ಕರ್ನಾಟಕದಲ್ಲಿ ಹಲವು ಭಾಷೆ ಹಾಗೂ ಉಪಭಾಷೆಗಳಿವೆ.
ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲೇ ಜಿಲ್ಲೆವಾರು ಭಾಷೆ ಮತ್ತು ಸ್ಯ್ಲಾಗ್ (ಭಾಷಾ ಶೈಲಿಯಲ್ಲಿ) ಹಲವು ವ್ಯತ್ಯಾಸಗಳು ಇವೆ.
ನಮ್ಮಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಚರ್ಚೆಯಲ್ಲಿರುವುದು ತುಳು ಭಾಷೆ. ತುಳುವಿಗೆ ಅಧಿಕೃತ ಸ್ಥಾನ ನೀಡಬೇಕು
ಎನ್ನುವುದರ ಕುರಿತು ನಿರಂತರ ಹೋರಾಟಗಳು ನಡೆಯುತ್ತಲ್ಲೇ ಇವೆ.
ತುಳುಭಾಷೆಗೆ ಹೆಚ್ಚುವರಿ ಸ್ಥಾನ ನೀಡಬೇಕು ಎಂದು ಹಲವು ವರ್ಷಗಳಿಂದ ಕರಾವಳಿ ಭಾಗದಲ್ಲಿ ಹೋರಾಟ ನಡೆದಿದೆ.
ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ತುಳು ಭಾಷೆಗೆ ಹೆಚ್ಚುವರಿ ಭಾಷೆಯ ಸ್ಥಾನಮಾನ
ದೊರಕಬೇಕೆಂದು ಕೋರಿಕೆಯಿದ್ದು ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಿರುವ ಕಂಬಳ ಉತ್ಸವ ಹಾಗೂ ತುಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮದ
ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಂಬಳ ಕರಾವಳಿ ಭಾಗದ ಜನಪ್ರಿಯ ಕ್ರೀಡೆಯಾಗಿದೆ. ಮಂಗಳೂರು, ಉಡುಪಿ ಜಿಲ್ಲೆಗಳ ಜಾನಪದ ಕ್ರೀಡೆಯೂ ಹೌದು.
ಅಶೋಕ್ ರೈ ಅವರ ನೇತೃತ್ವದಲ್ಲಿ ಕರಾವಳಿ ಪ್ರದೇಶದ ಜಾನಪದ ಕ್ರೀಡೆಯನ್ನು ಬೆಂಗಳೂರು ನಗರಕ್ಕೆ ಪರಿಚಯಿಸುವುದು ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.
ಏನಿದು ತುಳು ಭಾಷೆ
ತುಳು ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು ಭಾಷೆಯಾಗಿದೆ ಎನ್ನುತ್ತದೆ ವಿಕಿಪೀಡಿಯಾ ಮಾಹಿತಿ.
ಅಲ್ಲದೇ ಭಾರತದ ಕರ್ನಾಟಕ ರಾಜ್ಯದ ಪಶ್ಚಿಮ ತೀರದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳಲ್ಲಿ
ಇದು ಹೆಚ್ಚಾಗಿ ಚಾಲ್ತಿಯಲ್ಲಿದೆ. ತುಳು ಮಾತಾಡುವವರನ್ನು ತುಳುವರು (ತುಳುವಿನಲ್ಲಿ ತುಳುವೆರ್) ಎಂದು ಕರೆಯುತ್ತಾರೆ.
ಸುಮಾರು 10ನೇ ಶತಮಾನದಲ್ಲಿ ತುಳು ಬ್ರಾಹ್ಮಣರು ದಕ್ಷಿಣ ಭಾರತದ ಭಾಗಗಳಲ್ಲಿ ವಿಕಾಸವಾದ ತಿಗಳಾರಿ ಲಿಪಿ ಎಂಬ ಬ್ರಾಹ್ಮಿ
ಆಧಾರಿತ ಲಿಪಿಯನ್ನು ಉಪಯೋಗಿಸುತ್ತಿದ್ದರು. ತುಳುವ ಪ್ರದೇಶಗಳಲ್ಲಿ ಬಳಕೆಯಲ್ಲಿದ್ದ ಈ ಲಿಪಿಯನ್ನು ತುಳು ಲಿಪಿ ಎಂದು ಕರೆಯಲಾಗಿದೆ.
ತುಳು ಭಾಷೆಯ ಹಿನ್ನೆಲೆ ಏನು
ಈ ಲಿಪಿಯನ್ನು ಸಂಸ್ಕೃತದ ಶ್ಲೋಕಗಳಲ್ಲಿ ಮಾತ್ರ ಬರೆದಿಟ್ಟುಕೊಳ್ಳಲು ಬಳಸುತ್ತಿದ್ದರು.
ಆದರೆ ಅದರ ವ್ಯಾಪಕ ಬಳಕೆ ಇಲ್ಲದಿದ್ದ ಕಾರಣ ಕಾಲಕ್ರಮೇಣ ಲಿಪಿ ಬಳಕೆ ನಶಿಸಿ ಹೋಗಿದೆ.
ಇತ್ತಿಚೆನ ದಿನಗಳಲ್ಲಿ ಹಳೆಯ ಈ ಲಿಪಿಯ ಪುನರುಜ್ಜೀವನಕ್ಕಾಗಿ ಹಲವಾರು ಪ್ರಯತ್ನಗಳು ನಡೆದಿವೆ.
ಪುರಾತನ ತಿಗಳಾರಿ ಲಿಪಿ ಮಲೆಯಾಳಂ ಲಿಪಿಯನ್ನು ಹೋಲುತ್ತದೆ.
ಪ್ರಸ್ತುತ ತುಳುಭಾಷೆಯನ್ನು ಬರೆಯಲು ಕನ್ನಡ ಲಿಪಿಯನ್ನು ಬಳಸುತ್ತಾರೆ.
(ಪೂರಕ ಮಾಹಿತಿ: ವಿಕಿಪೀಡಿಯಾ)
Share your comments