1. ಸುದ್ದಿಗಳು

ಅತ್ತಿಬೆಲೆ ಪಟಾಕಿ ಗೋಧಾಮಿಗೆ ಬೆಂಕಿ: ಅವಘಡಕ್ಕೆ ಇದೇ ಕಾರಣ ?

Hitesh
Hitesh
Atthibele Fireworks Godown Fire: Is this the reason for the accident?

ಈಚೆಗೆ ಸಂಭವಿಸಿದ ಅತ್ತಿಬೆಲೆ ಪಟಾಕಿ ಬೆಂಕಿ ಅವಘಡದಿಂದ 14 ಜನ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಈ ನಡುವೆ ಅವಘಡಕ್ಕೆ ಕಾರಣವಾದ ಅಂಶಗಳು ಬೆಳಕಿಗೆ ಬರುತ್ತಿವೆ.

ಕರ್ನಾಟಕದ ಆನೇಕಲ್‌ನಲ್ಲಿರುವ ಅತ್ತಿಬೆಲೆಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿತ್ತು.

ಅತ್ತಿಬೆಲೆ (Attibele) ಪಟಾಕಿ‌ ಗೋಡೌನ್‌ನಲ್ಲಿ (Fireworks godown) ಭಾರೀ ಪ್ರಮಾಣದ ಅಗ್ನಿ ದುರಂತ ಸಂಭವಿಸಿದೆ.

ಈ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ಮುಖ್ಯಮಂತ್ರಿ (Siddaramaiah) ಸಿದ್ದರಾಮಯ್ಯ ಅವರು  ಅತ್ತಿಬೆಲೆಯ ಅಗ್ನಿದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದರು.

ಅತ್ತಿಬೆಲೆ ಅಗ್ನಿದುರಂತ (Atthibele Agnipurta)ದ ಘಟನೆಯ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

ಮೃತರ ಕುಟುಂಬಕ್ಕೆ ಈಗಾಗಲೇ ಘೋಷಿಸಿರುವಂತೆ ಸರ್ಕಾರದ ವತಿಯಿಂದ 5 ಲಕ್ಷ ರೂಪಾಯಿ ನೀಡಲಾಗುವುದು

ಹಾಗೂ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು ಎಂದಿದ್ದಾರೆ. 

ಅಕ್ಟೋಬರ್ 07 ರಂದು ಸುಮಾರು ಮಧ್ಯಾಹ್ನ 3.15 ರಿಂದ 3.30ರ ವೇಳೆ ಬೆಂಕಿ ಅನಾಹುತ ನಡೆದಿದೆ.

ಇದು ಅತ್ಯಂತ ದುರದೃಷ್ಟಕರ ಘಟನೆ. ರಾಮುಸ್ವಾಮಿರೆಡ್ಡಿ ಎಂಬುವರು ಪರವಾನಗಿ ಪಡೆದು ಪಟಾಕಿ ಮಾರಾಟದ ವ್ಯವಹಾರ ಮಾಡುತ್ತಿದ್ದರು.  

3 ಗಂಟೆ ಸಮಯದಲ್ಲಿ ತಮಿಳುನಾಡಿನಿಂದ ಟ್ರಕ್‌ಗಳಲ್ಲಿ ಪಟಾಕಿಗಳು ಬಂದಿದ್ದು, ಪಟಾಕಿಗೆ ಹೇಗೆ ಬೆಂಕಿ ತಗುಲಿದೆ ಎನ್ನುವ ನಿಖರ ಕಾರಣ ತಿಳಿದುಬಂದಿಲ್ಲ.

ಅಧಿಕಾರಿಗಳು ಇಲ್ಲಿ ಪರಿಶೀಲಿಸಿದ ಮೇಲೆ,  ಸ್ಪೋಟಕಗಳ ಮಾರಾಟ ಮಾಡುವ ಗೋದಾಮಿನಲ್ಲಿ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ

ಎಂದು ಕಂಡುಬಂದಿದೆ ಎಂದು ಹೇಳಿದ್ದಾರೆ.

ಪರವಾನಾಗಿಯನ್ನು ಸೆಪ್ಟೆಂಬರ್ ತಿಂಗಳಲ್ಲಿ  ದಿ.13.9.2023 ರಂದು ನವೀಕರಿಸಲಾಗಿದೆ.

