ಕುರಿ, ಆಡು ಸಾಕಾಣಿಕೆ ಮಾಡುವವರಿಗೆ ಸಂತಸದ ಸುದ್ದಿ. ನಿಮ್ಮ ಆಡುಗಳಿಗೆ ಶೆಡ್ ಇಲ್ಲವೇ. ಮನೆಯ ಹೊರಗಡೆ ಬಯಲಲ್ಲೇ ಕಟ್ಟುತ್ತಿದ್ದೀರಾ... ಹಾಗಾದರೆ ಇನ್ನೂ ಮುಂದೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ. ನಿಮ್ಮ ಕುರಿ, ಮೇಕೆಗಳನ್ನು ಕಾಡುಪ್ರಾಣಿಗಳಿಂದ ಹಾಗೂ ಕಳ್ಳರಿಂದ ರಕ್ಷಿಸಿಕೊಳ್ಳಲು ಸರ್ಕಾರ ನರೇಗಾ ಯೋಜನೆಯಡಿ ಸಹಾಯಧನ ನೀಡುತ್ತಿದೆ. ಇಂದೇ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಿರಿ.
ಜಾನುವಾರು ಸಾಕಾಣೆಯೊಂದಿಗೆ ಅವುಗಳ ಲಾಲನೆ ಪಾಲನೆ ಅತೀ ಅವಶ್ಯಕ ಹಾಗಾಗಿ ಇವುಗಳ ಪಾಲನೆ ಸುಗಮವಾಗಿ ನಡೆದಲ್ಲಿ ಜನರ ಜೀವನೋಪಾಯಕ್ಕೆ ದಾರಿಯಾಗುವುದು. ಈ ಸದುದ್ದೇಶದಿಂದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಆಡು ಸಾಕಾಣಿಕೆಗೆ ನೆರವು ನೀಡಲು ಹೆಚ್ಚು ಒತ್ತು ನೀಡಲಾಗುತ್ತಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಡತನ ರೇಖೆಗಿಂತ ಕೆಳಮಟ್ಟದ ಕುಟುಂಬಗಳು ಸೇರಿ ದುರ್ಬಲವರ್ಗದವರು ತಮ್ಮ ಜೀವನಾಧಾರಕ್ಕೆ ಆಡು ಸಾಕಾಣಿಕೆ ಉತ್ತೇಜಿಸಲು ಈ ಸೌಲಭ್ಯ ಒದಗಿಸಲಾಗುತ್ತಿದೆ.
ನರೇಗಾ ಯೋಜನೆಯಡಿ ಸಹಾಯಧನ(MGNREGA)
ಆಡು ಶೆಡ್ ನಿರ್ಮಾಣಕ್ಕೆ ಈ ಹಿಂದೆ 43 ಸಾವಿರ ರೂಪಾಯಿ ಅನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ, ಸಾಮಾನ್ಯ ವರ್ಗದವರಿಗೆ 19,500 ರೂಪಾಯಿ ಆರ್ಥಿಕ ನೆರವನ್ನು ಒದಗಿಸಲಾಗುತ್ತಿತ್ತು. ಈಗ 68ಸಾವಿರ ರೂಪಾಯಿ ನೀಡಲಾಗುತ್ತಿದೆ. 10 ಆಡುಗಳು ವಾಸಿಸುವಂತೆ ಹೊಸ ಮಾದರಿಯ ಶೆಡ್ ನಿರ್ಮಾಣಕ್ಕೆ ಕೂಲಿ ರೂಪಾಯಲ್ಲಿ 1613 ರೂಪಾಯಿ ಹಾಗೂ ಸಾಮಗ್ರಿ ರೂಪದಲ್ಲಿ 66387 ರೂಪಾಯಿ ಫಲಾನುಭವಿಗಳಿಗೆ ಪಾವತಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪಂಚಾಯತಿಗೆ ಸಂಪರ್ಕಿಸಿ.
ಕಾಯಕ ಮಿತ್ರ ಆ್ಯಪ್(kayaka mitra Aap:
ಗ್ರಾಮೀಣ ಪ್ರದೇಶದ ಅರ್ಹ ಕುಟುಂಬಗಳು ಆಡು ಶೆಡ್ ನಿರ್ಮಾಣಕ್ಕೆ ಇಚ್ಛಿಸಿದಲ್ಲಿ ನರೇಗಾ ಯೋಜನೆಯ ಕಾಯಕ ಮಿತ್ರ ಮೊಬೈಲ್ ಆ್ಯಪ್ ಮೂಲಕ ಬೇಡಿಕೆ ಸಲ್ಲಿಸಬಹುದು. ಗ್ರಾಮೀಣ ಪ್ರದೇಶದ ಜನರು ಕೆಲಸ ಕೋರಲು ಗ್ರಾಮ ಪಂಚಾಯತಿ ಸಂಪರ್ಕಿಸುವುದನ್ನು ತಪ್ಪಿಸಲು ಹಾಗೂ ಕೆಲಸ ಕಾಮಗಾರಿ ಬೇಡಿಕೆಯನ್ನು ಸರಳವಾಗಿ ಮೊಬೈಲ್ ಆ್ಯಪ್ ಮೂಲಕ ಬೇಡಿಕೆ ಸಲ್ಲಿಸಲು ಕಾಯಕ ಮಿತ್ರ ಆ್ಯಪ್ ಜಾರಿಗೆ ತರಲಾಗಿದೆ.
ಕೂಲಿಕಾರರು ತಮಗೆ ಎಷ್ಟು ದಿನಗಳವರೆಗೆ ಕೆಲಸ ಬೇಕು ಎಂಬುದನ್ನು ನಮೂನೆ 6ರ ಮೂಲಕ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕಿತ್ತು. ಅದನ್ನು ಆಧರಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಎನ್‌ಎಂಆರ್ ತಯಾರಿಸಿ ಕೆಲಸವನ್ನು ಹಂಚಿಕೆ ಮಾಡುತ್ತಿದ್ದರು. ಈ ಅಪ್ಲಿಕೇಶನ್ ಪರಿಚಯಿಸಿರುವುದರಿಂದ ಪಂಚಾಯಿತಿಗೆ ತೆರಳಿ ಅರ್ಜಿ ಸಲ್ಲಿಸುವ ಕೆಲಸ ತಪ್ಪಲಿದೆ.
ಇದನ್ನೂ ಓದಿ:ಮನರೇಗಾ ಯೋಜನೆಯಡಿ ಮೊಬೈಲ್‌ನಲ್ಲೇ ಉದ್ಯೋಗಕ್ಕೆಅರ್ಜಿ ಸಲ್ಲಿಸಿ
ಸ್ಮಾರ್ಟ್ ಫೋನ್ ಹೊಂದಿದವರು ಗೂಗಲ್ ಪ್ಲೇ ಸ್ಟೋರ್ ನಿಂದ ಆಯ್ಪ್ ಡೌನ್ಲೋಡ್ ಮಾಡಿಕೊಂಡು ಯಾವುದೇ ನೋಂದಣಿಯಿಲ್ಲದೆ, ಬೇಡಿಕೆ ಸಲ್ಲಿಸಬಹುದು. ಇಲ್ಲವೆ ಉಚಿತ ಸಹಾಯವಾಣಿ 18004258666ಗೆ ಕರೆ ಮಾಡಿ ಬೇಡಿಕೆ ಸಲ್ಲಿಸಬಹುದು.
Share your comments