1. ಸುದ್ದಿಗಳು

Mann Ki Baat special study : ಯೂಟ್ಯೂಬ್‌ನಲ್ಲಿ ಮೋದಿ ಮಾತಿಗೆ ಹೆಚ್ಚಿನ ಒಲವು

Maltesh
Maltesh
63% people love to listen ‘Mann Ki Baat’ on YouTube

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ (IIMC) ನಡೆಸಿದ ವಿಶೇಷ ಅಧ್ಯಯನದ ಪ್ರಕಾರ 76% ಭಾರತೀಯ ಮಾಧ್ಯಮದವರು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ದೇಶವಾಸಿಗಳಿಗೆ ನಿಜವಾದ ಭಾರತವನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ನಂಬಿದ್ದಾರೆ. 

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್  ನಡೆಸಿದ ಅಧ್ಯಯನದಲ್ಲಿ  ಈ ಕಾರ್ಯಕ್ರಮವು ದೇಶದ ಇತರ ಭಾಗಗಳಲ್ಲಿನ ವಿಷಯಗಳ ಬಗ್ಗೆ ಜನರು  ಇದೀಗ ಈಗ ಹೆಚ್ಚು ತಿಳಿಯಲು ಸಾಧ್ಯವಾಗಿದೆ. ಹಾಗೂ ಶೇ 75 ರಷ್ಟು ಜನರು 'ಮನ್ ಕಿ ಬಾತ್' ಒಂದು ವೇದಿಕೆಯಾಗಿ ಹೊರಹೊಮ್ಮಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ, ಇದು ಭಾರತದ ದೂರದ ಪ್ರದೇಶಗಳಲ್ಲಿ ವಾಸಿಸುವ ಜನರ ಜೀವನದಲ್ಲಿ ಗಮನಾರ್ಹ ವ್ಯತ್ಯಾಸವನ್ನು ತರುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ.

IIMC ಡೈರೆಕ್ಟರ್ ಜನರಲ್ ಪ್ರೊ. ಸಂಜಯ್ ದ್ವಿವೇದಿ ಅವರ ಪ್ರಕಾರ, ಏಪ್ರಿಲ್ 12 ಮತ್ತು 25, 2023 ರ ನಡುವೆ ಇನ್ಸ್ಟಿಟ್ಯೂಟ್ನ ಔಟ್ರೀಚ್ ವಿಭಾಗವು ಅಧ್ಯಯನವನ್ನು ನಡೆಸಿತು. ಮೀಡಿಯಾಗೆ ಸಂಬಂಧಿಸಿದ ಒಟ್ಟು 890 ವ್ಯಕ್ತಿಗಳು-ಮಾಧ್ಯಮ ವ್ಯಕ್ತಿಗಳು, ಮಾಧ್ಯಮ ಅಧ್ಯಾಪಕರು, ಮಾಧ್ಯಮ ಸಂಶೋಧಕರು ಮತ್ತು ಮಾಧ್ಯಮ ವಿದ್ಯಾರ್ಥಿಗಳು -ದೇಶದಾದ್ಯಂತ 116 ಮಾಧ್ಯಮ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು ಅಧ್ಯಯನದಲ್ಲಿ ಭಾಗವಹಿಸಿದ್ದವು. ಇವರಲ್ಲಿ 326 ಮಹಿಳೆಯರು ಮತ್ತು 564 ಪುರುಷರು. ಪ್ರತಿಕ್ರಿಯಿಸಿದವರಲ್ಲಿ 66% ರಷ್ಟು 18 ಮತ್ತು 25 ವರ್ಷ ವಯಸ್ಸಿನವರು ಇದ್ದರು.

ಈ ಅಧ್ಯಯನದಲ್ಲಿ ಭಾಗವಹಿಸಿದವರ ಪ್ರಕಾರ  'ದೇಶದ ಬಗ್ಗೆ ಜ್ಞಾನ' ಮತ್ತು 'ದೇಶದ ಬಗ್ಗೆ ಪ್ರಧಾನಿ ಅವರ ದೃಷ್ಟಿ' ಮನ್‌ ಕಿ ಬಾತ್‌ ಕೇಳಲು ನಮ್ಮನ್ನು ಹುರುದುಂಬಿಸಿದೆ ಎಂದಿದ್ದಾರೆ. ಇನ್ನು ಇದರಲ್ಲಿ  63% ಜನರು ಅವರು ಇತರ ಮಾಧ್ಯಮಗಳಿಗಿಂತ  ಮನ್‌ ಕಿ ಬಾತ್‌ ಕೇಳಲು YouTube ಅನ್ನು ಬಯಸುತ್ತಾರೆ ಎಂದು ಹೇಳಿದರು.

ಮನ್‌ ಕಿ ಬಾತ್‌ ಜನರ ಜೀವನದಲ್ಲಿ ಯಾವ ವಿಷಯದಲ್ಲಿ ಹೆಚ್ಚಾಗಿ ಪ್ರಭಾವ ಬೀರಿದೆ ಎಂದು ನಡೆಸಿದ ಸಮೀಕ್ಷೆಯಲ್ಲಿ  40% ಜನರು 'ಶಿಕ್ಷಣ' ಎಂದು ಅಭಿಪ್ರಾಯ ನೀಡಿದ್ದಾರೆ ಎಂದು  ಪ್ರೊ.ದ್ವಿವೇದಿ  ಮಾಹಿತಿ ನೀಡಿದ್ದಾರೆ. ಇದರಲ್ಲಿ 26% ಜನರು Grassroots Innovators  ಬಗ್ಗೆ ಮಾಹಿತಿ' ಅತ್ಯಂತ ಪ್ರಭಾವಶಾಲಿ ವಿಷಯ ಎಂದು ಹೇಳಿದ್ದಾರೆ.

'ಮನ್ ಕಿ ಬಾತ್'ನಲ್ಲಿ ಚರ್ಚಿಸಲಾದ ವಿಷಯಗಳ ಬಗ್ಗೆ ಜನರು ಯಾರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅಧ್ಯಯನವು ಪ್ರಯತ್ನಿಸಿದೆ. 32% ಪ್ರತಿಕ್ರಿಯಿಸಿದವರು ತಮ್ಮ ಕುಟುಂಬ ಸದಸ್ಯರೊಂದಿಗೆ ಕಾರ್ಯಕ್ರಮದಲ್ಲಿ ಚರ್ಚಿಸಿದ ವಿಷಯಗಳ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

Published On: 29 April 2023, 02:40 PM English Summary: 63% people love to listen ‘Mann Ki Baat’ on YouTube

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.