1. ಸುದ್ದಿಗಳು

ಕೇಂದ್ರೀಯ ಉಗ್ರಾಣಗಳಲ್ಲಿ 227 ಲಕ್ಷ ಮೆಟ್ರಿಕ್ ಟನ್ ಗೋಧಿ, 205 ಲಕ್ಷ ಮೆಟ್ರಿಕ್ ಟನ್ ಅಕ್ಕಿ !

KJ Staff
KJ Staff
raice

ದೇಶದ ಆಹಾರ ಅಗತ್ಯ ಪೂರೈಸಲು ಕೇಂದ್ರೀಯ ಉಗ್ರಾಣಗಳಲ್ಲಿ  ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

2022 ಅಕ್ಟೋಬರ್ 1ರ ವರೆಗೆ ಅನ್ವಯವಾಗುವಂತೆ, ಕೇಂದ್ರೀಯ ಉಗ್ರಾಣಗಳಲ್ಲಿ 227 ಲಕ್ಷ ಮೆಟ್ರಿಕ್ ಟನ್ ಗೋಧಿ, 205 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನಿದೆ.

ಇದು ದಾಸ್ತಾನು ಸಂಗ್ರಹ ಮೀಸಲು ಮಾನದಂಡಗಳಿಗಿಂತ ಹೆಚ್ಚಾಗಿದೆ.

ಸಿಹಿಸುದ್ದಿ: ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆ, ₹50 ಕೋಟಿ ಅನುದಾನ ಮೀಸಲು!

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಮತ್ತು ಭಾರತ ಸರ್ಕಾರದ ಇತರೆ ಯೋಜನೆಗಳ ಅಗತ್ಯಗಳು ಹಾಗೂ ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಅನ್ನ ಯೋಜನೆ(ಪಿಎಂಜೆಕೆಎವೈ)ಯ ಹೆಚ್ಚುವರಿ ಅವಶ್ಯಕತೆಗಳನ್ನು ಪೂರೈಸಲು ಕೇಂದ್ರೀಯ ಉಗ್ರಾಣಗಳಲ್ಲಿ ಸಾಕಷ್ಟು ಆಹಾರ ಧಾನ್ಯಗಳ ದಾಸ್ತಾನು ಮಾಡಲಾಗಿದೆ.

2022 ಅಕ್ಟೋಬರ್ 1ಕ್ಕೆ ಅನ್ವಯವಾಗುವಂತೆ, ಸುಮಾರು 227 ಲಕ್ಷ ಮೆಟ್ರಿಕ್ ಟನ್ ಗೋಧಿ ಮತ್ತು 205 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಕೇಂದ್ರೀಯ ಉಗ್ರಾಣಗಳಲ್ಲಿ ಲಭ್ಯವಿದೆ.

ಡ್ರೋನ್ ಖರೀದಿಸಲು ಯೋಜಿಸುತ್ತಿರುವ ರೈತರಿಗೆ ಸುವರ್ಣಾವಕಾಶ, ಸರ್ಕಾರ 50% ಸಬ್ಸಿಡಿ

ಇದು ಆಹಾರ ಧಾನ್ಯಗಳ ಸಂಗ್ರಹ ಮೀಸಲು ಮಾನದಂಡಗಳು, ಕಾರ್ಯಾಚರಣೆಯ ಅಗತ್ಯತೆಗಿಂತ ಹೆಚ್ಚಿನ ಪ್ರಮಾಣದಲ್ಲಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಮತ್ತು ಭಾರತ ಸರ್ಕಾರದ ಇತರೆ ಯೋಜನೆಗಳ ಅಗತ್ಯಗಳು ಹಾಗೂ ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಅನ್ನ ಯೋಜನೆ(ಪಿಎಂಜೆಕೆಎವೈ)ಯ ಹೆಚ್ಚುವರಿ ಅವಶ್ಯಕತೆಗಳನ್ನು ಪೂರೈಸಿದೆ. 