ದಿ:31.10.2028 ರವರೆಗೆ ಜಾರಿಯಲ್ಲಿದೆ.

ಮತ್ತೊಂದು ಪರವಾನಗಿ 18.1.2021 ರಂದು 28.1.2026 ರವರೆಗೆ ಜಾರಿಯಲ್ಲಿರಲಿದೆ.

ಜಯಮ್ಮ, ಕೋಂ ದಿ. ಸಿದ್ದಾರೆಡ್ಡಿ, ಅನಿಲ್ ರೆಡ್ಡಿ ಬಿನ್ ಸಿದ್ದಾರೆಡ್ಡಿ

ಎಂಬುವವರು ಈ ಸ್ಥಳದ ಮಾಲೀಕರು ಎಂದು ವಿವರಿಸಿದ್ದಾರೆ.

ಗೋದಾಮಿನ ಸ್ಥಳ ಬಹಳ ಕಿರಿದಾಗಿದ್ದು, ಇದರಲ್ಲಿ 14 ಜನರು ಮೃತಪಟ್ಟಿದ್ದಾರೆ.

ಎಲ್ಲರೂ ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿಯವರು.

ಅವರಲ್ಲಿ ಬಹುತೇಕರು ವಿದ್ಯಾರ್ಥಿಗಳು. ರಜಾ ಸಮಯದಲ್ಲಿ ಓದಿಗಾಗಿ ಹಣ ಸಂಪಾದನೆಗಾಗಿ ಬಂದವರು.

ಒಬ್ಬ ಮ್ಯಾನೇಜರನ್ನು ಹೊರತುಪಡಿಸಿ ಯಾರೂ ಖಾಯಂ ನೌಕರರಿಲ್ಲ. 

ಸ್ಫೋಟಕಗಳಿಗೆ ಅಗತ್ಯವಾದ ಯಾವುದೇ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ.

ಗೋದಾಮು ಅಧಿಕೃತವೋ ಅಲ್ಲವೋ ಎಂಬುದನ್ನು ಪರಿಶೀಲಿಸಬೇಕು.

ಹಿಂಭಾಗದಲ್ಲಿ 200 ಅಡಿಗಳವರೆಗೂ ಗೋದಾಮು ಇದೆ.  ಎಲ್ಲೂ ಕೂಡ ಅಗ್ನಿ ಶಾಮಕಗಳನ್ನು ಅಳವಡಿಸಿಲ್ಲ.

ಒಟ್ಟಾರೆ ಮೇಲ್ನೋಟಕ್ಕೆ ಪರವಾನಗಿ ಹೊಂದಿದವರ ನಿರ್ಲಕ್ಷ್ಯ ಎದ್ದುಕಾಣುತ್ತಿದೆ ಎಂದರು.

ಘಟನೆಯ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ. 14 ಜನ ಮೃತಪಟ್ಟಿರುವುದು ದೊಡ್ಡ ದುರಂತ.

ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ, ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ.

ಅವರೆಲ್ಲರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ, ಮತ್ತೆ ಇಂತಹ ದುರ್ಘಟನೆಗಳು

ಮರುಕಳಿಸದಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. 

ವಿವಿಧ ಸೆಕ್ಷನ್‌ಗಳಡಿ ದೂರು ದಾಖಲು

ರಾಮುಸ್ವಾಮಿರೆಡ್ಡಿ, ನವೀನ್, ಅನಿಲ್ ರೆಡ್ಡಿ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾಗಿದೆ.

ಐಪಿಸಿ ಸೆಕ್ಷನ್ 285, 286 ,337, 338, 437, 304 ಎಫ್ ಐ.ಆರ್ ಕೂಡ ದಾಖಲಾಗಿದೆ.

ಪ್ರಕರಣದ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು.

ಜಿಲ್ಲಾಧಿಕಾರಿಗಳನ್ನು ವಿಚಾರಿಸಿದಾಗ ಅಗ್ನಿಶಾಮಕ ದಳ ಹಾಗೂ ಪೊಲೀಸ್ ನಿರಾಕ್ಷೇಪಣಾ ಪತ್ರ ನೀಡಿದ್ದರು ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳು ಖುದ್ದಾಗಿ ಭೇಟಿ ನೀಡಬೇಕಾಗಿತ್ತು. 

