1. ಸುದ್ದಿಗಳು

ಆಗಸ್ಟ್ 31 ರವರೆಗೆ ಪುಸ್ತಕಗಳ ಆಯ್ಕೆಗಾಗಿ ಸಲ್ಲಿಸುವ ಅವಧಿ ವಿಸ್ತರಣೆ

book

ಕೊರೋನಾ ವೈರಸ್ (ಕೊವೀಡ್-19) ಲಾಕ್‍ಡೌನ್ ಪ್ರಯುಕ್ತ 2020ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ (printing and publish) ಕನ್ನಡ, ಅಂಗ್ಲ ಮತ್ತು ಭಾರತೀಯ ಇತರೆ ಭಾಷೆಯ ಪುಸ್ತಕಗಳನ್ನು ರಾಜ್ಯಮಟ್ಟದ ಪುಸ್ತಕ ಸಮಿತಿಯಿಂದ ಆಯ್ಕೆಗಾಗಿ ಲೇಖಕರು (Authors), ಲೇಖಕ-ಪ್ರಕಾಶಕರು, ಪ್ರಕಟಣಾ ಸಂಸ್ಥೆಗಳು ಅರ್ಜಿ ಸಲ್ಲಿಸುವ ಅವಧಿಯನ್ನು 2020ರ ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ.

ಲೇಖಕರು, ಲೇಖಕ-ಪ್ರಕಾಶಕರು ಹಾಗೂ ಪ್ರಕಟಣಾ ಸಂಸ್ಥೆಗಳು ದೂರವಾಣಿ ಮೂಲಕ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಈ ಅರ್ಜಿ (Application) ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ. ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಕನ್ನಡ, ಅಂಗ್ಲ ಮತ್ತು ಭಾರತೀಯ ಇತರೆ ಭಾಷೆಯ ಪುಸ್ತಕಗಳನ್ನು ಉಪನಿರ್ದೇಶಕರ ಕಚೇರಿ, ನಗರ ಕೇಂದ್ರ ಗ್ರಂಥಾಲಯ, ಪಶ್ಚಿಮ ವಲಯ, ಹಂಪಿನಗರ, ಬೆಂಗಳೂರು-560104 ಇಲ್ಲಿ 2020ರ ಆಗಸ್ಟ್ 29ರೊಳಗೆ ಕಾಪಿರೈಟ್ ಮಾಡಿಸಿರಬೇಕು. ಕಾಪಿರೈಟ್ ಮಾಡಿರುವ ಪುಸ್ತಕಗಳನ್ನು ರಾಜ್ಯಮಟ್ಟದ ಪುಸ್ತಕ ಆಯ್ಕೆ (Select) ಸಮಿತಿಗೆ ಆಯ್ಕೆಗಾಗಿ ಪುಸ್ತಕದ ಒಂದು ಪ್ರತಿಯನ್ನು ಅದೇ ಕಚೇರಿಯಲ್ಲಿ  ಆಗಸ್ಟ್ 31ರೊಳಗಾಗಿ ಸಲ್ಲಿಸಬೇಕು. ನಿಗದಿತ ಅರ್ಜಿ ನಮೂನೆ ಮತ್ತು ನಿಬಂಧನೆಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರ ಕಚೇರಿಯನ್ನು ಅಥವಾ ಇಲಾಖಾ ಅಂತರ್ಜಾಲ www.karnatakapubliclibrary.gov.in   ಸಂಪರ್ಕಿಸಬಹುದು.

Published On: 15 August 2020, 03:58 PM English Summary: Application invited from authors for first books

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.