ಕೊರೋನಾದಿಂದಾಗಿ ಕೆಲಸ ಕಳೆದುಕೊಂಡು ಏನಾದರೊಂದು ಸ್ವಂತ ಕೆಲಸ ಮಾಡಬೇಕೆಂದುಕೊಂಡಿದ್ದೀರಾ. ಕಾರ್ ಚಾಲನೆ ಮಾಡಕ್ಕೆ ಬರುತ್ತದೆ. ಆದರೆ ಖರೀದಿಸಲು ಹಣವಿಲ್ಲವೆಂದು ಚಿಂತೆಯಲ್ಲಿದ್ದರೆ ನಿಮ್ಮ ಚಿಂತೆ ಪರಿಹಾರಕ್ಕಾಗಿ ಇಲ್ಲಿದೆ ಸಂತಸದ ಸುದ್ದಿ.
ನಗರಗಳಲ್ಲಿ ಹಾಗೂ ಗ್ರಾಮೀಣ ಮಟ್ಟದಲಿ ಹೆಚ್ಚಿನ ವಿದ್ಯಾಭ್ಯಾಸ ಪೂರೈಸಲು ಸಾಧ್ಯವಾಗದೆ ವಾಹನ ಚಾಲಕರಾಗಿ ತಮ್ಮ ನಿತ್ಯ ಜೀವನವನ್ನು ಸಾಗಿಸುತ್ತಿರುವವರಿಗೆ ಅಲ್ಪಸಂಖ್ಯಾತ ಸಮುದಾಯದವರಿಗೆ ಆಯ್ಕೆ ಮಾಡಿ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶದೊಂದಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ(ನಿ)ರಾಷ್ಟ್ರೀಕೃತ ಬ್ಯಾಂಕುಗಳ ಸಹಯೋಗದೊಂದಿಗೆ ಟ್ಯಾಕ್ಸಿ/ ಗೂಡ್ಸ್ ವಾಹನಗಳನ್ನು ಖರೀದಿಸಲು ಗರಿಷ್ಠ 3 ಲಕ್ಷ ಸಹಾಯಧನ ನೀಡಲು ಮುಂದಾಗಿದೆ.
. ಈ ಯೋಜನೆಯಡಿಯಲ್ಲಿ ಖರೀದಿಸುವ ವಾಹನದ ಮೌಲ್ಯವು ಕನಿಷ್ಠ 4 ಲಕ್ಷದಿಂದ 7.50 ಲಕ್ಷಗಳಾಗಿರತಕ್ಕದ್ದು (ತೆರಿಗೆ ಹೊರತುಪಡಿಸಿ) ಈ ಯೋಜನೆಯನ್ನು ಬ್ಯಾಂಕ್ ಸಹಯೋಗದಿಂದ ಅನುಷ್ಠಾನಗೊಳಿಸಲು ರೂ. 75,000 ಸಹಾಯಧನವನ್ನು ನೀಡಲಾಗುವುದು.
ಬೇಕಾಗುವ ದಾಖಲಾತಿಗಳು:
1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
2. ಅರ್ಜಿದಾರರ ಪಡಿತರ ಚೀಟಿ ಝೆರಾಕ್ಸ್ ಮತ್ತು ಆಧಾರ್ ಕಾರ್ಡ್ ಝೆರಾಕ್ಸ್.
3. ಕೊಟೇಶನ್ ಮತ್ತು ಲೈಸೆನ್ಸ್ ಬ್ಯಾಡ್ಜ್ ನೊಂದಿಗೆ
4. ಅರ್ಜಿದಾರರ ಮೂರು ಭಾವಚಿತ್ರ.
5. ಬ್ಯಾಂಕ್ ಪಾಸ್ ಪುಸ್ತಕದ ಝೆರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡನ್ನು ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು.
6. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ಅರ್ಜಿದಾರರ ವಯಸ್ಸು ಕನಿಷ್ಠ 18 ಹಾಗೂ ಗರಿಷ್ಠ 45 ವರ್ಷಗಳು.
7. ಫಲಾನುಭವಿ ಅಥವ ಅವರ ಕುಟುಂಬದ ಸದಸ್ಯರು ಕೇಂದ್ರ ಅಥವ ರಾಜ್ಯ ಸರಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ.
8. ಕಳೆದ ೫ ವರ್ಷಗಳಲ್ಲಿ ಟ್ಯಾಕ್ಸಿ/ ಗೂಡ್ಸ್ ವಾಹನ ಖರೀದಿಗೆ ಸಂಬಂಧಿಸಿದಂತೆ ಸರಕಾರದ ಯಾವುದೇ ಯೋಜನೆಗಳಿಂದ ಸಾಲ ಸೌಲಭ್ಯ ಪಡೆದಿಲ್ಲದಿರುವುದರ ಬಗ್ಗೆ ದೃಢೀಕರಣ ಪತ್ರ
9. ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ದೃಢೀಕರಣ ಪತ್ರ.
ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್: kmdcmicro.karnataka.gov.in ವೀಕ್ಷಿಸಬಹುದು
ಈ ಹಿಂದೆ ನಿಗಮದ ಯೋಜನೆಗಳಲ್ಲಿ ‘ಸೌಲಭ್ಯ ಪಡೆದವರು ಅಥವಾ ಅವರ ಕುಟುಂಬದ ಸದಸ್ಯರು’ ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ.
ಆಸಕ್ತರು ಡಿಸೆಂಬರ್ 10ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿಸಲ್ಲಿಸಿ, ಅರ್ಜಿ ದಾಖಲಾತಿಗಳನ್ನು ರಾಜ್ಯದ ಆಯಾ ಜಿಲ್ಲಾ ವ್ಯವಸ್ಥಾಪಕರ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ.
Share your comments