1. ಸುದ್ದಿಗಳು

ಆಧಾರ್‌ ಜೊತೆ ರೇಷನ್‌ ಕಾರ್ಡ್‌ ಲಿಂಕ್‌:  ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

Maltesh
Maltesh
aadhar card ration card link bigg update

ಪಡಿತರ ಚೀಟಿ ಫಲಾನುಭವಿಗಳಿಗೆ ಜೂನ್ 30ಕ್ಕೆ ಕೊನೆಗೊಂಡಿದ್ದ ಆಧಾರ್- ಪಡಿತರ ಚೀಟಿ ಜೋಡಣೆ ಗಡುವನ್ನು ವಿಸ್ತರಿಸುವ ಮೂಲಕ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 

ಈಗಾಗಲೇ ಆಧಾರ್-ಪಡಿತರ ಕಾರ್ಡ್ ಲಿಂಕ್ ಮಾಡುವ ಗಡುವು ಮುಗಿದಿದ್ದರೂ, ಸರ್ಕಾರ ಫಲಾನುಭವಿಗಳಿಗೆ ಮತ್ತೊಂದು ಅವಕಾಶವನ್ನು ನೀಡಿದೆ. ಗಡುವನ್ನು ವಿಸ್ತರಿಸಿರುವುದಾಗಿ ಸರ್ಕಾರ ಬಹಿರಂಗಪಡಿಸಿದೆ. ಲಿಂಕ್‌ ಆಗದೆ ಇಲ್ಲದಿದ್ದಲ್ಲಿ ಪಡಿತರ ಚೀಟಿ ಪಟ್ಟಿಯಿಂದ ಫಲಾನುಭವಿಗಳನ್ನು ತೆಗೆದು ಹಾಕಲಾಗುವುದು ಎಂದು ತಿಳಿಸಿದೆ.

ರೇಷನ್‌ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ಕೇಂದ್ರ ಸರ್ಕಾರ ಜೂನ್ 30 ರ ನಂತರ  ಮತ್ತೆ ಮೂರು ತಿಂಗಳ ಕಾಲ ಗಡುವನ್ನು ವಿಸ್ತರಿಸಿದೆ, ಆದ್ದರಿಂದ ಫಲಾನುಭವಿಗಳು ಆದಷ್ಟು ಬೇಗ ಲಿಂಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸರ್ಕಾರ ತಿಳಿಸಿದೆ. ಸೆಪ್ಟೇಂಬರ್‌ 30ರ ವರೆಗೆ ಈ ಗಡುವನ್ನು ವಿಸ್ತರಣೆ ಮಾಡಿದೆ.

ಪಡಿತರ ಚೀಟಿಯಲ್ಲಿ ಲಭ್ಯವಿರುವ ಯೋಜನೆಗಳು ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆಯಲು, ಪ್ರತಿಯೊಬ್ಬರೂ ಪಡಿತರ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು. ಇಲ್ಲದಿದ್ದರೆ ಅಂತ್ಯೋದಯ ಯೋಜನೆ ಮತ್ತು ಆದ್ಯತಾ ವಸತಿ ಯೋಜನೆಗಳ ಪ್ರಯೋಜನಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ಸರಕಾರ ಜಾರಿಗೆ ತಂದಿರುವ ಕಲ್ಯಾಣ ಯೋಜನೆಗಳನ್ನು ಪಡೆಯಲು ಪಡಿತರ ಚೀಟಿ ಹೊಂದಿರಬೇಕು. ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ಅಕ್ಕಿಯೊಂದಿಗೆ ಸರ್ಕಾರದ ಹೆಚ್ಚಿನ ಯೋಜನೆಗಳನ್ನು ಪಡೆಯಲು ವಿವಿಧ ರಾಜ್ಯ ಸರ್ಕಾರಗಳು ಇದನ್ನು ಮಾನದಂಡವಾಗಿ ತೆಗೆದುಕೊಳ್ಳುವುದರಿಂದ, ಫಲಾನುಭವಿಗಳು ಸಾಧ್ಯವಾದಷ್ಟು ಬೇಗ ಅದನ್ನು ಲಿಂಕ್ ಮಾಡುವುದು ಉತ್ತಮ.

ಫಲಾನುಭವಿಗಳು ಕೆಲವೆಡೆ ಎರಡು ಪಡಿತರ ಚೀಟಿ ಹೊಂದಿದ್ದು, ನಿಜವಾದ ಫಲಾನುಭವಿಗಳಿಗೆ ಈ ಸೌಲಭ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.  ಹೀಗಾಗಿ ಎಲ್ಲರೂ ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಸರ್ಕಾರ ಆದೇಶ ನೀಡಿದೆ. ಲಿಂಕ್ ಮಾಡದಿದ್ದರೆ ಅವರ ಹೆಸರನ್ನು ಪಡಿತರ ಚೀಟಿ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.

Published On: 05 July 2023, 10:53 AM English Summary: aadhar card ration card link bigg update

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.