ಬಾಲಿವುಡ್‌ನ ಹಿರಿಯ ನಟಿ ಆಶಾ ಪರೇಖ್ ಅವರು 2022 ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವೆಂದು ಪರಿಗಣಿಸಲಾಗಿದೆ.ಭಾರತೀಯ ಚಿತ್ರರಂಗವನ್ನು ಇಂದಿನ ಸ್ಥಿತಿಗೆ ತರುವಲ್ಲಿ ಆಶಾ ಪರೇಖ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಈ ಸಾಧನೆಯನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.
ಈ ರಾಜ್ಯಕ್ಕೆ ಮತ್ತೇ ಯೆಲ್ಲೋ ಅಲರ್ಟ್ ನೀಡಿದ ಹವಾಮಾನ ಇಲಾಖೆ..ಭಾರೀ ಮಳೆ ಸಾಧ್ಯತೆ
ಆಶಾ ಪರೇಖ್ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ 52 ನೇ ವ್ಯಕ್ತಿಯಾಗಲಿದ್ದಾರೆ.ಆಶಾ ಭೋಂಸ್ಲೆ, ಹೇಮಾ ಮಾಲಿನಿ, ಉದಿತ್ ನಾರಾಯಣ್ ಝಾ, ಪೂನಂ ಧಿಲ್ಲೋನ್ ಮತ್ತು ಟಿಎಸ್ ನಾಗಭರನ್ ಅವರನ್ನೊಳಗೊಂಡ ದಾದಾಸಾಹೇಬ್ ಫಾಲ್ಕೆ ಸಮಿತಿಯು 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಆಶಾ ಪರೇಖ್ ಅವರಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಶ್ರೀಮತಿ ಆಶಾ ಪರೇಖ್ ಪ್ರಸಿದ್ಧ ಚಲನಚಿತ್ರ ನಟಿ, ನಿರ್ದೇಶಕಿ ಮತ್ತು ನಿರ್ಮಾಪಕಿ ಮತ್ತು ಒಬ್ಬ ನಿಪುಣ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ. ಬಾಲನಟಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ದಿಲ್ ದೇಕೆ ದೇಖೋ ಚಿತ್ರದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.
ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ, ಇಂದಿನ ಬೆಲೆ ಎಷ್ಟೇಂದು ಮನೆಯಲ್ಲಿ ಕುಳಿತು ತಿಳಿಯಿರಿ
ಮತ್ತು 95 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕತಿ ಪತಂಗ್, ತೀಸ್ರಿ ಮಂಜಿಲ್, ಲವ್ ಇನ್ ಟೋಕಿಯೋ, ಆಯಾ ಸಾವನ್ ಝೂಮ್ ಕೆ, ಆನ್ ಮಿಲೋ ಸಜ್ನಾ, ಮೇರಾ ಗಾಂವ್ ಮೇರಾ ದೇಶ್ ಮುಂತಾದ ಪ್ರಸಿದ್ಧ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಹಣದಿಂದ ನನ್ನ ನೆಮ್ಮದಿ ಪೂರ್ಣ ಹಾಳಾಗಿದೆ: ಕೇರಳ 25 ಕೋಟಿ ಲಾಟರಿ ಗೆದ್ದ ಅನೂಪ್
ಶ್ರೀಮತಿ ಪರೇಖ್ ಅವರು ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಅವರಿಗೆ 1992 ರಲ್ಲಿ ಈ ಪ್ರಶಸ್ತಿ ನೀಡಲಾಯಿತು. ಅವರು 1998-2001 ರವರೆಗೆ ಚಲನಚಿತ್ರ ಪ್ರಮಾಣೀಕರಣಕ್ಕಾಗಿ ಕೇಂದ್ರೀಯ ಮಂಡಳಿಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.
Share your comments