1. ಸುದ್ದಿಗಳು

ಗುಡ್‌ನ್ಯೂಸ್‌: ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಆಹ್ವಾನ, ₹ 3.50ಲಕ್ಷ ಸಹಾಯಧನ!

Kalmesh T
Kalmesh T
Ganga Kalyan Irrigation Scheme 2022-23

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2022 23ನೇ ಸಾಲಿಗೆ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 20 ಕೊನೆ ದಿನ

ಇದನ್ನೂ ಓದಿರಿ: ರೈತರ ಬೆಳೆ ವಿಮೆ ಬಾಕಿ ಮೊತ್ತ ₹16.52 ಕೋಟಿ ಬಿಡುಗಡೆ; ಸಿಎಂ ಬೊಮ್ಮಾಯಿ

Ganga Kalyan Irrigation Scheme 2022:  ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2022 23ನೇ ಸಾಲಿಗೆ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾ ನಿಸಲಾಗಿದೆ.

ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ (Seva Sindhu Portal) ಮುಖಾಂತರ ಆಹ್ವಾನಿಸಲಾಗಿದ್ದು, ರೈತರು ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾಕೇಂದ್ರಗಳಲ್ಲಿ ಅ.20ರೊಳಗೆ ಆನ್ ಲೈನ ಮೂಲಕ ಸಲ್ಲಿಸಬಹುದು.

ICAR ನ KRITAGYA ಕಾರ್ಯಾಗಾರ; ₹5 ಲಕ್ಷ ಗೆಲ್ಲುವ ಭರ್ಜರಿ ಅವಕಾಶ! ಯಾರು ಅರ್ಹರು? ಅರ್ಜಿ ಸಲ್ಲಿಕೆ ಹೇಗೆ ತಿಳಿಯಿರಿ..

Ganga Kalyan Irrigation Scheme 2022: ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿದಾರರು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು.

  • ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳ ವ್ಯಾಪ್ತಿಗೆ ಒಳಪಡುವ ಜಾತಿ ಸಮುದಾಯಗಳಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದು ಹಾಲಿ ಜಮೀನುಗಳು ಋಷ್ಠಿಯಾಗಿದ್ದು ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿರಬಾರದು.
  • ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರ ವಯಸ್ಸು 18 ರಿಂದ 10 ವರ್ಷದ ಒಳಗಿರಬೇಕು.

ಸರ್ಕಾರದಿಂದ ಗುಡ್‌ನ್ಯೂಸ್‌: ಇನ್ಮುಂದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆಯಲು RTOಗೆ ಹೋಗಬೇಕಿಲ್ಲ!

  • ಅರ್ಜಿದಾರರ ಕುಟುಂಬ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/- ಹಾಗೂ ಪಟ್ಟಣ ಪದೇಶದವರಿಗೆ ರೂ.1,20,000/-ಗಳ ಒಳಗಿರಬೇಕು.
  • ಅರ್ಜಿದಾರರು ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಕನಿಷ್ಠ 12 ಎಕರೆ ಜಮೀನು ಹೊಂದಿರಬೇಕು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 01 ಎಕರೆ ಜಮೀನು ಹೊಂದಿರಬೇಕು.
  • ವೈಯಕ್ತಿಕ ಕೊಳವೆ ಬಾವಿ ಯೋಜನೆಯಲ್ಲಿ ಘಟಕ ವೆಚ್ಚ ರೂ.2.50 ಲಕ್ಷಗಳು, ಇದರಲ್ಲಿ ರೂ.2.00ಲಕ್ಷ ಸಹಾಯಧನ ಹಾಗೂ ರೂ.50,000/- ನಿಗಮದಿಂದ ಶೇ.4ರ ಬಡ್ಡಿದರದಲ್ಲಿ ನೀಡುವ ಸಾಲದ ಮೊತ್ತ ಒಳಗೊಂಡಿದೆ.
  • ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಿಗೆ ವೈಯಕ್ತಿಕ ಕೊಳವೆ ಬಾವಿ ಘಟಕ ವೆಚ್ಚ ರೂ.4.00ಲಕ್ಷಗಳು ಇದರಲ್ಲಿ ರೂ.3.50ಲಕ್ಷ ಸಹಾಯಧನ ಹಾಗೂ ರೂ.50,000/- ನಿಗಮದಿಂದ ಶೇ.4ರ ಬಡ್ಡಿದರದಲ್ಲಿ ನೀಡುವ ಸಾಲದ ಮೊತ್ತ ಒಳಗೊಂಡಿದೆ.

#Scholarship ವಿದ್ಯಾರ್ಥಿಗಳಿಗೆ ಇಲ್ಲಿದೆ 20,000 ದಿಂದ 35,000 ಭರ್ಜರಿ ಪ್ರೋತ್ಸಾಹಧನ ..ಅರ್ಜಿ ಸಲ್ಲಿಕೆ ಹೇಗೆ?

  • ರೈತರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್ನಲ್ಲಿರುವಂತೆ ರೈತರ ಹೆಸರು (ಶ್ರೀ ಶ್ರೀಮತಿ ಕುಮಾರಿ ಮುಂತಾದ ಮಾಹಿತಿಗಳೆಲ್ಲವು) ಬ್ಯಾಂಕ್ ಖಾತೆಯ ಪುಸ್ತಕದಲ್ಲಿಯೂ ಇದ್ದು, ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿಯೂ ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರು ಹೊಂದಾಣಿಕೆಯಾಗಬೇಕು.
  • ಈ ಹಿಂದೆ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. 
  • ಅರ್ಜಿದಾರರು ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಜನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಿಗಮದ https://www.dbcdc.karnataka.gov.in  ವೆಬ್ಸೈಟ್ ನಲ್ಲಿ ಸಂಪರ್ಕಿಸಿ ಅಥವಾ ನಿಗಮದ ದೂರವಾಣಿ/ ಸಹಾಯವಾಣಿ ಸಂಖ್ಯೆ 080-22374832 ಮತ್ತು 9606066389 ಅಥವಾ 8824300400 FADO.

Published On: 22 September 2022, 03:43 PM English Summary: Application Invitation under Ganga Kalyan Irrigation Scheme 2022-23

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.