1. ಸುದ್ದಿಗಳು

weather change ಹವಾಮಾನ ಬದಲಾವಣೆಯಿಂದ ಸಂಕಷ್ಟಕ್ಕೆ ಸಿಲುಕಲಿವೆ ಭಾರತದ 9 ರಾಜ್ಯಗಳು: ಎಚ್ಚರಿಕೆ!

Hitesh
Hitesh
9 states of India will suffer from climate change: Warning!

ಹವಾಮಾನ ಬದಲಾವಣೆಯಿಂದಾಗಿ ಈಗಾಗಲೇ ವಿಶ್ವದಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಂಡಿದೆ.

ಅದರಲ್ಲಿ ಅಕಾಲಿಕ ಮಳೆ, ಭೂಕುಸಿತ ಸೇರಿದಂತೆ ಹಲವು ಸಮಸ್ಯೆಗಳು ಈಗಾಗಲೇ ಹೆಚ್ಚಾಗಿವೆ. ಆದರೆ, ಮುಂದಿನ ದಿನಗಳಲ್ಲಿ ಇದಕ್ಕಿಂತಲೂ

ಭೀಕರವಾದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.  

ನಿರಂತರ ಹವಾಮಾನ ಬದಲಾವಣೆಯಿಂದಾಗಿ ವಿಶ್ವದ 50 ಪ್ರದೇಶಗಳಲ್ಲಿ ಸಮಸ್ಯೆ ಆಗಲಿದ್ದು, ದೇಶದ 9 ರಾಜ್ಯಗಳನ್ನೂ ಇದರಲ್ಲಿ ಗುರುತಿಸಲಾಗಿದೆ.  

PMKisanUpdate ಪಿ.ಎಂ ಕಿಸಾನ್‌ ಹಣ ಇದೇ ದಿನ ನಿಮ್ಮ ಖಾತೆಗೆ ಬರಲಿದೆ!

ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಮಹಾರಾಷ್ಟ್ರ ಸೇರಿದಂತೆ ಭಾರತದ ಒಂಬತ್ತು ರಾಜ್ಯಗಳು ಹವಾಮಾನ ಬದಲಾವಣೆಯ ಅಪಾಯಗಳಿಂದಾಗಿ

ನಿರ್ಮಿತ ಪರಿಸರಕ್ಕೆ ಹಾನಿಯಾಗುವ ಅಪಾಯವನ್ನು ಎದುರಿಸುತ್ತಿರುವ ವಿಶ್ವದ ಅಗ್ರ 50 ಪ್ರದೇಶಗಳಲ್ಲಿ ಸೇರಿದೆ.

Children Missing Case 9,018 ಮಕ್ಕಳು ರಾಜ್ಯದಲ್ಲಿ ನಾಪತ್ತೆ: ಆತಂಕಕ್ಕೆ ಕಾರಣವಾದ ಅಂಕಿ- ಅಂಶ!

ದೇಶದ ಬಿಹಾರ, ಉತ್ತರ ಪ್ರದೇಶ, ತಮಿಳುನಾಡು ಸೇರಿದಂತೆ ಭಾರತದ ಒಂಬತ್ತು ರಾಜ್ಯಗಳು ಹವಾಮಾನ ಬದಲಾವಣೆಯ ಅಪಾಯಗಳಿಂದಾಗಿ

ನಿರ್ಮಿತ ಪರಿಸರಕ್ಕೆ ಹಾನಿಯಾಗುವ ಅಪಾಯವನ್ನು ಎದುರಿಸುತ್ತಿರುವ ವಿಶ್ವದ ಅಗ್ರ 50 ಪ್ರದೇಶಗಳಲ್ಲಿ ಸೇರಿವೆ ಎಂದು ಹೊಸ ವರದಿಯಲ್ಲಿ ಉಲ್ಲೇಖಿಸಲಾಗಿದೆ.   

ಗ್ರಾಸ್ ಡೊಮೆಸ್ಟಿಕ್ ಕ್ಲೈಮೇಟ್ ರಿಸ್ಕ್ ಎಂಬ ಹೆಸರಿನಲ್ಲಿ ವರದಿ ಮಂಡಿಸಲಾಗಿದ್ದು, 2050 ರಲ್ಲಿ ಪ್ರಪಂಚದಾದ್ಯಂತ 2,600 ಕ್ಕೂ ಹೆಚ್ಚು

ರಾಜ್ಯಗಳು ಮತ್ತು ಪ್ರಾಂತ್ಯಗಳಲ್ಲಿ ಭೌತಿಕ ಹವಾಮಾನ ಅಪಾಯವನ್ನು ಎದುರಿಸುತ್ತವೆ ಎಂದು ವರದಿ ಮಾಡಿದೆ.

ರಾಜ್ಯವು ಹೆಚ್ಚು ನಿರ್ಮಾಣಗೊಂಡಷ್ಟೂ ಅಪಾಯವು ಹೆಚ್ಚಾಗುತ್ತದೆ.

