ತೋಟಗಾರಿಕೆ ಮಾಡುತ್ತಿರುವ ರೈತರಿಗ ಸಂತಸದ ಸುದ್ದಿ. 2020-21ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ವಿತರಿಸಲು ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು ‘ತೋಟಗಾರಿಕೆ ಮಾಡುತ್ತಿರುವ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲ್ಲೂಕುಗಳ ರೈತರಿಗೆ ಯಂತ್ರಗಳ ಖರೀದಿಗಾಗಿ ಸಹಾಯಧನ ನಿಡಲಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸುರೇಶ ಕುಂಬಾರ ತಿಳಿಸಿದ್ದಾರೆ.
‘2020- 21ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರು ಯಂತ್ರಗಳನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಅಧಿಕೃತ ಕಂಪನಿ ಅಥವಾ ಡೀಲರ್ಗಳಿಂದ ಖರೀದಿಸಿದರೆ, ಸಾಮಾನ್ಯ ರೈತರಿಗೆ ಶೇ 40 ಮತ್ತು ಎಸ್ಸಿ/ ಎಸ್ಟಿ ರೈತರಿಗೆ ಶೇ 50ರಷ್ಟು ಸಹಾಯ ಧನ ನೀಡಲಾಗುವುದು’ ಎಂದಿದ್ದಾರೆ.
ಆಸಕ್ತರು ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಡಿಸೆಂಬರ್ 15ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಂತುರು ನೀರಾವರಿ ಘಟಕ ಅಳವಡಿಸಿಕೊಳ್ಳಲು ಸಹಾಯಧನ:
ಪ್ರಸಕ್ತ ಹಿಂಗಾರಿಗೆ ರಾಗಿ ಮತ್ತು ಅಲಸಂದೆ ಬಿತ್ತನೆ ಮಾಡಲು ಅವಕಾಶವಿದ್ದು, ಬಿತ್ತನೆ ಮಾಡುವಂತಹ ದಾವಣಗೆರೆ ಜಿಲ್ಲೆಯ ರೈತರು ತುಂತುರು ನೀರಾವರಿ ಘಟಕ ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶವಿದೆ.
ಎಲ್ಲಾ ವರ್ಗದ ರೈತರು ಶೇ 90 ರಿಯಾಯಿತಿ ದರದಲ್ಲಿ ಪಡೆಯಲು ಪಹಣಿ ಸಹಿತ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.
Share your comments