ರಾಜ್ಯದಲ್ಲಿ ಶುಕ್ರವಾರವೂ ಸಹ ಸ್ಪೋಟಗೊಂಡಿದೆ. ಒಂದೇ ದಿನ ದಾಖಲೆಯ ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ ಹಿಂದೆಂದಿಗಿಂತಲೂ 48, 296 ಹೊಸ ಸೋಂಕು ಪ್ರಕರಣ ದಾಖಲಾಗಿವೆ. ಇಂದು ರಾಜ್ಯದಲ್ಲಿ 217 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಇಂದು ಒಂದೇ ದಿನ26,756 ಮಂದಿಗೆ ಕೊರೋನಾ ದೃಢಪಟ್ಟಿದ್ದು, ನಗರದ 18 ವರ್ಷದ ಯುವಕ ಸೇರಿ ಒಟ್ಟು 93 ಜನರು ಮೃತಪಟ್ಟಿದ್ದಾರೆ.ಸತ್ತವರ ಸಂಖ್ಯೆ 15523 ಕ್ಕೆ ಏರಿಯಾಗಿದ್ದು, ಬೆಂಗಳೂರು ನಂತರ ಮೈಸೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚಳ ಕಂಡಿದ್ದು, ಇಂದು 3,500 ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,82,690ಕ್ಕೆ ಏರಿಕೆ ಕಂಡಿದೆ. ಇಂದು ರಾಜ್ಯದಲ್ಲಿ ಒಟ್ಟು 1,62,011 ಮಂದಿಗೆ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15,23,142 ಕ್ಕೆ ಏರಿಕೆ ಕಂಡಿದೆ. ಈ ಪೈಕಿ 11,24,909 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವೆಲ್ ಬುಲೆಟಿನ್ ತಿಳಿಸಿದೆ.
ಬುಲೆಟಿನ್ ಪ್ರಕಾರ, ಬಾಗಲಕೋಟೆ 304, ಬಳ್ಳಾರಿ 1282, ಬೆಳಗಾವಿ 514, ಬೆಂಗಳೂರು ಗ್ರಾಮಾಂತರ 818, ಬೆಂಗಳೂರು ನಗರ 26,756, ಬೀದರ್ 447, ಚಾಮರಾಜನಗರ 474, ಚಿಕ್ಕಬಳ್ಳಾಪುರ 579,, ಚಿಕ್ಕಮಗಳೂರು 542, ಚಿತ್ರದುರ್ಗ 144, ದಕ್ಷಿಣ ಕನ್ನಡ 1,205, ದಾವಣಗೆರೆ 438, ಧಾರವಾಡ 703, ಗದಗ 122, ಹಾಸನ 709, ಹಾವೇರಿ 90, ಕಲಬುರಗಿ 1256,_ ಕೊಡಗು 609, ಕೋಲಾರ 845, ಕೊಪ್ಪಳ 256, ಮಂಡ್ಯ 1348, ಮೈಸೂರು 3500, ರಾಯಚೂರು 733, ರಾಮನಗರ 286, ಶಿವಮೊಗ್ಗ 673, ತುಮಕೂರು 1,801, ಉಡುಪಿ 660, ಉತ್ತರ ಕನ್ನಡ 426_ ವಿಜಯಪುರ 521 ಮತ್ತು ಯಾದಗಿರಿಯಲ್ಲಿ 325 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ.
Share your comments