1. ಸುದ್ದಿಗಳು

ಅಡಿಕೆಗೆ ಎಲೆಚುಕ್ಕಿ, ಹಳದಿ ರೋಗ; ತಜ್ಞರ ಸಮಿತಿ ಭೇಟಿ – ರೋಗದ ಮೂಲ ಪರಿಶೀಲನೆಯೇ ಸವಾಲು!

Hitesh
Hitesh
Areca palm spot, yellow blight; Expert committee meeting - the challenge is to check the root of the disease!

ಅಡಿಕೆಯಲ್ಲಿ ಕಂಡು ಬಂದಿರುವ ಹಳದಿ ಎಲೆ ರೋಗ ಹಾಗೂ ಎಲೆಚುಕ್ಕಿ ರೋಗದ ಬಗ್ಗೆ ಅಧ್ಯಯ ಮಾಡಿ, ವರದಿ ನೀಡುವ ಉದ್ದೇಶದಿಂದ ವೈಜ್ಞಾನಿಕ

ಸಮಿತಿ ಸದಸ್ಯರು ಸುಳ್ಯಾ ತಾಲ್ಲೂಕಿನ ಮರ್ಕಂಜ, ರೆಂಜಾಳದ ಎಲೆಚುಕ್ಕೆ ಮತ್ತು ಹಳದಿ ಎಲೆ ರೋಗ ಪೀಡಿತ ಅಡಿಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  

ರಾಜ್ಯದಲ್ಲಿ ಧಾರಾಕಾರ ಮಳೆ; ಅಡಿಕೆ ಬೆಳೆಗಾರರಿಗೆ ಸಂಕಷ್ಟ! 

ಈ ಸಮಿತಿಯು ಅಡಿಕೆಯಲ್ಲಿ ಕಂಡುಬಂದಿರುವ ರೋಗದ ಬಗ್ಗೆ ಅಧ್ಯಯ ನಡೆಸಿ, ವರದಿ ನೀಡಲಿದೆ.  

ರಾಜ್ಯದ ಮಲೆನಾಡು ಸೇರಿದಂತೆ ಅಡಿಕೆಯನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳಲ್ಲಿ ಅಡಿಕೆಯಲ್ಲಿ ಹಳದಿ ಮತ್ತು ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿತ್ತು.

ಇದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ತಜ್ಞರ ಸಮಿಯನ್ನು ರಚನೆ ಮಾಡಿತ್ತು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಹ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು.

Ration card: “ದತ್ತಾ” ಬದಲು “ಕುತ್ತಾ”; ಅಧಿಕಾರಿ ಮುಂದೆ ಆತ ಮಾಡಿದ್ದೇನು ಗೊತ್ತಾ! 

ರಾಜ್ಯ ಸರ್ಕಾರದ ಮನವಿಯ ಆಧಾರದ ಮೇಲೆ ಸಮಿತಿಯನ್ನು ರಚಿಸಲಾಗಿತ್ತು.

ಅಲ್ಲದೇ ಔಷಧಿ ಸಿಂಪಡಣೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 10 ಕೋಟಿ ರೂಪಾಯಿ ಅನುದಾನ ನೀಡುವುದಾಗಿಯೂ ತಿಳಿಸಿದ್ದರು.

ಕೇಂದ್ರ ಮಟ್ಟದ ಸಮಿತಿಯು ಎಲೆ ಚುಕ್ಕೆ ರೋಗ ಮತ್ತು ಹಳದಿ ಎಲೆ ರೋಗ ಕುರಿತು ಮಾಹಿತಿ ಸಂಗ್ರಹಿಸಿ, ಅಧ್ಯಯನ ಮಾಡಿ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ರೈತರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಿದರೆ ಜೋಕೆ: ಆರ್‌. ಅಶೋಕ್‌ ಎಚ್ಚರಿಕೆ!  

ಮರ್ಕಂಜದ ಮಾಪಲತೋಟ , ಬಲ್ಕಾಡಿಮತ್ತು ದಾಸರ ಬೈಲು ಪ್ರದೇಶದ ಕೃಷಿಕರ ತೋಟಕ್ಕೆ ಭೇಟಿ ನೀಡಿದ ತಂಡದ ಸದಸ್ಯರು ಅಡಿಕೆ ಸೋಗೆ,

ಅಡಿಕೆ ಮರ ಹಾಗೂ ಅಡಿಕೆಯ ಬಗ್ಗೆ  ರೈತರಿಂದ ಮಾಹಿತಿ ಸಂಗ್ರಹಿಸಿದ್ದಾರೆ.  

ಹಳದಿ ಎಲೆ ರೋಗ ಮತ್ತು‌ ಎಲೆ ಚುಕ್ಕಿ ರೋಗ ಎರಡೂ ಒಂದೇ ತೋಟದಲ್ಲಿ ಇರುವ ಸಂದರ್ಭದಲ್ಲಿ ಅವುಗಳನ್ನು ಪ್ರತ್ಯೇಕಿಸಿ ಗುರುತಿಸಲು ಕಷ್ಟವಾಗುವುದರ ಬಗ್ಗೆ ಕೃಷಿಕರು ತಜ್ಞರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಯಾವ ರೋಗ ಇದೆ ಎಂದು ಪತ್ತೆ ಮಾಡಲು ಸಾಧ್ಯವಾಗದೆ ಇರುವುದರಿಂದ ನಿರ್ದಿಷ್ಟ ರೋಗವನ್ನು ತಡೆಯುವುದಕ್ಕೆ ಮುಂಜಾಗ್ರತಾ ಕ್ರಮವಾಗಿ ಔಷಧಿಯನ್ನು ಸಿಂಪಡಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಹೇಳಿದ್ದಾರೆ.

ರಾಜ್ಯದಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ!

Areca palm spot, yellow blight; Expert committee meeting - the challenge is to check the root of the disease!

ಈ ತಜ್ಞರ ಸಮಿತಿಯಲ್ಲಿ ಸಿ. ಪಿ.ಸಿ ಆರ್.ಐ., ಕಾಸರಗೋಡಿನ ಪ್ರಭಾರ ನಿರ್ದೇಶಕ ಡಾ. ಮುರಳೀಧರನ್, ಕಲ್ಲಿಕೋಟೆಯ ಅಡಿಕೆ ಮತ್ತು ಸಾಂಬಾರು ಬೆಳೆಗಳ

ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಹೋಮಿ ಚೆರಿಯನ್, ಸಿ.ಪಿ.ಸಿ.ಆರ್.ಐ. ಕಾಸರಗೋಡಿನ ಬೆಳೆ ಸಂರಕ್ಷಣಾ ವಿಭಾಗದ ಮುಖ್ಯಸ್ಥ

ಡಾ. ವಿನಾಯಕ ಹೆಗ್ಡೆ, ತೋಟಗಾರಿಕೆ ಉಪ ನಿರ್ದೇಶಕ ಡಾ. ಎಚ್. ಆರ್. ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

Railways Plan: ರೈಲ್ವೆ ಯೋಜನೆಗಳ ತ್ವರಿತ ಜಾರಿಗೆ ಸಮಿತಿ ರಚನೆ!

Published On: 21 November 2022, 04:05 PM English Summary: Areca palm spot, yellow blight; Expert committee meeting - the challenge is to check the root of the disease!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.