ನಿರಾಕ್ಷೇಪಣಾ ಪತ್ರ ನೀಡಿದವರು ಸ್ಫೋಟಕಗಳ ಕಾಯ್ದೆಯಲ್ಲಿನ ಅಗತ್ಯಗಳನ್ನು ನೋಡಿ ಕೊಡಬೇಕಿತ್ತು.

ಏಕೆಂದರೆ ಪರವಾನಗಿಯನ್ನು ಸ್ಫೋಟಕಗಳ ಕಾಯ್ದೆಯಡಿಯಲ್ಲಿ ನೀಡಲಾಗಿದೆ.

ಜಿಲ್ಲಾಧಿಕಾರಿಗಳೂ ಕೂಡ ಸ್ಥಳ ಪರಿಶೀಲನೆ ಮಾಡಿ ನೀಡಬೇಕಿತ್ತು.

ಈ ಬಗ್ಗೆ ಸೂಕ್ತ ಪರಿಶೀಲನೆಯಾಗಬೇಕು ಎಂದರು.

ದೀಪಾವಳಿ ಹಬ್ಬ ಹತ್ತಿರವಿರುವುದರಿಂದ ಮುಂದೆ ಅಗತ್ಯ ಕ್ರಮಗಳನ್ನು ಚರ್ಚೆ ಮಾಡಿ ಕೈಗೊಳ್ಳಲಾಗುವುದು.

ತಮಿಳುನಾಡಿನ ಆರೋಗ್ಯ ಸಚಿವರೂ ಆಗಮಿಸಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಅವರೂ ಕೂಡ ತಲಾ 3 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ ಎಂದು ವಿವರಿಸಿದರು. 

ಅತ್ತಿಬೆಲೆ ಪಟಾಕಿ ಬೆಂಕಿ ಅವಘಡಕ್ಕೆ ಇದೇ ಕಾರಣ

ಅತ್ತಿಬೆಲೆ ಪಟಾಕಿ ಬೆಂಕಿ ಅವಘಡಕ್ಕೆ ಹಲವು ಕಾರಣಗಳನ್ನು ಹೇಳಲಾಗುತ್ತಿದೆ.

ಅವಘಡಕ್ಕೆ ಮುಖ್ಯವಾಗಿ ಇದನ್ನು ನಿರ್ವಹಿಸುತ್ತಿದ್ದವರ ನಿರ್ಲಕ್ಷ್ಯ ಕಾರಣ ಎನ್ನುವುದು ಪೊಲೀಸ ಪ್ರಾಥಮಿಕ ತನಿಖೆಯಲ್ಲೇ ಬಹಿರಂಗವಾಗಿದೆ.

ಅಲ್ಲದೇ ಪಟಾಕಿ ಗೋಧಾಮು  ಜನವಸತಿ ಪ್ರದೇಶದಲ್ಲಿ ಇದ್ದು, ಕಸಕ್ಕೆ ಹಾಕಲಾಗಿದ್ದ

ಬೆಂಕಿಯ ಕಿಡಿ ಪಟಾಕಿಗೆ ತಾಗಿ ಅದರಿಂದ ಉಳಿದ ಪಟಾಕಿ ಬಾಕ್ಸ್‌ಗಳಿಗೆ ಬೆಂಕಿ ತಾಗಿದೆ ಎನ್ನಲಾಗಿದೆ. 

ಇನ್ನು ಅವಘಡ  ನಡೆದ ಪಟಾಕಿ ಗೋಧಾಮಿಗೆ ಮಾತ್ರ ಲೈಸೆನ್ಸ್ ನೀಡಿದ್ದು ಮಾರಾಟಕ್ಕೆ ಮಾತ್ರ.

ಆದರೆ, ನಕಲಿ ದಾಖಲೆ ಮಾಡಿಕೊಂಡು ಪಟಾಕಿ ಸ್ಟೋರ್ ಅಂದರೆ ಪಟಾಕಿಗಳನ್ನು ಸಂಗ್ರಹಿಸಿ ಇರಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಶೋರೂಮ್ನ ಮೂಲಕ ಪಟಾಕಿ ಮಾರಾಟ ಮಾಡಲು ಮಾತ್ರ ಅನುಮತಿ ಕಲ್ಪಿಸಲಾಗಿತ್ತು.  

