ಲಾಕ್ಡೌನ್ ಅವಧಿಯಲ್ಲಿ ಸಾರ್ವಜನಿಕರ ಆರೋಗ್ಯ ವೃದ್ಧಿಸಲು ಮತ್ತು ವೈದ್ಯರ ಸಲಹೆಯಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೆಚ್ಚು ಹಾಲು ಕುಡಿಯಿರಿ ಅಭಿಯಾನದೊಂದಿಗೆ ಜೂ.1 ರಂದು ರಂದು ವಿಶ್ವ ಹಾಲು ದಿನಾಚರಣೆಯ ಕಾರ್ಯಕ್ರಮದೊಂದಿಗೆ ಜೂನ್ ತಿಂಗಳಾದ್ಯಂತ ಎಲ್ಲಾ ಮಾದರಿಯ ನಂದಿನಿ 500 ಎಂಎಲ್ ಮತ್ತು ಒಂದು ಲೀಟರ್ ಪ್ಯಾಕೆಟ್ಗಳಲ್ಲಿ ತಲಾ 20 ಹಾಗೂ 40 ಮಿಲಿ ಲೀಟರ್ ಹೆಚ್ಚುವರಿ ಹಾಲನ್ನು ಉಚಿತವಾಗಿ ಗ್ರಾಹಕರಿಗೆ ಪೂರೈಸುವ ಯೋಜನೆಯನ್ನು ಜಾರಿಗೊಳಿಲಾಗಿದೆ.
ಹೌದು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ವಿಶ್ವ ಹಾಲು ದಿನಾಚರಣೆ ಅಂಗವಾಗಿ ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದೆ. ಹಾಲಿನ ದರ ಹೆಚ್ಚಿಸದೆ ಹೆಚ್ಚುವರಿ ಹಾಲನ್ನು ಜೂನ್ ತಿಂಗಳ ಅಂತ್ಯದವರೆಗೆ ಕೊಡಲಿದೆ.
ಲಾಕ್ಡೌನ್ ಅವಧಿಯಲ್ಲಿ ನಂದಿನಿ ಅರ್ಧ ಲೀಟರ್ ಮತ್ತು ಒಂದು ಲೀಟರ್ ಪ್ಯಾಕೆಟ್ಗಳಲ್ಲಿ ತಲಾ 20 ಹಾಗೂ 40 ಮಿಲಿ ಹೆಚ್ಚುವರಿ ಹಾಲನ್ನು ಉಚಿತವಾಗಿ ಗ್ರಾಹಕರಿಗೆ ನೀಡಲಾಗುತ್ತಿದೆ.
ಕರ್ನಾಟಕ ಹಾಲು ಮಹಾಮಂಡಳಿ ವ್ಯಾಪ್ತಿಯ 14 ಹಾಲು ಒಕ್ಕೂಟ ಹಾಗೂ 5 ಘಟಕಗಳಿಂದ ಎಲ್ಲಾ ಶ್ರೇಣಿಯ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 40 ಎಂಎಲ್ ಹಾಗೂ ಅರ್ಧ ಲೀಟರ್ ಹಾಲಿಗೆ 20 ಎಂಎಲ್ ಹೆಚ್ಚುವರಿ ಹಾಲು ನೀಡಲು ನೀಡಲು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಘೋಷಿಸಿದೆ.
Share your comments