ತೆರಿಗೆ ಭಾರ ತಗ್ಗಿಸಿಕೊಳ್ಳಲು ಆದಾಯದ ಒಂದಿಷ್ಟು ಭಾಗವನ್ನು ಹೂಡಿಕೆ ಮಾಡುವುದು ಅಗತ್ಯ. ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ಕೂಡ ತೆರಿಗೆ ಉಳಿಸೋ 5 ವರ್ಷಗಳ ಅವಧಿಯ Fixed Deposits ನ್ನು ಪರಿಚಯಿಸಿವೆ. ಅವುಗಳಲ್ಲಿ State Bank Of India ಕೂಡ ಒಂದು. ಈ ತೆರಿಗೆ ಉಳಿಸೋ Fixed Deposits ಖಾತೆ ತೆರೆಯೋದು ಹೇಗೆ? SBI ನಲ್ಲಿ 5 ವರ್ಷದ FD ಖಾತೆ ತೆರೆಯುವ ಮೂಲಕ 1,50,000 ಪಡೆಯಬಹುದು. ಇದರ ಬಗ್ಗೆ ತಿಳಿದುಕೊಳ್ಳಬೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ .
ಇದನ್ನು ಓದಿರಿ:
Breaking News ಮತ್ತೊಂದು Bank ಮುಚ್ಚಲು RBI ನಿರ್ಧಾರ!
ಈ Account ಯಾರು ತೆರೆಯಬಹುದು?
ಕಾಯಂ Account ಸಂಖ್ಯೆ PAN ಹೊಂದಿರುವ ಯಾವುದೇ ಭಾರತೀಯ ನಿವಾಸಿ SBI ತೆರಿಗೆ ಉಳಿತಾಯ FD ಯಲ್ಲಿ ಹೂಡಿಕೆ ಮಾಡಬಹುದು. ಇತ್ತೀಚೆಗೆ ಎಸ್ಬಿಐ ತೆರಿಗೆ ಉಳಿತಾಯ ಎಫ್ಡಿ ಬಗ್ಗೆ ಟ್ವೀಟ್ ಮಾಡಿದ್ದು, 'ಎಸ್ ಬಿಐ ತೆರಿಗೆ ಉಳಿತಾಯ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಿ ನಿಮ್ಮ ಉಳಿತಾಯವನ್ನು ಬೆಳೆಸಿಕೊಳ್ಳಿ' ಎಂದು ಸಲಹೆ ನೀಡಿದೆ.
ಕನಿಷ್ಠ deposit ಎಷ್ಟು?
ಎಸ್ಬಿಐ ತೆರಿಗೆ ಉಳಿತಾಯ ಯೋಜನೆ 2006 ಸ್ಥಿರ ಠೇವಣಿ ಪ್ಲ್ಯಾನ್ ನಲ್ಲಿ ಕನಿಷ್ಠ 1,000 ರೂ. ಠೇವಣಿ ಅಥವಾ ಅದಕ್ಕಿಂತ ಹೆಚ್ಚೂ ಇಡಬಹುದು. ಆದ್ರೆ ವಾರ್ಷಿಕ ಗರಿಷ್ಠ ಠೇವಣಿ ಮೊತ್ತ 1,50,000ರೂ. ಕನಿಷ್ಠ ಹೂಡಿಕೆ ಅವಧಿ 5 ವರ್ಷ ಹಾಗೂ ಗರಿಷ್ಠ ಅವಧಿ 10 ವರ್ಷ. ಎಸ್ ಬಿಐ ಸಾಮಾನ್ಯ ಹೂಡಿಕೆದಾರರು ಠೇವಣಿಯಲ್ಲಿನ ಹೂಡಿಕೆ ಮೇಲೆ ಶೇ.5.5 ಬಡ್ಡಿದರ ಗಳಿಸುತ್ತಾರೆ. ಎಸ್ ಬಿಐ ನೆಟ್ ಬ್ಯಾಂಕಿಂಗ್ ಬಳಕೆದಾರರು ತೆರಿಗೆ ಉಳಿತಾಯ ಸ್ಥಿರ ಠೇವಣಿಯಲ್ಲಿ ಕೆಲವೇ ನಿಮಿಷಗಳಲ್ಲಿ ಹೂಡಿಕೆ ಮಾಡಬಹುದು.
ಇನ್ನಷ್ಟು ಓದಿರಿ:
ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆಯ Shock!
Onlineನಲ್ಲಿ ಖಾತೆ ತೆರೆಯೋದು ಹೇಗೆ?
1. SBI ನೆಟ್ ಬ್ಯಾಂಕಿಂಗ್ ಗೆ ಲಾಗ್ ಇನ್ ಆಗಿ.
2. ‘Fixed deposit’ಆಯ್ಕೆಯಡಿಯಲ್ಲಿ e-TDR/ eSTDR FD ಮೇಲೆ ಕ್ಲಿಕ್ ಮಾಡಿ.
3. ಆದಾಯ ತೆರಿಗೆ ಉಳಿತಾಯ ಯೋಜನೆಯಡಿಯಲ್ಲಿ e-TDR/ eSTDR ಮೇಲೆ ಕ್ಲಿಕ್ ಮಾಡಿ.
4. Proceed ಆಯ್ಕೆ ಮೇಲೆ ಕ್ಲಿಕ್ ಮಾಡಿ.
5. ಖಾತೆ, ಮೊತ್ತ ಹಾಗೂ Terms and conditionಗಳನ್ನು ಸ್ವೀಕರಿಸಿ ಆ ಬಳಿಕ Submit ಮೇಲೆ ಕ್ಲಿಕ್ ಮಾಡಿ.
ಎಷ್ಟು Tax ಉಳಿತಾಯವಾಗುತ್ತದೆ?
ಒಂದು ಹಣಕಾಸು ವರ್ಷದಲ್ಲಿ SBI ತೆರಿಗೆ ಉಳಿತಾಯ ಸ್ಥಿರ ಠೇವಣಿಯಲ್ಲಿ 1.5ಲಕ್ಷ ರೂ. ಹೂಡಿಕೆ ಮಾಡಿದ್ರೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. ಆದ್ರೆ, ಪ್ರತಿಯೊಬ್ಬರೂ ಒಂದು ವಿಷಯ ನೆನಪಿಡಬೇಕು, ನೀವು ಹೂಡಿಕೆ ಮಾಡಿದ ಹಣದ ಮೇಲಿನ ಬಡ್ಡಿಗೆ ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ಅನ್ವಯ ತೆರಿಗೆ ವಿಧಿಸಲಾಗುತ್ತದೆ.
ಒಂದು ಹಣಕಾಸು ಸಾಲಿನಲ್ಲಿ ಒಂದೇ ಬ್ಯಾಂಕಿನಲ್ಲಿ ನಿಮ್ಮ ಎಫ್ ಡಿ ಗಳ ಮೇಲಿನ ಬಡ್ಡಿ ಪಾವತಿ 10,000 ರೂ. ಮೀರಿದ್ರೆ ಆಗ ಬ್ಯಾಂಕ್ ಟಿಡಿಎಸ್ (TDS) ಕಡಿತ ಮಾಡುತ್ತದೆ. ಹೀಗಾಗಿ TDS ತಪ್ಪಿಸಲು ಅರ್ಜಿ ನಮೂನೆ 15ಜಿ (15G)ಅಥವಾ ಅರ್ಜಿ ನಮೂನೆ 15 ಎಚ್ (15H) ಸಲ್ಲಿಕೆ ಮಾಡಬೇಕು.
ಮತ್ತಷ್ಟು ಓದಿರಿ:
Share your comments