ನಂತರ 2023 ಏಪ್ರಿಲ್ 1ರಿಂದ ಅನ್ವಯವಾಗುವಂತೆ, ಕೇಂದ್ರೀಯ ಉಗ್ರಾಣಗಳಲ್ಲಿ ಸಾಕಷ್ಟು ದಾಸ್ತಾನು ಲಭ್ಯವಿದೆ. ಅದು ಬಫರ್ ಮಾನದಂಡಗಳನ್ನು ದಾಟಿದ ಪ್ರಮಾಣದಲ್ಲಿದೆ. ಅಂದಾಜು 2023 ಏಪ್ರಿಲ್ 1ಕ್ಕೆ ಅನ್ವಯವಾಗುವಂತೆ,

ಎಲ್ಲಾ ಅಗತ್ಯಗಳನ್ನು ಪೂರೈಸಿದ ನಂತರವೂ, ಕೇಂದ್ರೀಯ ಉಗ್ರಾಣಗಳಲ್ಲಿ ಸರಿಸುಮಾರು 113 ಲಕ್ಷ ಮೆಟ್ರಿಕ್ ಟನ್ ಗೋಧಿ ಮತ್ತು 237 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಲಭ್ಯವಿದೆ.

75 ಲಕ್ಷ ಮೆಟ್ರಿಕ್ ಟನ್ ಗೋಧಿ ಮತ್ತು 136 ಲಕ್ಷ ಮೆಟ್ರಿಕ ಟನ್ ಅಕ್ಕಿ ದಾಸ್ತಾನಿನ ಬಫರ್ ನಿಯಮಾವಳಿಗಳು ಮತ್ತು ಕಾರ್ಯಾಚರಣೆಯ ಅಗತ್ಯಗಳಿಗೆ ಪ್ರತಿಯಾಗಿ ಲಭ್ಯವಿರುವ ದಾಸ್ತಾನಾಗಿದೆ.

PM Kisan Samman Sammelan 2022: ರೈತರ ಖಾತೆಗೆ ಬರಲಿದೆ ನೇರವಾಗಿ 16,000 ಕೋಟಿ!

ಪ್ರಸ್ತುತ ಮುಂಗಾರು ಮಾರುಕಟ್ಟೆ ಹಂಗಾಮು (ಕೆಎಂಎಸ್) 2022-23ರಲ್ಲಿ ಮಂಗಾರು ಹಂಗಾಮಿನ  ಭತ್ತ ಖರೀದಿ ಆರಂಭವಾಗಿದೆ. 16.10.2022ರ ವರೆಗೆ ಸುಮಾರು 58 ಲಕ್ಷ ಮೆಟ್ರಿಕ್ ಟನ್ ಭತ್ತ (39 ಲಕ್ಷ ಮೆಟ್ರಿಕ್ ಟನ್) ಖರೀದಿಸಲಾಗಿದೆ.  

2021-22ರ ಮುಂಗಾರು ಹಂಗಾಮಿಗೆ ಹೋಲಿಸಿದರೆ, ಖರೀದಿ ಪ್ರಮಾಣ ಈ ಬಾರಿ ಹೆಚ್ಚಾಗಿದೆ. ಈ ವರ್ಷ ದೇಶದಲ್ಲಿ ಉತ್ತಮ ಮಳೆಯಾಗಿದ್ದು, ಭತ್ತದ ಉತ್ಪಾದನೆಯು ಸಾಮಾನ್ಯ ಸ್ಥಿತಿಯಲ್ಲಿರುವ ನಿರೀಕ್ಷೆಯಿದೆ.

ಪ್ರಸ್ತುತ 2022-23ರ ಮುಂಗಾರು ಮಾರುಕಟ್ಟೆ ಹಂಗಾಮಿನಲ್ಲಿ 771 ಲಕ್ಷ ಮೆಟ್ರಿಕ್ ಟನ್ ಭತ್ತ (ಅಂದರೆ 518 ಲಕ್ಷ ಮೆಟ್ರಿಕ್ ಟನ್ ಅಕ್ಕಿ) ಖರೀದಿಸುವ ಅಂದಾಜು ಮಾಡಲಾಗಿದೆ.

ಹಿಂಗಾರು ಹಂಗಾಮಿನ ಭತ್ತ ಖರೀದಿ ಸೇರಿಸಿದರೆ, 2022-23ರ ಪೂರ್ಣ ಅವಧಿಯಲ್ಲಿ ಸುಮಾರು 900 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸುವ ನಿರೀಕ್ಷೆಯಿದೆ.

