1. ಸುದ್ದಿಗಳು

ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದ ರೈತ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ವತಿಯಿಂದ ರಾಜ್ಯ ಮಟ್ಟದ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ (ತನ್ನ ಆಡಳಿತದ ವ್ಯಾಪ್ತಿಯಲ್ಲಿ ಬರುವ 10 ಜಿಲ್ಲೆಗಳ) ಆಸಕ್ತ ರೈತ ಹಾಗೂ ರೈತ ಮಹಿಳೆಯರಿಂದ ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 

ಅ)  ರಾಜ್ಯ ಮಟ್ಟದ ಪ್ರಶಸ್ತಿಗಳು

  1. ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ / ರೈತ ಮಹಿಳೆ ಪ್ರಶಸ್ತಿ
  2. ಡಾ. ಎಂ.ಹೆಚ್. ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ
  3. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ/ರೈತಮಹಿಳೆ ಪ್ರಶಸ್ತಿ
  4. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ
  5. ಕೆನರಾ ಬ್ಯಾಂಕ್ ಪ್ರಾಯೋಜಿತ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿ
  6. ಕೆನರಾ ಬ್ಯಾಂಕ್ ಪ್ರಾಯೋಜಿತ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತಮಹಿಳೆ ಪ್ರಶಸ್ತಿ

ಆ)  ಜಿಲ್ಲಾ ಮಟ್ಟದ ಪ್ರಶಸ್ತಿಗಳು

  1. ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ
  2. ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ

ಇ) ತಾಲ್ಲೂಕು ಮಟ್ಟದ ಪ್ರಶಸ್ತಿಗಳು

  1. ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಪ್ರಶಸ್ತಿ
  2. ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಮಹಿಳೆ ಪ್ರಶಸ್ತಿ

ಮೇಲಿನ ಪ್ರಶಸ್ತಿಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಅಕ್ಟೋಬರ್-2021ರಲ್ಲಿ ಆಯೋಜಿಸಲಿರುವ ಕೃಷಿಮೇಳ-2021ರ  ಸಂದರ್ಭದಲ್ಲಿ ನೀಡಲಾಗುತ್ತದೆ.  ನಿಗದಿತ ಅರ್ಜಿ ನಮೂನೆಯು ಆಯಾ ಜಿಲ್ಲೆಗಳ ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ವಿಸ್ತರಣಾ ನಿರ್ದೇಶಕರ ಕಛೇರಿ, ಜಿಕೆವಿಕೆ, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರಗಳು (ಹಾಡೋನಹಳ್ಳಿ-ದೊಡ್ಡಬಳ್ಳಾಪುರ, ಚಂದುರಾಯನಹಳ್ಳಿ-ಮಾಗಡಿ, ಕಂದಲಿ-ಹಾಸನ, ಕೊನೇಹಳ್ಳಿ-ತಿಪಟೂರು, ವಿ.ಸಿ.ಫಾರಂ-ಮಂಡ್ಯ, ಕುರುಬೂರು ಫಾರಂ-ಚಿಂತಾಮಣಿ ಮತ್ತು ಹರದನಹಳ್ಳಿ-ಚಾಮರಾಜನಗರ) ವಿಸ್ತರಣಾ ಶಿಕ್ಷಣ ಘಟಕ (ನಾಗನಹಳ್ಳಿ-ಮೈಸೂರು)ದಲ್ಲಿ ದೊರೆಯುತ್ತದೆ.  ಅರ್ಜಿ ನಮೂನೆಯು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲೂ www.uasbangalore.edu.in ಲಭ್ಯವಿರುತ್ತದೆ.  ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ:31-07-2021 ರೊಳಗೆ ಸಲ್ಲಿಸಬೇಕು.

ದೂರವಾಣಿ ಸಂಖ್ಯೆ. 080-23330153, ಗೆ ಕರೆ ಮಾಡಿ ಸಂಪರ್ಕಿಸಬಹುದು. ಇನ್ನೂ ಹೆಚ್ಚಿನ ವಿವರಗಳಿಗೆ ವಿಸ್ತರಣಾ ನಿರ್ದೇಶಕರ ಕಛೇರಿ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು-560 065 ಇವರನ್ನು  ಸಂಪರ್ಕಿಸಬಹುದು.  

Published On: 06 July 2021, 10:08 AM English Summary: Application invited for best farmer awards

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.