1. ಸುದ್ದಿಗಳು

2023 ಸಿರಿಧಾನ್ಯಗಳ ವರ್ಷ: ಭಾರತದಿಂದ ಸಿರಿಧಾನ್ಯ ಕುರಿತು ಜಾಗೃತಿ

Hitesh
Hitesh
2023 Year of Cereals: Awareness of Cereals from India

2023ನೇ ಸಾಲಿನ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು  ಆಚರಿಸಲು ಜಗತ್ತು ಸಜ್ಜಾಗಿದೆ.

Gold Rate| ಹೊಸ ವರ್ಷದ ಮೊದಲ ವಾರವೇ ಚಿನ್ನ, ಬೆಳ್ಳಿದರ ಹೆಚ್ಚಳ!

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಭಾರತದ ಸಿರಿಧಾನ್ಯಗಳ ವರ್ಷ ಎಂದು ಆಚರಿಸುವ ಪ್ರಸ್ತಾವನೆಯನ್ನು ಅಂಗೀಕರಿಸಿದ್ದು, ಹಸಿರು ಕ್ರಾಂತಿಯು ನಮಗೆ ಆಹಾರ ಧಾನ್ಯಗಳಲ್ಲಿ ಸ್ವಾವಲಂಬನೆಯನ್ನು ತಂದುಕೊಟ್ಟಿದೆ.
ಕೆಲವು ನಿರ್ದಿಷ್ಟ ಬೆಳೆಗಳ ಕುರಿತು ಮಾತ್ರ ಪ್ರಚಾರವಾಗಿದ್ದು, ಸಹ ಅನೇಕ ಸ್ಥಳೀಯ ಬೆಳೆಗಳು ಪ್ರಚಾರಕ್ಕೆ ಹಿನ್ನೆಡೆ ಉಂಟಾಗಿತ್ತು. ಆದರೆ, ಸಿರಿಧಾನ್ಯಗಳು ಭಾರತೀಯ  ಸಾಂಸ್ಕೃತಿಕ ಸಂಪರ್ಕ ಹೊಂದಿರುವುದರಿಂದಾಗಿ ಮನ್ನಣೆಯಲ್ಲಿವೆ. 

ರಾಗಿ, ಜೋಳ, ಕೊಡೋ ಮತ್ತು ಕುಟ್ಕಿಯಂತಹ ಕೆಲವು ಸಿರಿಧಾನ್ಯಗಳನ್ನು ಒಡಿಶಾದಂತಹ ರಾಜ್ಯಗಳು ಪ್ರಚಾರ ಮಾಡುತ್ತಿವೆ. ಇತರ ಸಿರಿಧಾನ್ಯಗಳಾಗಿರುವ  ಸಣ್ಣ ರಾಗಿಯನ್ನು ಕರ್ನಾಟಕ ಮತ್ತು ಮಧ್ಯಪ್ರದೇಶ ಪ್ರಚಾರಪಡಿಸಿವೆ. ಸಿರಿಧಾನ್ಯಗಳಲ್ಲಿ ಒಂದಾಗಿರುವ ರಾಗಿಯ ಬಳಕೆಗೆ ಕರ್ನಾಟಕದಲ್ಲಿ ವಿಶೇಷವಾದ ಸ್ಥಾನವಿದೆ. ಅದರಲ್ಲಿಯೂ ದಕ್ಷಿಣ ಕರ್ನಾಟಕದ ಭಾಗದಲ್ಲಿ ರಾಗಿ ಬಹು ಪ್ರಧಾನ ಆಹಾರ ಕ್ರಮವಾಗಿದೆ.  ಸಿರಿಧಾನ್ಯಗಳು ಒರಟಾದ ಆಹಾರ ಧಾನ್ಯಗಳು ಎನ್ನುವ ಕಾರಣಕ್ಕೆ ಅವಗಣನೆಗೆ ಗುರಿಯಾಗಿದ್ದೂ ಇದೆ. 

PM Kisan| ಪಿ.ಎಂ ಕಿಸಾನ್‌ ಸಾವಿರಾರು ರೈತರ ಕೆವೈಸಿ ಬಾಕಿ: 13ನೇ ಕಂತು ಡೌಟ್‌! 

