1. ಸುದ್ದಿಗಳು

ಶೇ.86 ರಷ್ಟು ರೈತರು ಕೃಷಿ ಕಾಯ್ದೆಗಳನ್ನ ಬೆಂಬಲಿಸಿದ್ದರು..ಸುಪ್ರೀಂ ವರದಿ

KJ Staff
KJ Staff

ರೈತರ ತೀವ್ರ ಪ್ರತಿರೋಧದಿಂದಾಗಿ ಕಳೆದ ವರ್ಷ ಕೇಂದ್ರ ಸರ್ಕಾರ ಹಿಂಪಡೆದ 3 ಕೃಷಿ ಕಾಯ್ದೆಗಳ ಪರವಾಗಿ ದೇಶದ ಶೇ.86 ರೈತ ಸಂಘಟನೆಗಳು ಬೆಂಬಲ ನೀಡಿದ್ದರು. ಜೊತೆಗೆ ಅವುಗಳು ಈ ಕಾನೂನಗಳ ಜೊತೆ ನಿಂತಿದ್ದರಿ ಎಂದು ಸುಪ್ರೀಂ ಕೋರ್ಟ್‌ರಚಿಸಿರುವ, ಉನ್ನತ ಮಟ್ಟದ ತಜ್ಞರ ಸಮಿತಿಯಿಂದ ಬಹಿರಂಗಗೊಂಡಿದೆ. ಸುಮಾರು 33 ಮಿಲಿಯನ್ ರೈತ ಸಮುದಾಯವನ್ನು ಪ್ರತಿನಿಧಿಸುವ ಸುಮಾರು 86 ಪ್ರತಿಶತದಷ್ಟು ಜನರು ಈ ಕಾನೂನುಗಳನ್ನು ಬೆಂಬಲಿಸಿದ್ದಾರೆ. ಕಾಯಿದೆಗಳನ್ನು ಉಳಿಸಿಕೊಳ್ಳಲು ಪ್ರತಿಪಾದಿಸುವಾಗ, ಸಮಿತಿಯು, ಅದರ ಶಿಫಾರಸುಗಳು ಈಗ ಕಡಿಮೆ ಪರಿಣಾಮ ಬೀರುತ್ತವೆ ಎಂದು ಅಭಿಪ್ರಾಯ ನೀಡಿದೆ. ಅಷ್ಟೇ ಅಲ್ಲದೆ ಕೇಂದ್ರದ ಪೂರ್ವಾನುಮತಿಯೊಂದಿಗೆ ಕಾನೂನುಗಳನ್ನು ಅನುಷ್ಠಾನಗೊಳಿಸಲು, ಮತ್ತು ವಿನ್ಯಾಸಗೊಳಿಸಲು ರಾಜ್ಯಗಳಿಗೆ ತನ್ನದೆಯಾದ ವಿವೇಚನೆ ನೀಡಬೇಕೆಂದು ಸೂಚಿಸಿದೆ.

ಇದನ್ನೂ ಓದಿ:GOODNEWS: ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ ಧನ.. ಅರ್ಜಿ ಸಲ್ಲಿಕೆ ಹೇಗೆ..?

