1. ಸುದ್ದಿಗಳು

ಸರ್ಕಾರಿ ನೌಕರರ ಮೂಲ ವೇತನ ಶೀಘ್ರದಲ್ಲೇ 21 ಸಾವಿರಕ್ಕೆ ಏರಿಕೆ..ಏನಿದು ಹೊಸ ಲೆಕ್ಕಾಚಾರ

Maltesh
Maltesh
ಸಾಂದರ್ಭಿಕ ಚಿತ್ರ

7th Pay Commision: ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಶೀಘ್ರದಲ್ಲೇ ಲಭ್ಯವಾಗಲಿದೆಯೇ ಎಂಬ ಚರ್ಚೆಯೊಂದು  ಇದೀಗ ನಡೆಯುತ್ತಿದೆ. ಹೌದು ಮತ್ತೊಮ್ಮೆ ಕೇಂದ್ರದ ಮೋದಿ ಸರ್ಕಾರ ಉದ್ಯೋಗಿಗಳಿಗೆ ದೊಡ್ಡ ಉಡುಗೊರೆ ನೀಡಬಹುದು ಮತ್ತು ಮೂಲ ವೇತನದಲ್ಲಿ ದೊಡ್ಡ ಹೆಚ್ಚಳವನ್ನುಮಾಡಬಹುದು ಎನ್ನಲಾಗುತ್ತಿದೆ.

ಇತ್ತೀಚಿನ ಮಾಧ್ಯಮದ ವರದಿಗಳ ಪ್ರಕಾರ, ಕೇಂದ್ರ ಉದ್ಯೋಗಿಗಳ ಫಿಟ್‌ಮೆಂಟ್ ಅಂಶವನ್ನು ಮತ್ತೊಮ್ಮೆ ಹೆಚ್ಚಿಸಬಹುದು. ಪರಿಣಾಮ ಇದು ಮೂಲ ವೇತನವನ್ನು 18000 ರಿಂದ 26000 ಕ್ಕೆ ಹೆಚ್ಚಿಸಲಿದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. , ಆದರೆ ಇದು ಯಾವಾಗ ಹೆಚ್ಚಳವಾಗುತ್ತದೆ  ಎಂದು ಇನ್ನೂ ಅಧಿಕೃತವಾದ ಮಾಹಿತಿಯಿಲ್ಲ.

ವಾಸ್ತವವಾಗಿ, ಪ್ರಸ್ತುತ ಕೇಂದ್ರೀಯ ನೌಕರರ ಫಿಟ್‌ಮೆಂಟ್ ಅಂಶವು ಶೇಕಡಾ 2.57 ರಷ್ಟಿದೆ. ಇದನ್ನು ಶೇಕಡಾ 3.68 ಕ್ಕೆ ಹೆಚ್ಚಿಸಬೇಕೆಂದು ಕೇಂದ್ರ ಸರ್ಕಾರಿ ನೌಕರರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಸರ್ಕಾರ ಶೀಘ್ರದಲ್ಲೇ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವ ಬಗ್ಗೆ ಯೋಚಿಸಬಹುದು. ಇನ್ನು ಈ ಕುರಿತು  ಮುಂಬರುವ ದಿನಗಳಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪರಿಗಣಿಸಬಹುದು ಎಂಬ ಸುದ್ದಿಯೂ ಬರುತ್ತಿದೆ.

Breaking News: ಗ್ರಾಹಕರ ಹಕ್ಕುಗಳ ಉಲ್ಲಂಘನೆ; Ola ಮತ್ತು Uber ಗೆ ನೋಟಿಸ್‌..!

Subsidy: ಎರೆಹುಳು ತೊಟ್ಟಿ ನಿರ್ಮಾಣಕ್ಕೆ ರೈತರಿಗೆ ಸಿಗಲಿದೆ ₹27000 ಸಹಾಯಧನ..!

ಮೋದಿ ನೇತೃತ್ವದ ಸರಕಾರ ಇದನ್ನು ಹೆಚ್ಚಿಸಿದರೆ ಮೂಲ ವೇತನ ನೇರವಾಗಿ 18000ದಿಂದ 26000ಕ್ಕೆ ಏರಿಕೆಯಾಗಲಿದೆ. ಇದರಿಂದ  ದೇಶದ ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಇದರ ಲಾಭ ಸಿಗಲಿದೆ.

