Mysore Pak : ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಪ್ರತಿಯೊಬ್ಬರು ಮೆಚ್ಚಿಕೊಂಡು ತಿನ್ನುವ ಆಹಾರ ಖಾದ್ಯ ಈ ಮೈಸೂರು ಪಾಕ್. ಇಂಥ ಮೈಸೂರು ಪಾಕ್ ಇದೀಗ ಮತ್ತೊಂದು ಗರಿಮೆಯನ್ನ ತನ್ನ ಮುಡಿಗೆ ಏರಿಸಿಕೊಂಡಿದೆ. ಏನು ಗೊತ್ತಾ ಇದನ್ನ ಓದಿರಿ
ಮೈಸೂರು ಎಂದ ತಕ್ಷಣ ಸಾಕಷ್ಟು ವಿಚಾರಗಳು ತಲೆಯಲ್ಲಿ ಮೂಡುತ್ತವೆ. ಅದರಲ್ಲಿ ಮೈಸೂರು ಪಾಕ್ ಕೂಡ ಒಂದು. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಪ್ರತಿಯೊಬ್ಬರು ಮೆಚ್ಚಿಕೊಂಡು ತಿನ್ನುವ ಆಹಾರ ಖಾದ್ಯ ಈ ಮೈಸೂರು ಪಾಕ್. ಇಂಥ ಮೈಸೂರು ಪಾಕ್ ಇದೀಗ ಮತ್ತೊಂದು ಗರಿಮೆಯನ್ನ ತನ್ನ ಮುಡಿಗೆ ಏರಿಸಿಕೊಂಡಿದೆ. ಏನು ಗೊತ್ತಾ ಇದನ್ನ ಓದಿರಿ
ನೀವು ಯಾವುದೇ ಭಾಗಕ್ಕೆ, ಯಾವುದೇ ಊರಿಗೆ ಹೋದರೂ ಅಲ್ಲೊಂದು ಏನಾದರೂ ವಿಶೇಷತೆ ಇರುವುದು ಸಾಮಾನ್ಯ. ಆದರೆ, ವಿಶೇಷತೆಯ ಕಾರಣಕ್ಕೆ ಆ ಊರು ಗುರುತಿಸುವಿಕೆಯನ್ನು ಪಡೆದುಕೊಂಡಿದ್ದರೆ, ಅದನ್ನು ಜಿಐ ಟ್ಯಾಗ್ ನೀಡಿ ಗುರುತಿಸಲಾಗುತ್ತದೆ.
ಅದೆ ತರದಲ್ಲಿ ಕೂಡ ಜಿಐ ಟ್ಯಾಗ್ ಪಡೆಯುವ ಮೂಲಕ ಭೌಗೋಳಿಕ ವಿಶೇಷತೆಗೆ ಕಾರಣವಾಗಿದ್ದ ಮೈಸೂರು ಪಾಕ್ ಇದೀಗ ಮತ್ತೊಂದು ಹೆಮ್ಮೆಯನ್ನ ತನ್ನ ಮುಡಿಗೆ ಏರಿಸಿಕೊಂಡಿದೆ.
ವಿಶ್ವದ ಬೀದಿಬದಿಯ ಉತ್ತಮ ಸಿಹಿ ಖಾದ್ಯಗಳಲ್ಲಿ (Best street foods sweets in the world) ಮೈಸೂರು ಪಾಕ್ 14ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಕರ್ನಾಟಕವನ್ನ ಅಂತರ್ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ.
ಭಾರತದಿಂದ ಒಟ್ಟು 3 ಖಾದ್ಯಗಳ ಆಯ್ಕೆ
ಟೇಸ್ಟ್ ಅಟ್ಲಾಸ್ (Taste Atlas) ಎನ್ನುವ ಮ್ಯಾಗಜಿನ್ ಇತ್ತೀಚಿಗೆ ಬಿಡುಗಡೆ ಮಾಡಿದ 50 Best Street Food Sweets in the World ಪಟ್ಟಿಯಲ್ಲಿ ಭಾರತದ 3 ಖಾದ್ಯಗಳು ಸ್ಥಾನ ಪಡೆದುಕೊಂಡಿವೆ.
ಮೈಸೂರು ಪಾಕ್ 14ನೇ ಸ್ಥಾನದಲ್ಲಿದ್ದರೆ. ಕುಲ್ಫಿ 18ನೇ ಸ್ಥಾನ ಹಾಗೂ ಕುಲ್ಫಿ ಫಲೂದ 32ನೇ ಸ್ಥಾನದಲ್ಲಿರುವ ಭಾರತದ ಆಹಾರ ಖಾದ್ಯಗಳಾಗಿವೆ.
ಇದೀಗ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ. ಅಲ್ಲದೇ 4.4 ರೇಟಿಂಗ್ ಪಡೆದ ಮೈಸೂರು ಪಾಕ್, ಆನ್ಲೈನ್ ಮಾರ್ಕೆಟ್ನಲ್ಲಿ ವಿಶ್ವದ 50 ತಿಂಡಿ ತಿನಿಸುಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
Share your comments