ಕಾಯಿದೆಗಳ ರದ್ದತಿ ಅಥವಾ ದೀರ್ಘಾವಧಿಯ ಅಮಾನತು ಕಾನೂನುಗಳನ್ನು ಬೆಂಬಲಿಸುವ ಮೂಕ ಬಹುಮತಕ್ಕೆ "ಅನ್ಯಾಯ" ಎಂದು ಅದು ಹೇಳಿದೆ. ಈ ಮೂರು ಕೃಷಿ ಕಾಯ್ದೆಗಳಿಂದ ರೈತರಿಗೆ ತುಂಬಾ ಅನುಕೂಲ ಆಗಲಿದ್ದು, ಅವುಗಳನ್ನು ಹಿಂಪಡೆಯಬಾರದು. ಮರಳಿ ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಅವುಗಳನ್ನು ಅನುಷ್ಠಾನಗೊಳಿಸಬಹುದು ಎಂದು ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು ಎಂಬುದು ಇದೀಗ ಬೆ:ಕಿಒಗೆ ಬಂದಿದೆ. ಮೂರು ಕಾನೂನುಗಳ ಅನುಷ್ಠಾನಕ್ಕೆ ತಡೆ ನೀಡಿ ಜನವರಿ 2021 ರಲ್ಲಿ ಸುಪ್ರೀಂ ಕೋರ್ಟ್‌ ಈ ಸಮಿತಿಯನ್ನು ರಚಿಸಿತು . ಇನ್ನು ಆರಂಭದಲ್ಲಿ ಈ ಸಮಿತಿಯಲ್ಲಿ ಖ್ಯಾತ ಕೃಷಿ ಅರ್ಥಶಾಸ್ತ್ರಜ್ಞ ಅಶೋಕ್ ಗುಲಾಟಿ, ಶೆಟ್ಕರಿ ಸಂಘಟನೆ (ಮಹಾರಾಷ್ಟ್ರ) ಅಧ್ಯಕ್ಷ ಅನಿಲ್ ಘನವತ್, ಮಾಜಿ ದಕ್ಷಿಣ-ಏಷ್ಯಾ ನಿರ್ದೇಶಕ ಸೇರಿದಂತೆ ನಾಲ್ಕು ಸದಸ್ಯರನ್ನು ಹೊಂದಿತ್ತು. ಅಂತರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ ಪ್ರಮೋದ್ ಕುಮಾರ್ ಜೋಶಿ, ಮತ್ತು ಭಾರತೀಯ ಕಿಸಾನ್ ಒಕ್ಕೂಟದ ಬಣದ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್. ತದನಂತರ ಸಮಿತಿಯಿಂದ ಹೊರಗುಳಿದರು.

ಇದನ್ನೂ ಓದಿ:ಪೋಸ್ಟ್‌ ಆಫೀಸ್‌ನಲ್ಲಿ 10000 Invest ಮಾಡಿದ್ರೆ ಬರೋಬ್ಬರಿ 16 ಲಕ್ಷ ಗಳಿಕೆ..!

ಸಾಕಷ್ಟು ಜನರು ಇದಕ್ಕೆ ವಿರೋಧಿಸಿದ್ದಾರೆ..
ಸಮಿತಿಯ ವರದಿಯನ್ನು ಬಿಡುಗಡೆ ಮಾಡುವಂತೆ ಮೂರು ಬಾರಿ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದರೂ, ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲ, ಹೀಗೆ ಮಾಡುತ್ತಿದ್ದೇನೆ ಎಂದು ಪುಣೆ ಮೂಲದ ರೈತ ಮುಖಂಡ ಅನಿಲ್ ಘನವತ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಮಿತಿಯು ತನ್ನ ವರದಿಯಲ್ಲಿ ಸುಮಾರು 38.3 ಮಿಲಿಯನ್ ರೈತರನ್ನು ಪ್ರತಿನಿಧಿಸುವ 73 ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿದೆ. ಅವರಲ್ಲಿ ಸುಮಾರು 86 ಪ್ರತಿಶತದಷ್ಟು ಜನರು ಕಾಯಿದೆಗಳನ್ನು ಸಂಪೂರ್ಣವಾಗಿ ಬೆಂಬಲಿಸಿದರು. ಆದರೆ ಸುಮಾರು 5.1 ಮಿಲಿಯನ್ ಜನರನ್ನ ಪ್ರತಿನಿಧಿಸುವ ಗುಂಪು ಇದಕ್ಕೆ ಪ್ರತಿರೋಧ ಒಡ್ಡಿತ್ತು. ಜೊತೆಗೆ 360,000 ರೈತರನ್ನು ಪ್ರತಿನಿಧಿಸುವ ಕೆಲ ಸಂಸ್ಥೆಗಳು ಕೆಲವು ಬದಲಾವಣೆಗಳೊಂದಿಗೆ ರಾಜಿಯಾಗಿ ಕಾಯಿದೆಗಳನ್ನು ಬೆಂಬಲಿಸಿದವು ಅವರು ವಿವರಿಸಿದ್ದಾರೆ.

