1. ಸುದ್ದಿಗಳು

ರಾಜಧಾನಿಗಿದ್ದ ‘ಸಿಲಿಕಾನ್ ವ್ಯಾಲಿ’ ಹೆಸರು ಬದಲಿಸಿ ಭಾರತದ ‘ಟೆಕ್ಹಳ್ಳಿ’ ಎಂದು ಮರುನಾಮಕರಣ!

ಬೆಂಗಳೂರು, ಭಾರತದ ಸಿಲಿಕಾನ್ ವ್ಯಾಲಿ... ಯಾರಾದರೂ ಹೀಗೆ ಹೇಳಿದ ಕೂಡಲೆ ಕನ್ನಡಿಗರ ಎದೆಯಗಲ ಹೆಮ್ಮೆಯಿಂದ ಒಂದಿಂಚು ಹೆಚ್ಚುತ್ತದೆ. ನಮ್ಮ ಬೆಂಗಳೂರು ಐಟಿ ಸಿಟಿ, ಭಾರತದ ಹೆಮ್ಮೆ ಎಂದೆಲ್ಲಾ ಬೀಗುತ್ತಿದ್ದರೆ ಅದೇನೋ ಖುಷಿ. ಆದರೆಸಿಲಿಕಾನ್ ವ್ಯಾಲಿ’ ಎಂಬ ಹೆಸರು ಅಥವಾ ಬಿರುದು ಯಾವ ಅರ್ಥದಲ್ಲೂ ಹೆಮ್ಮೆಯಲ್ಲ, ಗೌರವವೂ ಅಲ್ಲ ಎಂದು ದೇಶದ ಐಟಿ ವಲಯದ ದಿಗ್ಗಜರೇ ಹೇಳಿದ್ದಾರೆ. ಜೊತೆಗೆ ಇನ್ನುಮುಂದೆ ಬೆಂಗಳೂರನ್ನುಟೆಕ್ಹಳ್ಳಿ’ ಎಂದು ಕರೆಯೋಣ ಎಂದು ಸಲಹೆ ನೀಡಿದ್ದಾರೆ. ಈ ಮೂಲಕ ಐಟಿ ವಲಯದಲ್ಲಿ ಕನ್ನಡ ಸದ್ದು ಮಾಡಿದೆ.

ಹೌದಾ... ಹಾಗಾದರೆ ಇಷ್ಟು ದಿನ ಎಲ್ಲರೂ ಸಿಲಿಕಾನ್ ಸಿಟಿ, ಸಿಲಿಕಾನ್ ವ್ಯಾಲಿ ಎಂದೆಲ್ಲಾ ಕರೆಯುತ್ತಿದ್ದರೂ ಈ ದಿಗ್ಗಜರು ಎಲ್ಲಿ ಹೋಗಿದ್ದರು. ಇಷ್ಟು ದಿನಗಳೇಕೆ ಸುಮ್ಮನೆ ಕುಳಿತಿದ್ದರು ಎಂಬ ಪ್ರಶ್ನೆ ಮೂಡದೇ ಇರುವುದಿಲ್ಲ. ಆದರೆ, ನೆನಪಿರಲಿ ಬದಲಾವಣೆಗೆ ಒಂದು ಸಮಯವಿರುತ್ತದೆ. ವಿಚಾರ, ಆಲೋಚನೆಗಳು ಒಟ್ಟೊಟ್ಟಿಗೆ ಬೆರೆತು ಮಂಥನವಾದಾಗ ಹೊಸ ಕಲ್ಪನೆಗಳು ಹುಟ್ಟಿ ಬದಲಾವಣೆಗೆ ನಾಂದಿಯಾಗುತ್ತವೆ. ಈಗ ಅಂತಹ ಬದಲಾವಣೆಯ ಆಲೋಚನೆ ಬಂದದ್ದು ಮಹಿಂದ್ರ ಮತ್ತು ಮಹಿಂದ್ರ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ ಅವರ ತಲೆಯಲ್ಲಿ.

ಬೇರೆಯವರ ಹೆಸರೇಕೆ ಬೇಕು?

