1. ಸುದ್ದಿಗಳು

7th Pay Commison: ಮತ್ತೊಮ್ಮೆ ಹೆಚ್ಚಳವಾಗುತ್ತಾ DA? ಕೇಂದ್ರ ನೌಕರರಿಗೆ ಮತ್ತೆ ಸಂತೋಷದ ಸುದ್ದಿ..?

Maltesh
Maltesh
7th Pay Commission: DA hike again?

ಕೆಲ ದಿನಗಳ ಹಿಂದಷ್ಟೆ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿ ಸಿಹಿಸುದ್ದಿಯನ್ನು ನೀಡಲಾಗಿತ್ತು. ಅದರ ಬೆನ್ನಲ್ಲೇ ಇದೀಗೆ ಮತ್ತೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ದೊರೆಯುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಈ ಬಾರಿ ಉದ್ಯೋಗಿಗಳ ಸಂಬಳದಲ್ಲು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಸಾಮಾನ್ಯವಾಗಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಏರಿಕೆ ಮಾಡಲಾಗುತ್ತದೆ. ಅದೇ ರೀತಿ ಈ ಹಿಂದೆ ಏರಿಕೆ ಮಾಡಿದ್ದಾಗ ನೌಕರರ ಸಂಬಳದಲ್ಲಿ ಗಣನೀಯ ಏರಿಕೆ ಕಂಡು ಬಂದಿತ್ತು. ಜನವರಿ ಹಾಗೂ ಜೂನ್‌ನಲ್ಲಿ ತುಟ್ಟಿ ಭತ್ಯೆಯನ್ನು ಪರಿಷ್ಕರಣೆ ಮಾಡಲಾಗುತ್ತದೆ. ಒಂದು ವೇಳೆ ಉದಾಹರಣೆಗೆ ಜನವರಿಯಲ್ಲಿ ಮಾಡುತ್ತಿದ್ದರೆ ಕಳೆದ ಕೆಲ ತಿಂಗಳುಗಳ ದತ್ತಾಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

2023 ರ ಈ ಸಾಲಿನಲ್ಲಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಆದರೆ ಎರಡನೇ ತುಟ್ಟಿ ಭತ್ಯೆಯ ಹೆಚ್ಚಳವನ್ನು ಮುಂದಿನ ತಿಂಗಳು ಅಂದರೇ ಜೂನ್‌ನಲ್ಲಿ ಮಾಡುವ ಸಾಧ್ಯತೆಗಳಿವೆ ಎಂದು ವರದಿಗಳಾಗಿವೆ. ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಎಐಸಿಪಿಐ ಸೂಚ್ಯಂಕ ಮತ್ತೊಮ್ಮೆ ಹೆಚ್ಚಿದೆ. ಜನವರಿಯಲ್ಲಿ ಈ ಸೂಚ್ಯಂಕವು 132.8 ಪಾಯಿಂಟ್‌ಗಳಷ್ಟಿತ್ತು. ಫೆಬ್ರವರಿ ತಿಂಗಳಲ್ಲಿ 0.1 ಪಾಯಿಂಟ್‌ಗಳಿಂದ 132.7 ಪಾಯಿಂಟ್‌ಗಳಿಗೆ ಇಳಿಕೆಯಾಗಿದೆ.

ಅದೇ ಸಮಯದಲ್ಲಿ, ಅಂಕಿಅಂಶವು ಮಾರ್ಚ್ ತಿಂಗಳಲ್ಲಿ 0.6 ಪಾಯಿಂಟ್‌ಗಳಿಂದ 133.3 ಪಾಯಿಂಟ್‌ಗಳಿಗೆ ಏರಿತು. ಅಂದರೆ, ಒಂದು ತಿಂಗಳ ಹಿಂದೆ ಅಂದರೆ ಫೆಬ್ರವರಿ 2023ಕ್ಕಿಂತ 0.45 ಪ್ರತಿಶತ ಮತ್ತು ಒಂದು ವರ್ಷದ ಹಿಂದೆ ಅಂದರೆ ಮಾರ್ಚ್ 2022 ರ ಈ ಅವಧಿಯಲ್ಲಿ 0.80 ಪ್ರತಿಶತ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ತುಟ್ಟಿಭತ್ಯೆ ಮತ್ತು ಪರಿಹಾರವನ್ನು ಮತ್ತೊಮ್ಮೆ ಹೆಚ್ಚಿಸಲು ನೌಕಕರ ಬಳಗದಿಂದ ಸಾಕಷ್ಟು ಬೇಡಿಕೆಗಳನ್ನು ಕೇಳಲಾಗುತ್ತಿದೆ.

ಉದ್ಯೋಗಿಗಳ ಡಿಎ ಪ್ರಸ್ತುತ ಶೇಕಡಾ 46 ರಷ್ಟಿದೆ. ಆದರೆ ಡಿಎ ಹೆಚ್ಚಳಕ್ಕೂ ಮುನ್ನ ನೌಕರರ ಡಿಎ ಶೇ 42ರಷ್ಟಿತ್ತು. ನೌಕರರ ಡಿಎ ಶೇ 4ರಷ್ಟು ಹೆಚ್ಚಿಸಲಾಗಿದೆ. ಅಲ್ಲದೆ, ಮುಂದಿನ ಡಿಎ ಕೂಡ ಶೇ.4ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ವರ್ಷದ ಎರಡನೇ ಡಿಎ ಹೆಚ್ಚಳಕ್ಕೆ ಈಗ ನೌಕರರು ಒತ್ತಾಯಿಸುತ್ತಿದ್ದಾರೆ. ಜುಲೈ ತಿಂಗಳಲ್ಲೇ ಎರಡನೇ ಡಿಎ ಹೆಚ್ಚಳ ಆಗಬೇಕು ಎಂಬ ನಿರೀಕ್ಷೆ ನೌಕರರದ್ದು. ಅಲ್ಲದೆ, ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನೌಕರರ ಎರಡನೇ ಡಿಎಯನ್ನು ಹೆಚ್ಚಿಸಬಹುದು.

Published On: 10 May 2023, 04:32 PM English Summary: 7th Pay Commission: DA hike again?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.