2023 ಏಪ್ರಿಲ್‌ನಿಂದ ಗೋಧಿ ಖರೀದಿ ಆರಂಭವಾಗಲಿದೆ.

ದೇಶದಲ್ಲಿ ಸಾಕಷ್ಟು ಉತ್ತಮ ಮಳೆ ಬಂದಿರುವ ಕಾರಣ, ಮುಂದಿನ ಹಿಂಗಾರು ಹಂಗಾಮಿನಲ್ಲಿ ಗೋಧಿ ಉತ್ಪಾದನೆ ಮತ್ತು ಖರೀದಿ ಸಾಮಾನ್ಯವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

“ಪೌಷ್ಟಿಕಾಂಶಭರಿತ ದ್ವಿದಳ ಧಾನ್ಯಗಳು” ಎಂದು ಕರೆಯಲ್ಪಡುವ ಆಹಾರ ಧಾನ್ಯಗಳ ಹೆಚ್ಚಿನ ಪೌಷ್ಟಿಕಾಂಶ ಮೌಲ್ಯ ಪರಿಗಣಿಸಿ,

ಭಾರತ ಸರ್ಕಾರವು ಕೇಂದ್ರೀಯ ಉಗ್ರಾಣಗಳಿಗೆ 2022-23ರ ಅವಧಿಯ ಮುಂಗಾರು ಹಂಗಾಮಿನಲ್ಲಿ 13.72 ಲಕ್ಷ ಮೆಟ್ರಿಕ್ ಟನ್ ಖರೀದಿಸಲು ಯೋಜಿಸಿದೆ.

ಕೇಂದ್ರ ಸರ್ಕಾರವು 2021-22ರ ಮುಂಗಾರು ಹಂಗಾಮಿನಲ್ಲಿ 6.30 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಖರೀದಿಸಿತ್ತು.

ಕೋವಿಡ್-19 ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡಾಗ ಆರ್ಥಿಕ ಅಡಚಣೆಯಿಂದಾಗಿ ಬಡವರು, ಕಡುಬಡವರು ಎದುರಿಸಿದ ಸಂಕಷ್ಟಗಳನ್ನು ನಿವಾರಿಸಲು,

ಭಾರತ ಸರ್ಕಾರವು ಬಡವರ ಪರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. 

ಅಸ್ತಿತ್ವದಲ್ಲಿರುವ ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಇತರೆ ಕಲ್ಯಾಣ ಯೋಜನೆಗಳ ಜೊತೆಗೆ ಪಿಎಂಜಿಕೆಎವೈ ಯೋಜನೆ ಅಡಿ, ದೇಶದ ಸುಮಾರು 80 ಕೋಟಿ ಬಡವರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ಹಂಚಿದೆ.

ಪಿಎಂಜಿಕೆಎವೈ ಯೋಜನೆ ಅಡಿ, ಒಟ್ಟು 1,121 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯಗಳನ್ನು ಹಂಚಲಾಗಿದೆ. ಇದಕ್ಕೆ ಭರಿಸಿದ ನಿರೀಕ್ಷಿತ ಹಣಕಾಸಿನ ವೆಚ್ಚ ರೂ. 3.91 ಲಕ್ಷ ಕೋಟಿ ರೂ. ಆಗಿದೆ.

ರಫ್ತು ನಿಯಂತ್ರಣಗಳೊಂದಿಗೆ ಬೃಹತ್ ಪ್ರಮಾಣದ ಆಹಾರ ಧಾನ್ಯಗಳ ವಿತರಣೆಯ ಈ ಸರಕುಗಳ ಅಂತಾರಾಷ್ಟ್ರೀಯ ಬೆಲೆಗೆ ಹೋಲಿಸಿದರೆ ದೇಶೀಯ ಬೆಲೆ ಹೆಚ್ಚಾಗಿ ಸ್ಥಿರವಾಗಿದೆ ಎಂದು ಖಚಿತಪಡಿಸಿದೆ.

ಬ್ರೇಕಿಂಗ್‌: ದೀಪಾವಳಿ ನಂತರ ಬೆಲೆ ಏರಿಕೆಯ ಶಾಕ್‌ !

Published On: 19 October 2022, 02:27 PM English Summary: 227 lakh metric tons of wheat, 205 lakh metric tons of rice in central warehouses!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.