ಈ ಹಿಂದೆ ಖಜಾನೆಯ ಹೊರೆ ಹೆಚ್ಚುತ್ತಿರುವ ಕಾರಣ 2022ರಲ್ಲಿ ಫಿಟ್‌ಮೆಂಟ್ ಅಂಶ ಹೆಚ್ಚಿಸುವ ಯಾವುದೇ ಪರಿಸ್ಥಿತಿಯಿಲ್ಲ ಎಂಬ ಸುದ್ದಿಯಿತ್ತು. ಆದರೆ ಈ ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ಶೀಘ್ರದಲ್ಲೇ ಇದನ್ನು ಪರಿಗಣಿಸಬಹುದು ಎನ್ನಲಾಗುತ್ತಿದೆ. ಆದರೆ, ಇದುವರೆಗೆ ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಅಥವಾ ದೃಢೀಕರಣವನ್ನು ನೀಡಲಾಗಿಲ್ಲ. ಈ ಹಿಂದೆ 2016 ರಲ್ಲಿ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಲಾಯಿತು ಮತ್ತು ಕನಿಷ್ಠ ಮೂಲ ವೇತನವನ್ನು 6,000 ರೂ.ನಿಂದ 18,000 ರೂ.ಗೆ ಹೆಚ್ಚಿಸಲಾಯಿತು.

EPFO ಖಾತೆದಾರರಿಗೆ ಗುಡ್ನ್ಯೂಸ್: ಇನ್ಮುಂದೆ SMS ಮತ್ತು Missed Call ಮೂಲಕ ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡಬಹುದು!

PMUY: Good News ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ದೊರೆಯಲಿದೆ ಉಚಿತ ಗ್ಯಾಸ್ ಸಿಲೆಂಡರ್..!

34 ತಿದ್ದುಪಡಿಗಳೊಂದಿಗೆ 7 ನೇ ವೇತನ ಆಯೋಗದ ಶಿಫಾರಸುಗಳನ್ನು ಅನುಮೋದಿಸಿದ ನಂತರ ಜೂನ್ 2017 ರಲ್ಲಿ ಪ್ರವೇಶ ಹಂತದ ಮೂಲ ವೇತನವನ್ನು ತಿಂಗಳಿಗೆ 7,000 ರೂ.ನಿಂದ 18,000 ರೂ. ಉನ್ನತ ಮಟ್ಟದ ಅಂದರೆ ಕಾರ್ಯದರ್ಶಿಯನ್ನು 90,000 ರೂ.ನಿಂದ 2.5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

 7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್; ಶೇ.14% ರಷ್ಟು ತುಟ್ಟಿಭತ್ಯೆ ಹೆಚ್ಚಳ..!

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

7 ನೇ ವೇತನ ಆಯೋಗದಲ್ಲಿ ಮಾಡಲಾದ ಪೇ ಮ್ಯಾಟ್ರಿಕ್ಸ್ ಫಿಟ್‌ಮೆಂಟ್ ಅಂಶವನ್ನು ಆಧರಿಸಿದೆ. ಫಿಟ್‌ಮೆಂಟ್ ಅಂಶವನ್ನು 2.57 ರಿಂದ ಗುಣಿಸುವ ಮೂಲಕ ಲೆಕ್ಕಹಾಕಲಾಗುತ್ತದೆ. ಉದಾಹರಣೆಗೆ,   ಕೇಂದ್ರ ನೌಕರನ ಮೂಲ ವೇತನವು ರೂ 18,000 ಆಗಿದ್ದರೆ, ಭತ್ಯೆಗಳನ್ನು ಹೊರತುಪಡಿಸಿ ಅವರ ವೇತನವು  18,000 X 2.57 = ರೂ 46,260 ಲಾಭವಾಗಿರುತ್ತದೆ .  3.68 ಇದ್ದಾಗ ಸಂಬಳ 95,680 (26000 X 3.68 = 95,680 ) ಅಂದರೆ ಸಂಬಳದಲ್ಲಿ 49,420 ರೂ.ಗೆ ಲಾಭವಾಗುತ್ತದೆ. 3 ಕ್ಕೆ ಹೆಚ್ಚಿಸಿದರೆ ಮೂಲ ವೇತನ 21000 ರೂ ಆಗುತ್ತದೆ.

Published On: 22 May 2022, 12:17 PM English Summary: 7th Pay Commision Central Government Employees will get good news soon

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.