ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದಿಂದ 2020-21ನೇ ಸಾಲಿನಲ್ಲಿ ಉಪ್ಪಾರ ಮತ್ತು ಇದರ ಉಪಜಾತಿಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ ಸ್ವಯಂ ಉದ್ಯೋಗ (self employee) ಸಾಲ ಹಾಗೂ ಅರಿವು ಶೈಕ್ಷಣಿಕ ಸಾಲ Education loan) ಯೋಜನೆಗಳಡಿ ಸಾಲ ಮತ್ತು ಸಹಾಯಧನ ಸೌಲಭ್ಯ ಪಡೆಯಲು ಅರ್ಹ (Application) ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಬಯಲಿಚ್ಛಿಸುವ ಅರ್ಹ ಉಪ್ಪಾರ ಹಾಗೂ ಇದರ ಉಪಜಾತಿಗೆ ಸೇರಿದ ಅಭ್ಯರ್ಥಿಗಳು ನಿಗಮದ www.dbcdc.karnataka.gov.in ವೆಬ್ಸೈಟ್ನಲ್ಲಿ ಆನ್ಲೈನ್ (online) ಮೂಲಕ ಅರ್ಜಿ ಸಲ್ಲಿಸಬೇಕು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇದ್ದಲ್ಲಿ ಅಭ್ಯರ್ಥಿಗಳು ಜಿಲ್ಲಾ ನಿಗಮದ ಕಚೇರಿಯಿಂದ ಉಚಿತವಾಗಿ ಅಥವಾ ವೆಬ್ಸೈಟ್ದಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳಾದ ಜಾತಿ ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್ (Adharcard) ಮತ್ತು ಭಾವಚಿತ್ರ ಮತ್ತು ವಿದ್ಯಾರ್ಥಿಗಳ ವ್ಯಾಸಂಗದ ದಾಖಲೆಗಳೊಂದಿಗೆ ಜಿಲ್ಲಾ ನಿಗಮದ ಕಚೇರಿಯಲ್ಲಿ ಸೆಪ್ಟೆಂಬರ್ 5 ರೊಳಗಾಗಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
Share your comments