1. ಸುದ್ದಿಗಳು

ಒಣಭೂಮಿಯಲ್ಲಿ ಕೃಷಿ; ಸಂಶೋಧನೆಗೆ ಸಿ.ಎಂ ಸಿದ್ದರಾಮಯ್ಯ ಸಲಹೆ

Hitesh
Hitesh
Agriculture in dryland; CM Siddaramaiah suggested for research

 ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್‌ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.

ಚಿನ್ನ ಪ್ರಿಯರಿಗೆ ಸಿಹಿಸುದ್ದಿ: ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ!

ಕಾವೇರಿ ನೀರು ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಬಿಜೆಪಿ ಕಿಡಿ!

ಜಗತ್ತಿನಲ್ಲಿ ನೆಮ್ಮದಿ, ಸಾಮರಸ್ಯಕ್ಕೆ ಒತ್ತು ನೀಡೋಣ: ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರಿನಲ್ಲಿ ಏಕಬಳಕೆಯ ಪ್ಲಾಸ್ಟಿಕ್‌ ನಿಷೇಧಕ್ಕೆ ಕ್ರಮ

ಒಣಭೂಮಿಯಲ್ಲಿ ಕೃಷಿ; ಸಂಶೋಧನೆಗೆ ಸಿ.ಎಂ ಸಿದ್ದರಾಮಯ್ಯ ಸಲಹೆ

ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಲಾಭದಾಯಕ: ಲಕ್ಷ್ಮೀ ಹೆಬ್ಬಾಳ್ಕರ್‌

ಸುದ್ದಿಗಳ ವಿವರ ಈ ರೀತಿ ಇದೆ.

ಚಿನ್ನಪ್ರಿಯರಿಗೆ ವಾರಾಂತ್ಯದ ಚಿನ್ನದ ದರವು ಖುಷಿ ನೀಡಲಿದೆ. ಮಾರುಕಟ್ಟೆಯಲ್ಲಿ ಶುಕ್ರವಾರದಿಂದ ಚಿನ್ನದ ಬೆಲೆ ಇಳಿಕೆ ಆಗಿದೆ.

22 ಕ್ಯಾರಟ್ ಆಭರಣದ ಒಂದು ಗ್ರಾಂ ಚಿನ್ನದ ಬೆಲೆಯು 5,490 ಆಗಿದೆ. 24 ಕ್ಯಾರಟ್ ಬಂಗಾರದ

ಒಂದು ಗ್ರಾಂನ ಬೆಲೆಯು 5,989 ರೂಪಾಯಿ ಆಗಿದೆ.

ಎಂಟು ಗ್ರಾಂ 22 ಕ್ಯಾರಟ್ 43,920 ರೂಪಾಯಿ ಹಾಗೂ 24 ಕ್ಯಾರಟ್ನ ಅಪರಂಜಿ

ಬೆಲೆಯು 47,912 ರೂಪಾಯಿ ಆಗಿದೆ. ಇನ್ನು ಬೆಂಗಳೂರಿನಲ್ಲಿ ಬೆಳ್ಳಿ ದರವು ಪ್ರತಿ 10 ಗ್ರಾಂಗೆ 730 ರೂಪಾಯಿ ಆಗಿದೆ. 

-------------------

ಕರ್ನಾಟಕದಲ್ಲಿ ಮಳೆ ಕೊರತೆಯ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.

ಬಿಜೆಪಿ ಈಚೆಗೆ ಕೆಆರ್‌ಎಸ್ ಜಲಾಶಯದ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಿದ್ದು, ಶಾಸಕ ಬಸವರಾಜ ಬೊಮ್ಮಾಯಿ ಅವರು,

ರಾಜ್ಯ ಸರ್ಕಾರ ಕೆಆರ್‌ಎಸ್ ನೀರು ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ.

ಕಾವೇರಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನಾಲ್ಕು ಡ್ಯಾಂಗಳನ್ನು ನಿರ್ವಹಣೆ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

-------------------

ವಿಶ್ವದ ನೆಮ್ಮದಿ, ಸಾಮರಸ್ಯ ಮತ್ತು ಭರವಸೆಯ ಮೇಲೆ ಗಮನ ಹರಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಭಾರತದ ಜಿ-20 ಅಧ್ಯಕ್ಷತೆಯಡಿ, 60 ಸ್ಥಳಗಳಲ್ಲಿ 200 ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದೆ.

ಅಭಿವೃದ್ಧಿಯನ್ನು ಜಾಗತಿಕ ಕಾರ್ಯಸೂಚಿಯಲ್ಲಿ ಮುಂಚೂಣಿಗೆ ತರಲಾಗಿದೆ ಎಂದಿದ್ದಾರೆ.

ಜಿ20 ಸಮ್ಮೇಳನ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ನಡೆಯುತ್ತಿದ್ದು,

ವಿಶ್ವದ ಹಲವು ದೇಶಗಳ ನಾಯಕರು ಇದರಲ್ಲಿ ಭಾಗವಹಿಸಿದ್ದಾರೆ. ಇದಕ್ಕಾಗಿ ದೆಹಲಿಯಲ್ಲಿ ಭಾರೀ ಬಂದೋಬಸ್ತ್‌ ಕಲ್ಪಿಸಲಾಗಿದೆ.

-------------------

ಬೆಂಗಳೂರಿನಲ್ಲಿ ಏಕಬಳಕೆಯ ಪ್ಲಾಸ್ಟಿಕ್‌ ನಿಷೇಧಕ್ಕೆ ಬಿಬಿಎಂಪಿ ಮುಂದಾಗಿದೆ.

ಪಾಲಿಕೆಯ ವ್ಯಾಪ್ತಿಯಲ್ಲಿನ ಶಾಲಾ- ಕಾಲೇಜುಗಳು ಹಾಗೂ ದೇವಾಲಯಗಳ ಆವರಣದೊಳಗೆ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಬೇಕು.

ಈ ಕುರಿತು ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸಬೇಕು ಎಂದು

ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ ಅವರು ನಿರ್ದೇಶನ ನೀಡಿದ್ದಾರೆ.

-------------------    

ಒಣಭೂಮಿಯಲ್ಲಿ ಕೃಷಿ ಅಭಿವೃದ್ಧಿಪಡಿಸುವ ಕುರಿತು ಕೃಷಿ ವಿಶ್ವವಿದ್ಯಾಲಯಗಳು ಹೆಚ್ಚು ಸಂಶೋಧನೆ ನಡೆಸಬೇಕು

ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಧಾರವಾಡದಲ್ಲಿ ಶನಿವಾರ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ಕೃಷಿಮೇಳ- 2023ವನ್ನು

ಉದ್ಘಾಟಿಸಿ ಅವರು ಮಾತನಾಡಿದರು. ಈಗ ಶೇಕಡ 60 ರಷ್ಟು ಜನ ಕೃಷಿ ಮಾಡುತ್ತಿದ್ದು, ಸಾಕಷ್ಟು

ಜನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಮಳೆ ಆಧಾರಿತ ಕೃಷಿ ಭೂಮಿ ಇರುವುದರಿಂದ ಮಳೆ ಕೊರತೆ ಸಮಸ್ಯೆ ಆಗಿದೆ ಎಂದರು.

-------------------  

ಗ್ರಾಮೀಣ ಪಶುಸಂಗೋಪನಾ ಕ್ಷೇತ್ರದಲ್ಲಿ ಪಶುಸಖಿಯರ ಪಾತ್ರ ಮುಖ್ಯವಾಗಿದೆ. ಪಶುಪಾಲಕರ ಅಭಿವೃದ್ಧಿಯೊಂದಿಗೆ ಪಶುಸಖಿಯರು

ಸ್ವಾವಲಂಬಿತ ಜೀವನವನ್ನು ನಡೆಸುತ್ತಾ ಮಹಿಳಾ ಸಬಲೀಕರಣ ಸಾಧಿಸಬಹುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

Published On: 10 September 2023, 04:53 PM English Summary: Agriculture in dryland; CM Siddaramaiah suggested for research

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.