8ನೇ ವೇತನ ಆಯೋಗದ ಕುರಿತು ಇಲ್ಲಿದೆ ಕೇಂದ್ರದಿಂದ ಮಹತ್ವದ ಸುದ್ದಿ. ಏನಾಗಲಿದೆ 8ನೇ ವೇತನ ಆಯೋಗದ ನಿರ್ಧಾರ..
ಇದನ್ನೂ ಓದಿರಿ: ಹವಾಮಾನ ಇಲಾಖೆಯಿಂದ ಈ ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ; ಎಲ್ಲೆಲ್ಲಿ ಎಷ್ಟು ಮಳೆಯಾಗಲಿದೆ ಗೊತ್ತೆ?
8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗವನ್ನು ರಚಿಸಲು ಸರ್ಕಾರ ಚಿಂತನೆ ನಡೆಸಿಲ್ಲ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ ಲೋಕಸಭೆಗೆ ತಿಳಿಸಿದರು.
ಕೇಂದ್ರ ಸರ್ಕಾರಿ ನೌಕರರಿಗಾಗಿ ಸರ್ಕಾರವು ವೇತನ ಆಯೋಗ ರಚಿಸುವ ಪ್ರಸ್ತಾವ ಹೊಂದಿದ್ದರೆ, ಅದನ್ನು 2026ರ ಜನವರಿ 1ಕ್ಕೆ ಜಾರಿಗೆ ತರಬಹುದೇ?’ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಸಚಿವ ಚೌದರಿ ಅವರು ಲಿಖಿತ ಉತ್ತರ ನೀಡಿದ್ದಾರೆ.
‘ಕೇಂದ್ರ ಸರ್ಕಾರಿ ನೌಕರರಿಗಾಗಿ 8ನೇ ಕೇಂದ್ರ ವೇತನ ಆಯೋಗ (8th Pay Commission) ರಚನೆ ಮಾಡುವ ಯಾವುದೇ ಪ್ರಸ್ತಾವನೆಯು ಸರ್ಕಾರದ ಪರಿಗಣನೆಯಲ್ಲಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ದೊರೆಯಲಿದೆ ರೂ 20,000 ದಿಂದ 35,000 ಪ್ರೋತ್ಸಾಹಧನ! ಅರ್ಜಿ ಸಲ್ಲಿಕೆ ಹೇಗೆ ಗೊತ್ತೆ?
ಹಣದುಬ್ಬರದ ಕಾರಣದಿಂದಾಗಿ ನೌಕರರ ಸಂಬಳದ ನೈಜ ಮೌಲ್ಯದಲ್ಲಿನ ಕಡಿತವನ್ನು ಸರಿದೂಗಿಸಲು ತುಟ್ಟಿಭತ್ಯೆಗಳನ್ನು (ಡಿಎ) ಪಾವತಿಸಲಾಗುತ್ತದೆ.
ಹಣದುಬ್ಬರದ ದರದ ಆಧಾರದ ಮೇಲೆ ಪ್ರತಿ ಆರು ತಿಂಗಳಿಗೊಮ್ಮೆ ಡಿಎ ದರವನ್ನು ಪರಿಷ್ಕರಿಸಲಾಗುತ್ತದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕೈಗಾರಿಕಾ ಕಾರ್ಮಿಕರಿಗಾಗಿ ಬಿಡುಗಡೆ ಮಾಡುವ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ಮೂಲಕ ಅಳೆಯಲಾಗುವ ಹಣದುಬ್ಬರ ದರ ಡಿಎ ಹೆಚ್ಚಿಸಲಾಗುತ್ತದೆ ಎಂದು ಚೌದರಿ ವಿವರಿಸಿದರು
ರೈತರಿಗೆ ಗುಡ್ನ್ಯೂಸ್: ರೈತರಿಂದ ಗೋಮೂತ್ರ, ಸಗಣಿ ಖರೀದಿಸಲು ಮುಂದಾದ ಸರ್ಕಾರ! ಬೆಲೆ ಎಷ್ಟು ಗೊತ್ತೆ?
8th Pay Commission: ಕೇಂದ್ರ ಸರ್ಕಾರವು 2014 ಫೆಬ್ರುವರಿಯಲ್ಲಿ 7ನೇ ವೇತನ ಆಯೋಗವನ್ನು ರಚಿಸಿತ್ತು. ಸಮಿತಿಯ ಶಿಫಾರಸುಗಳು 2016ರ ಜನವರಿ 1ರಿಂದ ಜಾರಿಗೆ ಬಂದಿದ್ದವು.
Share your comments