ್ಚು ಚರ್ಚೆ ಆಗುತ್ತಿದೆ.
ಆದರೆ,ಬಿರಿಯಾನಿ ಪ್ರಿಯರು ಯಾವುದೇ ಅಭಿಯಾನ ನಡೆಸಿಲ್ಲ.
ಹಿಂದೆಂದಿಗಿಂತಲೂ 2022ನೇ ಸಾಲಿನಲ್ಲಿ ಹೆಚ್ಚು ಬಿರಿಯಾನಿ ಮಾರಾಟದ ವಹಿವಾಟು ನಡೆದಿರುವುದೇ ಆ ಸುದ್ದಿ.
ಭಾರತದಲ್ಲಿ ಅತ್ಯಂತ ಹೆಚ್ಚು ಆರ್ಡರ್ ಮಾಡುವ ಆಹಾರದಲ್ಲಿ ಬಿರಿಯಾನಿ ಮತ್ತೊಮ್ಮೆ ರಾಜನಂತೆ ಮೊದಲನೇ ಸ್ಥಾನದಲ್ಲಿ ಮುಂದುವರಿದಿದೆ.
2022ರಲ್ಲಿ ಪ್ರತಿ ಒಂದು ನಿಮಿಷಕ್ಕೆ 186 ಬಿರಿಯಾನಿಗಳ ಆರ್ಡರ್ ಬಂದಿವೆ. ಈ ಮೂಲಕ ಈ ಹಿಂದೆಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿ
ಬಿರಿಯಾನಿಗಳ ಆರ್ಡರ್ 2022ರಲ್ಲಿ ಬಂದಿರುವುದಾಗಿ ಜೊಮ್ಯಾಟೊ (Zomato) ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.
ಇನ್ನು ಇಟಾಲಿಯನ್ ಖಾದ್ಯವಾದ ಪಿಜ್ಜಾ ಎರಡನೇ ಸ್ಥಾನದಲ್ಲಿದ್ದು, ಪ್ರತಿ ನಿಮಿಷ 139 ಪಿಜ್ಜಾ ಆರ್ಡರ್ ಬಂದಿರುವುದಾಗಿ ಜೊಮ್ಯಾಟೊ ತಿಳಿಸಿದೆ.
ಇನ್ನು ಜೊಮ್ಯಾಟೊದ ವಾರ್ಷಿಕ ಟ್ರೆಂಡಿಂಗ್ ವರದಿಯಲ್ಲೂ ಇದೇ ಅಂಶ ಉಲ್ಲೇಖವಾಗಿದ್ದು, ಪ್ರತಿ ನಿಮಿಷಕ್ಕೆ 137 ಬಿರಿಯಾನಿ ಆರ್ಡರ್ ಬಂದಿರುವುದು ದಾಖಲಾಗಿದೆ.
ಎಲ್ಲ ಬ್ರ್ಯಾಂಡ್ ಪುಡ್‌ಡಿಲವರಿಗಳಲ್ಲೂ ಬಿರಿಯಾನಿ ಫೇಮಸ್ ಖಾದ್ಯವಾಗಿದೆ. ‘Biryanis @99’ ಹಾಗೂ ಬಿರಿಯಾನಿ ಬ್ಲೂಸ್ ಸಂಸ್ಥೆಗಳು ಬಿರಿಯಾನಿ ಸೇಲ್‌ನಲ್ಲಿ
ಹೆಚ್ಚು ಪ್ರಸಿದ್ಧಿಗಳಿಸಿವೆ.
ಬಿರಿಯಾನಿ ಬ್ಲೂಸ್ ಎಂಬ ಉದ್ಯಮವು ಪ್ರತಿ ವರ್ಷ 2.5 ಮಿಲಿಯನ್‌ಗಿಂತಲೂ ಹೆಚ್ಚು ಬಿರಿಯಾನಿಗಳನ್ನು ಡಿಲಿವರಿ ಮಾಡುತ್ತಿದೆ!
ಬಿರಿಯಾನಿ ಬಯ್ ಕಿಲೋ ಎಂಬ ಹೋಟೆಲ್ ಉದ್ಯಮವು ಭಾರತದಾದ್ಯಂತ 2021-22ನೇ ಸಾಲಿನಲ್ಲಿ 132 ಕೋಟಿ ಆದಾಯ ಗಳಿಸಿದ್ದರೆ,
300 ಕೋಟಿ ಆದಾಯ ಗಳಿಸುವ ಗುರಿಯನ್ನು ಹಾಕಿಕೊಂಡಿದೆ.
ಇನ್ನು ಬಿರಿಯಾನಿ ಈ ವರ್ಷವಷ್ಟೇ ಅಲ್ಲ ಕಳೆದ ಏಳು ವರ್ಷಗಳಿಂದ ಟಾಪ್ ಟ್ರೆಂಡಿಂಗ್‌ನಲ್ಲಿದೆ.
ಪ್ರಾದೇಶಿಕವಾಗಿ ಫೇಮಸ್ ಬಿರಿಯಾನಿಗಳು!
ಬಿರಿಯಾನಿ ಮಾರಾಟ ಹಾಗೂ ವಹಿವಾಟು ದೇಶಾದ್ಯಂತ ಟ್ರೆಂಡ್ ಆಗಿದೆ. ಇದೇ ಸಂದರ್ಭದಲ್ಲಿ ಸ್ಥಳೀಯ ಮಟ್ಟದ ಮಸಾಲೆಗಳನ್ನು ಬಳಸಿ
ಮಾಡುವ ಬಿರಿಯಾನಿಯೂ ಸಖತ್ ಫೇಮಸ್ ಆಗಿದೆ. ಕರ್ನಾಟಕದಲ್ಲಿ ದಮ್ ಬಿರಿಯಾನಿ, ಬನ್ನೂರು ಧಮ್ ಬಿರಿಯಾನಿ,
ಹೈದರಾಬಾದಿ ಬಿರಿಯಾನಿ, ತಲಶೇರಿ ಬಿರಿಯಾನಿ, ಅಂಬೂರು ಬಿರಿಯಾನಿ ಹಾಗೂ ದಿಂಡಿಗಲ್ ಬಿರಿಯಾನಿ ಸೇರಿದಂತೆ ಹಲವು ಬಿರಿಯಾನಿಗಳು ಸಖತ್ ಫೇಮಸ್ ಆಗಿವೆ.
Share your comments