ಇದನ್ನೂ ಓದಿ:Plane crash : 133 ಜನರಿದ್ದ ವಿಮಾನ ಪತನ..ಹಲವರು ಮೃತಪಟ್ಟಿರುವ ಶಂಕೆ

ಎಂಎಸ್‌ಪಿಗೆ ಸರ್ಕಾರದ ಬಳಿ ಆರ್ಥಿಕ ಬೊಕ್ಕಸವಿದೆಯೆ..?
ಇದಲ್ಲದೆ, ಸಮಿತಿಯು ಕೆಲ ಅಭಿಪ್ರಾಯಗಳನ್ನು ಆಹ್ವಾನಿಸಿತ್ತು. ಇದು 19,027 ಪ್ರಾತಿನಿಧ್ಯಗಳ ಸಲಹೆಗಳನ್ನು ಸ್ವೀಕರಿಸಿದೆ. ಅಲ್ಲಿ 3/2 ಜನರು ಕಾಯಿದೆಗಳನ್ನು ಬೆಂಬಲಿಸಿದ್ದಾರೆ ಎಂದು ಸಮಿತಿ ವರದಿ ನೀಡಿದೆ ಎಂದು ಹೇಳಿದ್ದಾರೆ.ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಗುಂಪುಗಳು ಯಾವುದೇ ಚರ್ಚೆಗಳಲ್ಲಿ ಭಾಗವಹಿಸಲಿಲ್ಲ. ಆದರೆ ಮಾಧ್ಯಮಗಳಲ್ಲಿ ಪ್ರಸಾರವಾದ ಅವರ ಆಕ್ಷೇಪಣೆಗಳು ಮತ್ತು ಕಳವಳಗಳನ್ನು, ಅದು ತನ್ನ ಶಿಫಾರಸುಗಳನ್ನು ನೀಡಿದಾಗ ಪರಿಗಣಿಸಲಾಗಿದೆ ಎಂದು ಸಮಿತಿಯು ಗಮನಿಸಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಯನ್ನು ಕಾನೂನುಬದ್ಧಗೊಳಿಸಬೇಕೆಂಬ ರೈತ ಸಂಘಗಳ ಬೇಡಿಕೆಯ ಕುರಿತು, ಸಮಿತಿಯು ಇದು ತರ್ಕವನ್ನು ಆಧರಿಸಿಲ್ಲ ಮತ್ತು ಆದ್ದರಿಂದ ಕಾರ್ಯಸಾಧ್ಯವಲ್ಲ ಎಂದು ಹೇಳಿದೆ. "ಉತ್ಪಾದಿತ ಯಾವುದೇ ಉತ್ಪನ್ನವನ್ನು ಕಾರ್ಯಸಾಧ್ಯವಾದ ಬೆಲೆಗೆ ವ್ಯಾಪಾರ ಮಾಡಬೇಕಾಗುತ್ತದೆ. ಎಂಎಸ್‌ಪಿ ಎನ್ನುವುದು ರೈತರನ್ನು ವಿಶೇಷವಾಗಿ ಕೊಯ್ಲಿನ ಸಮಯದಲ್ಲಿ ಬೆಲೆಯಲ್ಲಿ ಯಾವುದೇ ಅನಗತ್ಯ ಕುಸಿತದ ವಿರುದ್ಧ ರಕ್ಷಿಸಲು ಸೂಚಿಸುವ ರಕ್ಷಣಾ ಬೆಲೆಯಾಗಿದೆ. ಪ್ರಸ್ತುತ ಎಂಎಸ್‌ಪಿ ವ್ಯಾಪ್ತಿಗೆ ಒಳಪಡುವ ಎಲ್ಲಾ 23 ಸರಕುಗಳ ಉತ್ಪಾದನೆಯನ್ನು ಖರೀದಿಸಲು ಸರ್ಕಾರದ ಬಳಿ ಆರ್ಥಿಕ ಬೊಕ್ಕಸವಿಲ್ಲ ಎಂದು ವರದಿ ಹೇಳಿದೆ.

ಇದನ್ನೂ ಓದಿ:ವ್ಯಾಯಾಮ ಇಲ್ಲದೆ ತೆಳ್ಳಗಾಗೋದು ಹೇಗೆ..ಹೀಗೆ ಮಾಡಿದ್ರೆ ಸಾಕು

Published On: 22 March 2022, 09:48 AM English Summary: 86% farmer groups supported 3 repealed laws

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.