ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿ ಪೀಠಗಳಲ್ಲಿ ಪ್ರಸ್ತುತ ಖಾಲಿ ಇರುವ ಉಳಿದ ಮೂಲ ವೃಂದ ಮತ್ತು ಸ್ಥಳೀಯ ವೃಂದದ ಶೀಘ್ರಲಿಪಿಗಾರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದಾರೆ.
ಒಟ್ಟು : 13 ಹುದ್ದೆಗಳು, ಉಳಿದ ಮೂಲ ವೃಂದದ 11 ಹುದ್ದೆಗಳು ಮತ್ತು ಸ್ಥಳೀಯ ವೃಂದದ 2 ಹುದ್ದೆಗಳು. ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ 27-01-2021 ಹಾಗೂ ಕೊನೆಯ ದಿನಾಂಕ 25-02-2021.
ಅರ್ಜಿಶುಲ್ಕ:ಎಸ್.ಸಿ , ಎಸ್.ಟಿ ಹಾಗೂ ಪ್ರವರ್ಗ -1 ಅಭ್ಯರ್ಥಿಗಳಿಗೆ : ಯಾವುದೇ ಶುಲ್ಕವಿರುವುದಿಲ್ಲ. ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ : ರೂ.150
ವಯೋಮಿತಿ: ಕನಿಷ್ಠ ವಯೋಮಿತಿ:18 ವರ್ಷ, ಗರಿಷ್ಠ ವಯೋಮಿತಿ ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ, ಎಸ್.ಸಿ. & ಎಸ್.ಸಿ. ಅಭ್ಯರ್ಥಿಗಳಿಗೆ 40 ವರ್ಷ
ಶೈಕ್ಷಣಿಕ ವಿದ್ಯಾರ್ಹತೆ - ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಈ ಹುದ್ದೆಗಳ ವೇತನ 30,350 ರಿಂದ 58,250 ಆಗಿರುತ್ತದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಬೆರಳಚ್ಚು ಪರೀಕ್ಷೆ ಪ್ರೌಢದರ್ಜೆ ( ಸೀನಿಯರ್ ಗ್ರೇಡ್ ) ಹಾಗೂ ಆಂಗ್ಲ ಮತ್ತು ಕನ್ನಡ ಭಾಷೆಯ ಶೀಘ್ರಲಿಪಿ ಪ್ರೌಢದರ್ಜೆ ( ಸೀನಿಯರ್ ಗ್ರೇಡ್ ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು .
ಈ ಹುದ್ದೆಗಾಗಿ ಅರ್ಜಿ ಸಲ್ಲಿಸಲುನಿಮ್ಮ ಅರ್ಜಿ ಪತ್ರವನ್ನು ಅಂಚೆಯ ಮೂಲಕ ಕಳುಹಿಸಬೇಕು. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡಿ.ಡಿ. ಮುಖಾಂತರ ಸಲ್ಲಿಸಬೇಕು. ಡಿಡಿ ಈ ಕೆಳಗಿರುವ ಪದನಾಮದಿಂದ ತೆಗಿಸಬೇಕು
ವಿಲೇಖನಾಧಿಕಾರಿ , ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7 ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು -560 009
ಅರ್ಜಿ ಸಲ್ಲಿಸುವುದು ಹೇಗೆ?
ನಾವು ಕೆಳಗೆಕೊಟ್ಟಿರುವ ಈ ಲಿಂಕ್ ಮುಖಾಂತರ ನೀವು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿಯನ್ನು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ನಮೂನೆ ಲಿಂಕ್ https://in.docworkspace.com/d/sIOic8bNFudnQgAY
ಅರ್ಜಿ ಸಲ್ಲಿಸಬೇಕಾದ ವಿಳಾಸ: ವಿಲೇಖನಾಧಿಕಾರಿ, ಶೀಘ್ರಲಿಪಿಗಾರರ ಹುದ್ದೆಗಳ ನೇಮಕಾತಿ ಪ್ರಾಧಿಕಾರ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ 7 ನೇ ಮಹಡಿ, ಕೆಂಪೇಗೌಡ ರಸ್ತೆ, ಬೆಂಗಳೂರು -560 009, ಇವರಿಗೆ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬಹುದು .
Share your comments