ಜೂನ್ 10ರಿಂದ ಬೆಂಗಳೂರು-ಸ್ಯಾನ್ಫ್ರಾನ್ಸಿಸ್ಕೊ ನಡುವೆ ನೇರ ವಿಮಾನ ಸೇವೆ ಆರಂಭವಾಗುವ ಸಾಧ್ಯತೆ ಇದೆ ಎಂಬ ಸುದ್ದಿ ವಾರದ ಹಿಂದೆ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ಈ ವಿಮಾನ ಸೇವೆಯಿಂದಭಾರತದ ಸಿಲಿಕಾನ್ ವ್ಯಾಲಿ ಮತ್ತು ಅಮೆರಿಕದ ಸಿಲಿಕಾನ್ ವ್ಯಾಲಿ (ಕ್ಯಾಲಿಫೋರ್ನಿಯಾ)’ ನಡುವಿನ ಪ್ರಯಾಣ ಸುಲಲಿತವಾಗಲಿದೆ ಎಂದು ಹೇಳಲಾಗಿತ್ತು. ಇದನ್ನು ಕೇಳಿದ ಆನಂದ್ ಮಹಿಂದ್ರ ಅವರಿಗೆ ಒಂದು ಪ್ರಶ್ನೆ ಕಾಡಿತು. ‘ಬೆಂಗಳೂರಿಗೆಭಾರತದ ಸಿಲಿಕಾನ್ ವ್ಯಾಲಿ' ಅಂತ ಯಾಕೆ ಕರೀಬೇಕು? ನಾವೇಕೆ ಅಮೆರಿಕದ ಹೆಸರನ್ನು ಕಾಪಿ ಮಾಡಬೇಕು? ಭಾರತದ ಹೈ-ಟೆಕ್ ರಾಜಧಾನಿಗೆ ನಮ್ಮದೇ ಆದ ಒಂದು ಹೆಸರನ್ನು ಇಡೋಕಾಗಲ್ವಾ?' ಅಂತ ಒಂದು ಟ್ವೀಟ್ ಮಾಡಿದರು. ಜೊತೆಗೆ ಟ್ವಿಟರ್ನಲ್ಲೇಬೆಂಗಳೂರು ಐ.ಟಿ. ಕ್ರಾಂತಿಗೆ ಸಂಬAಧಿಸಿದ ಒಂದು ಅಡಿಬರಹ ಕೊಡಿ' ಅಂತ ಒಂದು ಕ್ಯಾಪ್ಷನ್ ಸ್ಪರ್ಧೆಯನ್ನೇ ಶುರು ಮಾಡಿದರು. ಇದಕ್ಕೆ ಟ್ವೀಟಿಗರಿಂದ ನೂರಾರು ಅಡಿಬರಹಗಳು ಬಂದವು. ಆ ಪೈಕಿ ಅತ್ಯುತ್ತಮ ಎನಿಸಿದ ನಾಲ್ಕು ಅಡಿಬರಹಗಳನ್ನು ಆಯ್ಕೆ ಮಾಡಿ, ಅದರಲ್ಲಿ ಒಂದನ್ನು ಅಂತಿಮಗೊಳಿಸುವAತೆ ಆನಂದ್ ಮಹಿಂದ್ರ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ನಂದನ್ ನಿಲೆಕಣಿ ಅವರನ್ನು ಕೋರಿದರು. ಕೊನೆಗೆ ಈ ಇಬ್ಬರೂ ಕಾರ್ಪೊರೇಟ್ ದಿಗ್ಗಜರು ಟೆಕ್ಹಳ್ಳಿ (TecHalli) ಎಂಬ ಅಡಿಬರಹವನ್ನು ಅಯ್ಕೆ ಮಾಡಿದ್ದಾರೆ. ಈ ಟೆಕ್ಹಳ್ಳಿ ಹೆಸರನ್ನು ಸೂಚಿಸಿದವರು ಹೈದರಾಬಾದ್ನಲ್ಲಿ ಡಿಲಿವರಿ ಮ್ಯಾನೇಜರ್ ಅಗಿ ಕೆಲಸ ಮಾಡುತ್ತಿರುವ ಶ್ರೀನಿವಾಸ ರೆಡ್ಡಿ ಪಟ್ಲೊಲ್ಲಾ

ಬೇರೆಯವರೂ ನಮ್ಮ ಭಾಷೆ ಕಲಿಯಲಿ

ಟ್ವಿಟರ್ನಲ್ಲಿ ನಡೆದ ಚರ್ಚೆಯಲ್ಲಿ ಟ್ವೀಟಿಗರೊಬ್ಬರು, ‘ಟೆಕ್ಹಳ್ಳಿ ಪದದಲ್ಲಿರುವಹಳ್ಳಿಯ ಅರ್ಥ ಅನ್ಯ ಭಾಷಿಗರಿಗೆ ತಿಳಿಯಬೇಕಲ್ಲ ಎಂದು ಮಹಿಂದ್ರಾ ಅವರಿಗೆ ಕೇಳಿದರು. ಅದಕ್ಕೆ ಟ್ವಿಟರ್ನಲ್ಲೇ ಪ್ರತಿಕ್ರಿಯಿಸಿದ ಮಹಿಂದ್ರಾ ಅವರು, ‘ಕನ್ನಡದ ಶಬ್ದವನ್ನು ಎಲ್ಲರೂ ಕಲಿಯಲಿ. ಹಾಗೆ ನೋಡಿದರೆ ಇಂಗ್ಲಿಷ್ ಗೊತ್ತಿಲ್ಲದ ಸಾಕಷ್ಟು ಜನ ಜಗತ್ತಿನಲ್ಲಿದ್ದಾರೆ. ಅವರೆಲ್ಲ ಇಂಗ್ಲಿಷ್ ಪದಗಳನ್ನು ಕಲಿತಿಲ್ಲವೇ? ಹಾಗೇ ಕನ್ನಡ ಪದವನ್ನೂ ಕಲಿಯಲಿ’ ಅಂತ ಸ್ಪಷ್ಟವಾಗಿ ಹೇಳಿದ್ದಾರೆ.