ಆದರೆ ಅದರಲ್ಲಿ ಒಂದು ಸಾವಿರ ಕೆ.ಜಿ ಪಟಾಕಿ ಮಾತ್ರ ಇರಿಸುವ ನಿಯಮವನ್ನೂ ಉಲ್ಲಂಘನೆ ಮಾಡಲಾಗಿದೆ.  

ದುರಂತ ಸಂಭವಿಸಿದ ನಂತರ ಎಚ್ಚೆತ್ತು ಕೊಂಡಿರುವ ಅಗ್ನಿಶಾಮಕ‌ 

ದಳದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಪರವಾನಗಿ ಹಾಗೂ ನಿಯಮಗಳ ಪರಿಪಾಲನೆ ಮಾಡಲಾಗುತ್ತಿದೆಯೇ ಎಂದು ನೋಡುತ್ತಿದ್ದಾರೆ.

ಒಟ್ಟು 35ಕ್ಕೂ ಹೆಚ್ಚು ಪಟಾಕಿ ಅಂಗಡಿಗಳ ಪರವಾನಗಿ ಪರಿಶೀಲನೆ ನಡೆಸಲಾಗಿದ್ದು,

ತನಿಖೆ ವೇಳೆ ಆರೋಪಿಗಳು ಮಾಡಿರುವ ತಪ್ಪು ರುಜುವಾತಾಗಿದೆ.  

ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕ್ಕೆ ಎಚ್‌ಡಿಕೆ ಆಗ್ರಹ

ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಡಿಎಸ್‌ ಮುಖಂಡ ಎಚ್‌.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.  

ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ಪಟಾಕಿ ಸಂಗ್ರಹಗಾರದಲ್ಲಿ ಸಂಭವಿಸಿರುವ

ಅಗ್ನಿ ದುರಂತದಲ್ಲಿ 14 ಜನ ಕಾರ್ಮಿಕರು ದುರಂತ ಸಾವು ಕಂಡಿರುವ ಘಟನೆಯ ಬಗ್ಗೆ ತಿಳಿದು ನನಗೆ ತೀವ್ರ ದಿಗ್ಭ್ರಮೆ ಉಂಟಾಗಿದೆ.

ದೀಪಾವಳಿಗೆ ಬದುಕು ಕಟ್ಟಿಕೊಳ್ಳಲು ಹೊರಟಿದ್ದ ಈ ಮುಗ್ಧ ಜೀವಗಳು ಬೆಂಕಿಯ

ಕೆನ್ನಾಲಿಗೆಗೆ ಸಿಕ್ಕಿ ಬಲಿಯಾಗಿರುವ ಘಟನೆ ನನ್ನ ಮನವನ್ನು ಕಲಕಿದೆ.

ಜೀವ ಕಳೆದುಕೊಂಡ ಎಲ್ಲಾ ನತದೃಷ್ಟ ಕಾರ್ಮಿಕರ ಆತ್ಮಕ್ಕೆ ಚಿರಶಾಂತಿ ದೊರಕಲಿ

ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕುಟುಂಬಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಸಂಭವಿಸಿರುವ ಈ ಘಟನೆ ಅನೇಕ ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ.

ಸುರಕ್ಷತೆ ಬಗ್ಗೆ ಮುನ್ನೆಚ್ಚರಿಕೆ ವಹಿಸದೆ ಇದ್ದಿದ್ದೇ ದುರಂತಕ್ಕೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ಈ ಬಗ್ಗೆ ರಾಜ್ಯ ಸರಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು

ಹಾಗೂ ಮುಂದೆ ಇಂತಹ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೇ ಬದುಕು ಕಳೆದುಕೊಂಡ ಕುಟುಂಬಗಳಿಗೆ ರಾಜ್ಯ ಸರಕಾರ ಆಸರೆಯಾಗಿ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.   

Published On: 09 October 2023, 02:32 PM English Summary: Atthibele Fireworks Godown Fire: Is this the reason for the accident?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.