ಇನ್ನು ವಿಶ್ವದಲ್ಲಿ ಪ್ರವಾಹ, ಕಾಡಿನ ಬೆಂಕಿ ಮತ್ತು ಸಮುದ್ರದ ನೀರಿನ ಮಟ್ಟ ಏರಿಕೆಯಂತಹ ಹವಾಮಾನ ವೈಪರೀತ್ಯಗಳಿಂದ ಕಟ್ಟಡಗಳು ಮತ್ತು ಆಸ್ತಿಗಳಿಗೆ ಹಾನಿಯುಂಟಾಗಲಿದೆ.

ವಿಶ್ಲೇಷಣೆಯ ಪ್ರಕಾರ, 2050ರಲ್ಲಿ ಅಗ್ರ 50 ಅಪಾಯದಲ್ಲಿರುವ ರಾಜ್ಯಗಳು ಮತ್ತು ಪ್ರಾಂತ್ಯಗಳಲ್ಲಿ

ಶೇಕಡಾ 80ರಷ್ಟು ಚೀನಾ, ಅಮೆರಿಕ ಮತ್ತು ಭಾರತದಲ್ಲಿವೆ ಎಂಬ ಆಂಶ ಆತಂಕಕ್ಕೆ ಕಾರಣವಾಗಿದೆ.  

ಚೀನಾದ ನಂತರ, ಭಾರತವು ಅಗ್ರ 50 ರಲ್ಲಿ ಅತಿ ಹೆಚ್ಚು ರಾಜ್ಯಗಳನ್ನು (ಒಂಬತ್ತು) ಹೊಂದಿದೆ.

ಈ ವರದಿಯ ಅನ್ವಯ ಬಿಹಾರ (22 ನೇ ಸ್ಥಾನ), ಉತ್ತರ ಪ್ರದೇಶ (25ನೇ ಸ್ಥಾನ), ಅಸ್ಸಾಂ (28ನೇ ಸ್ಥಾನ),

ರಾಜಸ್ಥಾನ (32ನೇ ಸ್ಥಾನ ), ತಮಿಳುನಾಡು (36ನೇ ಸ್ಥಾನ), ಮಹಾರಾಷ್ಟ್ರ ( 38ನೇ ಸ್ಥಾನ), ಗುಜರಾತ್ (48ನೇ ಸ್ಥಾನ), ಪಂಜಾಬ್ (50ನೇ ಸ್ಥಾನ) ಮತ್ತು ಕೇರಳ (52ನೇ ಸ್ಥಾನ)ದಲ್ಲಿದೆ.  

Aadhar Card -Sim Card Link ಸಿಮ್‌ ಕಾರ್ಡ್‌ಗೂ ಆಧಾರ್‌ ಕಾರ್ಡ್‌ ಜೋಡಣೆ: ಕಾರಣ ಏನು ಗೊತ್ತೆ ?

ರಾಜ್ಯದಲ್ಲಿ ಹವಾಮಾನ ಹೇಗಿದೆ ?

ರಾಜ್ಯಾದ್ಯಂತ ಒಣಹವೆ ಮುಂದುವರಿದಿದೆ. ಯಾವುದೇ ಭಾಗದಲ್ಲಿ ಮಳೆ ಆಗಿರುವುದು ವರದಿ ಆಗಿಲ್ಲ.

ಗರಿಷ್ಠ ಉಷ್ಣಾಂಶವು ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ.

ಇನ್ನು ಮುಂದಿನ 24 ಗಂಟೆಗಳಲ್ಲಿ ಕನಿಷ್ಠ ಉಷ್ಣಾಂಶ ಕರಾವಳಿ ಮತ್ತು

ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ ಕಡಿಮೆಯಾಗುವ ಸಾಧ್ಯತೆಗಳಿವೆ.

ಉಳಿದಂತೆ ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಇಲ್ಲ.

ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 11.6ಡಿಗ್ರಿ ಸೆಲ್ಸಿಯಸ್‌ ಬಾಗಲಕೋಟೆಯಲ್ಲಿ ದಾಖಲಾಗಿದೆ.

ಮುಂದಿನ 48ಗಂಟೆಗಳ ಅವಧಿಯಲ್ಲಿಯೂ ರಾಜ್ಯದಲ್ಲಿ ಒಳನಾಡಿನ ಒಂದೆರಡು ಕಡೆಗಳಲ್ಲಿ 3ರಿಂದ 4 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರಲಿದೆ.

ಉಳಿದಂತೆ ಯಾವುದೇ ಭಾಗದಲ್ಲಿ ಮಳೆ ಆಗುವ ಸಾಧ್ಯತೆಗಳಿಲ್ಲ. ಹೀಗಾಗಿ, ಮೀನುಗಾರರಿಗೆ ಯಾವುದೇ ಮುನ್ನೆಚ್ಚರಿಕೆಯನ್ನು ನೀಡಿಲ್ಲ. 

ಹಣದುಬ್ಬರ ನಿಯಂತ್ರಣಕ್ಕೆ ಮಾಸ್ಟರ್‌ ಪ್ಲಾನ್‌ ಮಾಡ್ತಿದೆ ಕೇಂದ್ರ; ಪೆಟ್ರೋಲ್‌, ಡಿಸೇಲ್‌ ದರ ಇಳಿಕೆ ?!  

Published On: 21 February 2023, 02:26 PM English Summary: 9 states of India will suffer from climate change: Warning!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.