1. ಸುದ್ದಿಗಳು

ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್‌; ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ! ಏನಿದು ಗೊತ್ತೆ?

Kalmesh T
Kalmesh T
7th Pay Commission Latest News-KTK

ಕೇಂದ್ರ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಈ ನಿರ್ಧಾರದಿಂದ ಸರ್ಕಾರಿ ನೌಕರರಿಗೆ ನೇರ ಲಾಭ ಸಿಗಲಿದೆ. ಇಲ್ಲಿದೆ ಈ ಕುರಿತಾದ ವಿವರ.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ; ಹವಾಮಾನ ಇಲಾಖೆಯಿಂದ ಅತಿ ಹೆಚ್ಚು ಮಳೆಯಾಗುವ ಸೂಚನೆ!

ಕೇಂದ್ರ ಸರ್ಕಾರ ನೌಕರರ ಪಾಲಿಗೆ ಸಿಹಿಸುದ್ದಿ ನೀಡಿದೆ. ಕೇಂದ್ರ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.

ಡಿಎ (DA) ಹೆಚ್ಚಳಕ್ಕೂ ಮೊದಲು ಕೇಂದ್ರ ನೌಕರರಿಗೆ ಭರ್ಜರಿ ಸುದ್ದಿ ಪ್ರಕಟವಾಗಿದೆ. ನೌಕರರಿಗೆ ಮನೆ ನಿರ್ಮಿಸಲು ನೀಡುವ ಕಟ್ಟಡದ ಮುಂಗಡದ (HBA Interest Rates) ಬಡ್ಡಿ ದರವನ್ನು ಅಂದರೆ ಬ್ಯಾಂಕ್‌ನಿಂದ ಪಡೆದ ಗೃಹ ಸಾಲವನ್ನು ಶೇಕಡಾ 7.9 ರಿಂದ ಶೇಕಡಾ 7.1 ಕ್ಕೆ ಇಳಿಕೆ ಮಾಡಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಆಫಿಸ್ ಮೆಮೊರೆಂಡಮ್ (Office Memorandum)  ಕೂಡ ಜಾರಿಗೊಳಿಸಿದೆ. ಸರ್ಕಾರದ ಈ ನಿರ್ಧಾರದಿಂದ ನೌಕರರಿಗೆ ಹೆಚ್ಚಿನ ಲಾಭ ದೊರೆಯಲಿದೆ.

ರೈತರಿಗೆ ಗುಡ್‌ನ್ಯೂಸ್‌: 10 ಸಾವಿರ ಸೌರಶಕ್ತಿ ಚಾಲಿತ ಕೃಷಿ ಪಂಪ್‌ಸೆಟ್ ವಿತರಿಸಲು ರಾಜ್ಯ ಸರ್ಕಾರ ನಿರ್ಧಾರ!

ನೌಕರರಿಗೆ ಸಂತಸದ ಸುದ್ದಿ!

ಈ ನಿರ್ಧಾರದ ಅಡಿಯಲ್ಲಿ, ಏಪ್ರಿಲ್ 1, 2022 ರಿಂದ ಮಾರ್ಚ್ 31, 2023 ರವರೆಗೆ ಸರ್ಕಾರವು ನೌಕರರಿಗೆ ಮನೆ ನಿರ್ಮಿಸಲು ಅಥವಾ ಖರೀದಿಸಲು ಬ್ಯಾಂಕ್‌ನಿಂದ ಪಡೆದ ಗೃಹ ಸಾಲವನ್ನು ತೀರಿಸಲು ನೀಡುವ ಮುಂಗಡ ಹಣದ ಬಡ್ಡಿಯನ್ನು  80 ಬೇಸಿಸ್ ಪಾಯಿಂಟ್ ಅಥವಾ ಶೇ.0.8ರಷ್ಟು ಕಡಿತಗೊಳಿಸಿದೆ.

ಅಂದರೆ, ಇದೀಗ ಸ್ವಂತ ಮನೆ ಹೊಂದುವ ಸರ್ಕಾರಿ ನೌಕರರ ಕನಸು ಈಡೇರುವುದು ಮತ್ತಷ್ಟು ಸುಲಭವಾಗಲಿದೆ. ನೌಕರರು ಇದೀಗ ಈ ಹೊಸ ಬಡ್ಡಿದರವನ್ನು ಮಾರ್ಚ್ 31, 2023 ರವರೆಗೆ ಅನ್ವಯಿಸಲಿದೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಈ ಆಫೀಸ್ ಮೆಮೊರೆಂಡಮ್ ಜಾರಿಗೊಳಿಸಿದ್ದು, ಮುಂಗಡವಾಗಿ ಪಡೆಯುವ ಹಣದ ಬಡ್ಡಿದರಗಳಲ್ಲಿ ಕಡಿತದ ಬಗ್ಗೆ ಮಾಹಿತಿಯನ್ನು ನೀಡಿದೆ.

