ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಖಾಲಿಯಿರುವ 8 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 20 ರೊಳಗೆಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಪೋಸ್ಟ್ ಗ್ರಾಜುಯೇಟ್ ಟೀಚರ್ (ಪಿಜಿಟಿ), ಪದವೀಧರ ಶಿಕ್ಷಕರು (ಟಿಜಿಟಿ) ಮತ್ತು ಪ್ರಾಥಮಿಕ ಶಿಕ್ಷಕ (ಪಿಆರ್‌ಟಿ) ಹುದ್ದೆಗಳಿಗೆ ಅಭ್ಯರ್ಥಿಗಳು ದಿನಾಂಕ 01-10-2020 ರಿಂದ 20-10-2020 ರವರೆಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ನಂತರದಲ್ಲಿ ಬಂದ ಆನ್‌ಲೈನ್ ಅಥವಾ ಆಫ್‌ಲೈನ್ ಎರಡು ಮಾದರಿಯಲ್ಲಿ ಅರ್ಜಿ ಸ್ವೀಕರಿಸಲಾಗುವುದಿಲ್ಲ.
ವಿಷಯವಾರು ಹುದ್ದೆಗಳು, ವಯಸ್ಸು, ಅರ್ಹತೆ, ಸೇರಿದಂತೆ ಇನ್ನಿತರ ಮಾಹಿತಿಗೆ ವೆಬ್‌ಸೈಟ್ awesindia.com ಗೆ ಭೇಟಿ ನೀಡಬಹುದು.
ಅಪ್ಲಿಕೇಶನ್ ಸಲ್ಲಿಕೆ ಆರಂಭ ದಿನಾಂಕ : 01-10-2020, ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 20-10-2020, ಸ್ಕ್ರೀನಿಂಗ್ ಟೆಸ್ಟ್: ನವೆಂಬರ್ 21, 22, 2020
ಶೈಕ್ಷಣಿಕ ಅರ್ಹತೆಗಳು:
ಪಿಜಿಟಿ ಹುದ್ದೆಗಳು: ಪೋಸ್ಟ್ ಗ್ರಾಜುಯೇಟ್ ವಿದ್ಯಾರ್ಹತೆಯನ್ನು ಸಂಬಂಧಪಟ್ಟ ವಿಷಯದಲ್ಲಿ ಪಾಸ್ ಮಾಡಿರಬೇಕು. ಯಾವ ವಿಷಯದ ಶಿಕ್ಷಕರಿಗಾಗಿ ಅರ್ಜಿ ಸಲ್ಲಿಸಬೇಕೋ ಆ ವಿಷಯದ ಪದವಿಯಲ್ಲಿ ಶೇಕಡ 50 ರಷ್ಟು ಅಂಕಗಳೊಂದಿಗೆ, ಪೋಸ್ಟ್ ಗ್ರಾಜುಯೇಟ್ ಅನ್ನು ಶೇಕಡ 50 ರಷ್ಟು ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
ಟಿಜಿಟಿ ಮತ್ತು ಪಿಆರ್‌ಟಿ ಹುದ್ದೆಗಳು: ಸಂಬಂಧಿಸಿದ ವಿಷಯದಲ್ಲಿ ಪದವಿ ಪಾಸ್ ಮಾಡಿರಬೇಕು.
ವಯೋಮಿತಿ:
ಫ್ರೆಶ್ ಕ್ಯಾಂಡಿಡೇಟ್‌ಗಳು ಅರ್ಜಿ ಸಲ್ಲಿಸಲು 40 ವರ್ಷ ಮೀರಿರಬಾರದು, ಅನುಭವಿ ಶಿಕ್ಷಕರು ಅರ್ಜಿ ಸಲ್ಲಿಸಲು 57 ವರ್ಷ ಮೀರಿರಬಾರದು.
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳನ್ನು ಹೊಂದಿರುತ್ತದೆ. ಸ್ಕೀನಿಂಗ್ ಪರೀಕ್ಷೆ, ಸಂದರ್ಶನ, ಟೀಚಿಂಗ್ ಸ್ಕಿಲ್ಸ್ ಮತ್ತು ಕಂಪ್ಯೂಟರ್ ಪ್ರೊಫೀಶಿಯನ್ಸಿ ಟೆಸ್ಟ್. ಅಭ್ಯರ್ಥಿಗಳು ಆನ್‌ಲೈನ್ ಸ್ಕ್ರೀನಿಂಗ್ ಟೆಸ್ಟ್ ಗೆ ಹಾಜರಾಗಬೇಕು. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಸಂದರ್ಶನಕ್ಕೆ ಹಾಜರಾಗಬೇಕು. ನಂತರ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು ಟೀಚಿಂಗ್ ಸ್ಕಿಲ್ ಮತ್ತು ಕಂಪ್ಯೂಟರ್ ಪ್ರೊಫೀಶಿಯನ್ಸಿ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ awesindia.com ನಲ್ಲಿ ನೋಡಬಹುದು.
Share your comments