Free Tent Accessories to Shepherds : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಉಚಿತ ಟೆಂಟ್ ಪರಿಕರ ವಿತರಣೆಗಾಗಿ ಅರ್ಜಿ ಆಹ್ವಾನ
Tomato Price Hike : ಚಿತ್ರ ವಿಚಿತ್ರ ಘಟನೆಗಳು | ತಪ್ಪದೇ ನೋಡಬೇಕಾದ ಅಚ್ಚರಿಯ ವಿಡಿಯೋ
ಧಾರವಾಡ (ಕರ್ನಾಟಕ ವಾರ್ತೆ) : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ವತಿಯಿಂದ ಜಿಲ್ಲೆಯ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳಲ್ಲಿನ ಅರೆಸಂಚಾರಿ ಮತ್ತು ವಲಸೆ ಕುರಿಗಾರರಾಗಿರುವ ಸಾಮಾನ್ಯ-07, ಪರಿಶಿಷ್ಟ ಜಾತಿ-02, ಪರಿಶಿಷ್ಟ ಪಂಗಡ-01 ಸೇರಿ ಒಟ್ಟು 10 ಜನ ಕುರಿಗಾರರಿಗೆ ಉಚಿತ ಟೆಂಟ್ ಪರಿಕರಗಳನ್ನು ನೀಡುವ ಯೋಜನೆ ಇದೆ. ಮತ್ತು ಕುರಿ, ಮೇಕೆ ಘಟಕ ಸ್ಫಾಪಿಸಲು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗಳಿವೆ.
ಆಸಕ್ತಿಯುಳ್ಳ ಅರ್ಜಿದಾರರು ನಿಗದಿತ ನಮೂನೆಯ ಅರ್ಜಿಗಳನ್ನು ದಾಖಲಾತಿಗಳೊಂದಿಗೆ ಜುಲೈ 31, 2023 ರೊಳಗಾಗಿ ಸಂಬಂಧಿಸಿದ ತಾಲೂಕಿನ ಪಶು ಆಸ್ಪತ್ರೆಗಳ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ನಮೂನೆಗಳಿಗಾಗಿ ಸಂಬಂಧಿಸಿದ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು.
ಕಳೆದ ಐದು ವರ್ಷಗಳಲ್ಲಿ ನಿಗಮದಿಂದ ಫಲಾನುಭವಿಯಾದವರು ಮತ್ತು ಅವರ ಕುಟುಂಬದವರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ ಎಂದು ಜಿಲ್ಲಾ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ವತಿಯಿಂದ ಜಿಲ್ಲೆಯ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳಲ್ಲಿನ ಅರೆಸಂಚಾರಿ ಮತ್ತು ವಲಸೆ ಕುರಿಗಾರರಾಗಿರುವ ಸಾಮಾನ್ಯ-07, ಪರಿಶಿಷ್ಟ ಜಾತಿ-02, ಪರಿಶಿಷ್ಟ ಪಂಗಡ-01 ಸೇರಿ ಒಟ್ಟು 10 ಜನ ಕುರಿಗಾರರಿಗೆ ಉಚಿತ ಟೆಂಟ್ ಪರಿಕರಗಳನ್ನು ನೀಡುವ ಯೋಜನೆ ಇದೆ. ಮತ್ತು ಕುರಿ, ಮೇಕೆ ಘಟಕ ಸ್ಫಾಪಿಸಲು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗಳಿವೆ.
Share your comments