ನೌಕರರು ಇದೀಗ ಮಾರ್ಚ್ 31, 2023 ರವರೆಗೆ ವಾರ್ಷಿಕ ಶೇಕಡಾ 7.1 ರ ದರದಲ್ಲಿ ಮುಂಗಡವನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಅದು ಹೇಳಿದೆ.

ಸರ್ಕಾರದ ಈ ಪ್ರಕಟಣೆಯ ಮೊದಲು ಮುಂಗಡ ಹಣದ ವಾರ್ಷಿಕ ಬಡ್ಡಿ ದರ ಶೇ.7.9 ರಷ್ಟಿತ್ತು. ಸರ್ಕಾರದ ನಿರ್ಧಾರದ ಅಡಿಯಲ್ಲಿ, ನೌಕರರು ಇದೀಗ ಮತ್ತಷ್ಟು ಅಗ್ಗದ ದರದಲ್ಲಿ ತಮ್ಮ ಮನೆಗಳನ್ನು ನಿರ್ಮಿಸಬಹುದು.

ಬ್ರೇಕಿಂಗ್‌: ಉಚಿತ ಪಡಿತರ ಯೋಜನೆ ನಿಲ್ಲಿಸಲು ಕೇಂದ್ರದ ನಿರ್ಧಾರ!

ಈ ಸರ್ಕಾರಿ ಸೌಲಭ್ಯದ ಅಡಿ ಎಷ್ಟು ಅಡ್ವಾನ್ಸ್ ಹಣ ಸಿಗಲಿದೆ?

ಎಂಬ ಪ್ರಶ್ನೆ ಇದೀಗ ನಿಮ್ಮ ಮನಸ್ಸಿನಲ್ಲಿಯೂ ಇರಬಹುದು. ಸರ್ಕಾರವು ನೀಡುವ ಈ ವಿಶೇಷ ಸೌಲಭ್ಯದ ಅಡಿಯಲ್ಲಿ, ಕೇಂದ್ರ ನೌಕರರು ತಮ್ಮ ಮೂಲ ವೇತನದ ಪ್ರಕಾರ 34 ತಿಂಗಳುಗಳ ವೇತನ ಅಥವಾ ಗರಿಷ್ಠ 25 ಲಕ್ಷದವರೆಗೆ ಎಂಬ ಎರಡು ರೀತಿಯಲ್ಲಿ ಅಡ್ವಾನ್ಸ್ ಪಡೆಯಬಹುದು.

ಇದಲ್ಲದೆ, ಮನೆಯ ಒಟ್ಟು ವೆಚ್ಚ ಅಥವಾ ಮರುಪವತಿಸುವ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೌಕರರು ಯಾವುದು ಕಡಿಮೆಯೋ, ಆ ಮೊತ್ತವನ್ನು ಮುಂಗಡವಾಗಿ ಪಡೆದುಕೊಳ್ಳಬಹುದು.

ಈಗ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ದೊರೆಯಲಿದೆ 3 ಲಕ್ಷದವರೆಗೆ ಸಾಲ!

HBA ಎಂದರೇನು ಗೊತ್ತಾ?

ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಮನೆ ನಿರ್ಮಿಸಲು ಮುಂಗಡ ಹಣವನ್ನು ನೀಡುತ್ತದೆ ಎನ್ನುವುದು.

ಇದರಲ್ಲಿ ಉದ್ಯೋಗಿಯು ತನ್ನ ಅಥವಾ ತನ್ನ ಹೆಂಡತಿಯ ಹೆಸರಿನಲ್ಲಿ ತೆಗೆದಿರುವ ನಿವೇಶನದಲ್ಲಿ ಮನೆ ಕಟ್ಟಲು ಮುಂಗಡ ಪಡೆದುಕೊಳ್ಳಬಹುದು.

ಈ ಯೋಜನೆಯನ್ನು 1 ಅಕ್ಟೋಬರ್ 2020 ರಿಂದ ಆರಂಭಿಸಲಾಗಿದೆ ಮತ್ತು ಇದರ ಅಡಿಯಲ್ಲಿ, 31 ಮಾರ್ಚ್ 2023 ರವರೆಗೆ, ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ 7.1% ಬಡ್ಡಿ ದರದಲ್ಲಿ ಮನೆ ನಿರ್ಮಾಣಕ್ಕಾಗಿ ಮುಂಗಡವನ್ನು ನೀಡುತ್ತದೆ.

Published On: 12 July 2022, 10:46 AM English Summary: 7th Pay Commission Latest News-KTK

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.