1. ಸುದ್ದಿಗಳು

ನೇಕಾರರಿಗೆ 2 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನ

Handloom

ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಕೋವಿಡ್-19 ಕಾರಣದಿಂದ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯುತ್ ಚಾಲಿತ ನೇಕಾರರಿಗೆ  2,000 ಆರ್ಥಿಕ ನೆರವು ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯುತ್‍ ಚಾಲಿತ ಘಟಕ (ಮಗ್ಗ)ಗಳಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಕೂಲಿ ಕಾರ್ಮಿಕನಿಗೆ ಒಂದು ಬಾರಿ ಮಾತ್ರ ಈ ಆರ್ಥಿಕ ನೆರವು ನೀಡಲಾಗುವುದು. ಅರ್ಹ ಫಲಾನುಭವಿಗಳು ಈಗಾಗಲೇ ರಿಯಾ‌ಯಿತಿ ದರದಲ್ಲಿ ವಿದ್ಯುತ್ ಸಹಾಯಧನ ಪಡೆಯುತ್ತಿರುವ ವಿದ್ಯುತ್ ಚಾಲಿತ ಘಟಕದ ಮಾಲೀಕರಿಂದ ಅರ್ಜಿ ಸಲ್ಲಿಸಿದ್ದಾರೆ. ಈವರೆಗೂ ಅರ್ಜಿ ಸಲ್ಲಿಸದೆ ಇರುವ ಕೂಲಿ ನೇಕಾರರ ಅಗತ್ಯ ದಾಖಲೆಗಳನ್ನು ವಿದ್ಯುತ್ ಚಾಲಿತ ಘಟಕದ ಮಾಲೀಕರು ಡಿ. 31ರೊಳಗಾಗಿ ಸಲ್ಲಿಸಬೇಕು.

ಕೈಮಗ್ಗ ಮತ್ತು ಜವಳಿ ಇಲಾಖೆಯು ನೇಕಾರರಿಗೆ ನೆರವು ನೀಡಲು ಹಾಗೂ ನೇಯ್ಗೆ ವೃತ್ತಿ ಮುಂದುವರಿಸಿಕೊಂಡು ಹೋಗಲು ಅನುವಾಗುವಂತೆ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆ, ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ ವಿದ್ಯುತ್ ಮಗ್ಗ ಘಟಕ ಸ್ಥಾಪನೆಗಾಗಿ ಸಹಾಯಧನ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಿದೆ. ಅರ್ಜಿಯನ್ನು ಡಿ.31ರೊಳಗಾಗಿ ಜಾಲತಾಣ njn.karnatakadht.org.weavers/ej-21oom-apply ಮೂಲಕ ಸಲ್ಲಿಸಬಹುದು.

ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯಿತಿ, ತುಮಕೂರು ಅಥವಾ 0816-2275370 ಸಂಪರ್ಕಿಸಬಹುದು.

Published On: 21 December 2020, 05:57 PM English Summary: Application invited from handloom weaver

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.