ಸಿಲಿಕಾನ್ ವ್ಯಾಲಿ ಹೆಸರು ಹೇಗೆ ಬಂತು?

ಅಮೆರಿಕದ ಕ್ಯಾಲಿಫೋರ್ನಿಯಾಗೆ ಸಿಲಿಕಾನ್ ವ್ಯಾಲಿ ಎಂಬ ಹೆಸರು ಹೇಗೆ ಬಂತು? ಅದಕ್ಕೆ ಒಂದು ಕತೆಯೇ ಇದೆ... ಇಂಟೆಲ್ ಸೇರಿ ಕೆಲವು ಐಟಿ ಕಂಪನಿಗಳು 60ರ ದಶಕದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಕಂಪ್ಯೂಟರ್ ಚಿಪ್ಗಳನ್ನು ತಯಾರಿಸುತ್ತಿದ್ದವು. ಆ ಚಿಪ್ಗಳಿಗೆ ಮುಖ್ಯವಾಗಿಸಿಲಿಕಾನ್’ ಎಂಬ ರಾಸಾಯನಿಕ ಬಳಸುತ್ತಿದ್ದರು. ಹಾಗಾಗಿ ಅಲ್ಲಿನ ಉದ್ಯಮಿಗಳು ಈ ಪ್ರದೇಶಕ್ಕೆ ಸಿಲಿಕಾನ್ ವ್ಯಾಲಿ ಅಂತ ಕರೆಯುತ್ತಿದ್ದರು. ಬಳಿಕ 1971 ಜನವರಿಯಲ್ಲಿ ಒಬ್ಬ ಪತ್ರಕರ್ತ 'ಸಿಲಿಕಾನ್ ವ್ಯಾಲಿ' ಎಂಬ ಶೀರ್ಷಿಕೆಯಡಿ ಮೂರು ಸರಣಿ ಲೇಖನಗಳನ್ನು ಪ್ರಕಟಿಸಿದ. ಆಗ ಸಿಲಿಕಾನ್ ವ್ಯಾಲಿ ಹೆಸರು ಜಗತ್ತಿನಾದ್ಯಂತ ಚಾಲ್ತಿಗೆ ಬಂತು.

ಹಲವರ ಪರಿಶ್ರಮವಿದೆ

ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಎಂಬ ಹೆಸರು ಬಂದದ್ದು 90ರ ದಶಕದಲ್ಲ್ಲಿ. ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರ ಎಂದು ಕರೆಯಲಾಗುವ ಹೈ-ಟೆಕ್ ಉದ್ಯಮ ಭಾರತದಲ್ಲಿ 60ರ ದಶಕದಿಂಲೂ ಇತ್ತು. ಟಾಟಾ ಸಮೂಹಕ್ಕೆ ಸೇರಿದ ಒಂದು ಐ.ಟಿ. ಘಟಕ ಮುಂಬಯಿಯಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. 80-90ರ ದಶಕದಲ್ಲಿ ಅನೇಕ ಐ.ಟಿ ಉದ್ಯಮಿಗಳು ಅಮೆರಿಕದ ಸಿಟಿ ಬಸ್ಗಳಲ್ಲಿ, ಟ್ಯಾಕ್ಸಿಗಳಲ್ಲಿ ಸಂಚರಿಸಿ ಕಂಪನಿಗಳನ್ನು ಕಟ್ಟಿದರು. ಇಂದು ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂದು ಜನಪ್ರಿಯವಾಗಿದ್ದರೆ ಅದರ ಹಿಂದೆ ಅನೇಕ ಉದ್ಯಮಿಗಳ ಸಾಹಸ-ಪರಿಶ್ರಮ ಇದೆ.

 ಮಾಹಿತಿ: ಚುಟುಕು ವಿಡಿಯೋಸ್ Chutuku videos ಯುಟೂಬ್ ಚಾನಲ್

Published On: 12 June 2021, 04:38 PM English Summary: bengaluru is now techalli

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.