ಕೇಂದ್ರ ಸರ್ಕಾರವು ಈಗಾಗಲೇ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ನಿರ್ದೇಶನ ನೀಡಿದೆ.
ಆದರೆ, ಈ ವ್ಯಾಪ್ತಿಯಲ್ಲಿದ್ದರೆ ನೀವು ಆಧಾರ್- ಪ್ಯಾನ್ ಕಾರ್ಡ್ ಲಿಂಕ್ ಮಾಡಬೇಕಿಲ್ಲ.
ಕೇಂದ್ರ ಸರ್ಕಾರವು ತೆರಿಗೆ ಪೋಲು ಸೇರಿದಂತೆ ವಿವಿಧ ಹಂತದಲ್ಲಿ ಆಗುತ್ತಿರುವ ಆರ್ಥಿಕ ನಷ್ಟ ಹಾಗೂ ಆರ್ಥಿಕ ಸೋರಿಕೆಯನ್ನು ತಪ್ಪಿಸುವ
ಉದ್ದೇಶದಿಂದ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಿದೆ.
ಅಲ್ಲದೇ, ಮಾರ್ಚ್ 31ರ ಒಳಗಾಗಿ ಯಾರೆಲ್ಲ ಈ ಲಿಂಕ್ ಮಾಡುವುದಿಲ್ಲವೋ ಅವರಿಗೆ ಭಾರೀ ಮೊತ್ತದ ದಂಡ ವಿಧಿಸುವುದಾಗಿಯೂ ಎಚ್ಚರಿಕೆಯನ್ನು ನೀಡಲಾಗಿದೆ.
ಈಗಾಗಲೇ ಹಲವರು ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡುವಲ್ಲಿ ನಿರತರಾಗಿದ್ದಾರೆ.
ಒಂದೊಮ್ಮೆ ಈಗಲೂ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ, ನೀವು ಸಹ ಮಾರ್ಚ್ 31ರ ಒಳಗಾಗಿ
ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳುವುದು ಉತ್ತಮ ಇಲ್ಲದಿದ್ದರೆ, ನೀವೂ ಸಹ ದಂಡ ಪಾವತಿ ಮಾಡಬೇಕಾಗಬಹುದು.
Pension Scheme ಹೆಚ್ಚಿನ EPS ಪಿಂಚಣಿಗಾಗಿ ಶೀಘ್ರ ಜಂಟಿ ಫಾರ್ಮ್ ಆಯ್ಕೆ!
ಇನ್ನು ಎಲ್ಲಾ ಭಾರತೀಯರು ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಮಾರ್ಚ್ 31 ಎಂಬುದು ಗಮನಿಸಬೇಕಾದ ಸಂಗತಿ.
ಆಧಾರ್ - ಪ್ಯಾನ್ ಲಿಂಕ್
ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡಲು 1000 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ.
ಏಪ್ರಿಲ್ 6ಕ್ಕೆ ಅದ್ಧೂರಿ ಕರಗ ಶಕ್ತ್ಯೋತ್ಸವ ಆಚರಣೆ, ಈ ಬಾರಿಯ ವಿಶೇಷತೆ ಏನು!
ಮಾರ್ಚ್ 31ರೊಳಗೆ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡದವರ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ, ಹೂಡಿಕೆ ಸೇರಿದಂತೆ ಬ್ಯಾಂಕಿಂಗ್ ಸೇವೆಗಳು ಮತ್ತು ಹಣಕಾಸು ವಹಿವಾಟುಗಳನ್ನು ಕೈಗೊಳ್ಳಲಾಗುವುದಿಲ್ಲ.
ಹೀಗಾಗಿ ಮಾರ್ಚ್ 31ರೊಳಗೆ ಕಡ್ಡಾಯವಾಗಿ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಹೆಚ್ಚಿನ ಭಾರತೀಯ ನಾಗರಿಕರು ಆಧಾರ್ - ಪ್ಯಾನ್ ಕಾರ್ಡ್‌ಗಳನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕು.
ಆದರೆ, ಕೇಂದ್ರ ಸರ್ಕಾರವು ಕೆಲವರಿಗೆ ಮಾತ್ರ ಆಧಾರ್-ಪ್ಯಾನ್ ಕಾರ್ಡ್ ಅನ್ನು ಕಡ್ಡಾಯವಾಗಿ ಲಿಂಕ್ ಮಾಡುವುದರಿಂದ ವಿನಾಯಿತಿ ನೀಡಿದೆ.
ಅದರಂತೆ, ಯಾರು ಆಧಾರ್ - ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಬೇಕಾಗಿಲ್ಲ ಎಂಬುದನ್ನು ನಾವು ನೋಡಬಹುದು.
- ಅಸ್ಸಾಂ, ಮೇಘಾಲಯ, ಜಮ್ಮು ಮತ್ತು ಕಾಶ್ಮೀರದ ಜನರು.
- ಸಾಗರೋತ್ತರ ಭಾರತೀಯರು (NRIಗಳು).
- 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು.
- ಭಾರತದ ನಾಗರಿಕರನ್ನು ಹೊರತುಪಡಿಸಿ ಭಾರತದಲ್ಲಿ ವಾಸಿಸುವ ವ್ಯಕ್ತಿಗಳು
ಇವರೆಲ್ಲರೂ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವ ಅಗತ್ಯವಿಲ್ಲ. ಎಲ್ಲಾ ಇತರ ಭಾರತೀಯ ನಾಗರಿಕರು ಆಧಾರ್ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು.
Share your comments