ಭಾರತ ಮತ್ತು ಸಿರಿಧಾನ್ಯಗಳ ಪಾತ್ರ
ಜಾಗತಿಕವಾಗಿ ಭಾರತವು ಸಿರಿಧಾನ್ಯವನ್ನು ರಫ್ತು ಮಾಡುವಲ್ಲಿ 5ನೇ ಅತಿ ದೊಡ್ಡ ದೇಶವಾಗಿದೆ. ಸಿರಿಧಾನ್ಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಅನುಸರಿಸುತ್ತಿದೆ. 

ಸಿರಿಧಾನ್ಯ ಮತ್ತು ಅದರ ಪ್ರಯೋಜನಗಳಿಗೆ ಸಂಬಂಧಿಸಿದ ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಸೆಂಟರ್ ಫಾರ್ ಎಕ್ಸಲೆನ್ಸ್, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಸಿರಿಧಾನ್ಯಗಳ ಉತ್ತೇಜನಕ್ಕೆ ಸುಧಾರಣಾ ಕ್ರಮಗಳು ಅನುಸರಿಸಲಾಗುತ್ತಿದೆ. ಅನೇಕ ರಾಜ್ಯಗಳಲ್ಲಿ ಸಿರಿಧಾನ್ಯ ಉತ್ತೇಜನಕ್ಕಾಗಿಯೇ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಇನ್ನು ಸಿರಿಧಾನ್ಯಗಳು ಹೆಚ್ಚಿನ ಪೌಷ್ಟಿಕಾಂಶದ ಲಕ್ಷಣಗಳನ್ನು ಹೊಂದಿವೆ

ಸಿರಿಧಾನ್ಯಗಳನ್ನು ಕಡಿಮೆ ನೀರಾವರಿಯನ್ನು ಬಳಸಿಯೂ ಮಾಡಬಹುದಾಗಿದೆ. ಒಣ ಪ್ರದೇಶದಲ್ಲಿಯೂ ಉತ್ತಮ ಇಳುವರಿಯನ್ನು ನೀಡುವ ಬೆಳೆ ಎನ್ನುವ ಹೆಗ್ಗಳಿಕೆಯೂ ಸಿರಿಧಾನ್ಯಕ್ಕೆ ಇದೆ. ಅಲ್ಲದೇ ಕಡಿಮೆ ಫಲವತ್ತತೆ ಹೊಂದಿರುವ ಭೂಮಿಯಲ್ಲಿಯೂ ಸುಲಭವಾಗಿ ಬೇಸಾಯವನ್ನು ಮಾಡಬಹುದಾಗಿದೆ. ಸಿರಿಧಾನ್ಯವು ಆಹಾರ ಭದ್ರತೆ ಸಮಸ್ಯೆಗಳನ್ನು ತಪ್ಪಿಸುವ ನಿಟ್ಟಿನಲ್ಲಿಯೂ ಸಹಕಾರಿ ಆಗಿದೆ. 

ಜಾಗತಿಕವಾಗಿ ನಿರಂತರವಾಗಿ ಹೆಚ್ಚುತ್ತಿರುವ ನ್ಯೂಟ್ರಿಯಾ-ಧಾನ್ಯಗಳ ಬೇಡಿಕೆಯನ್ನು ಪೊರೈಸುವ ನಿಟ್ಟಿನಲ್ಲಿಯೂ ಸಿರಿಧಾನ್ಯಗಳ ಮಹತ್ವದ ಪಾತ್ರವನ್ನು ವಹಿಸಿವೆ. ಭಾರತೀಯ ರಫ್ತುದಾರರು ಕಂಡುಕೊಂಡಂತೆ ಮುಂದಿನ ವರ್ಷಗಳಲ್ಲಿ ಸಿರಿಧಾನ್ಯಗಳ  ರಫ್ತುಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. 

ಇನ್ನು ಸಿರಿಧಾನ್ಯಗಳ ರಫ್ತು ಪ್ರಮಾಣವನ್ನು ಗಮನಿಸುವುದಾದರೆ, ಭಾರತವು ಸಿರಿಧಾನ್ಯಗಳ ರಫ್ತಿನಲ್ಲಿ ಐದನೇ ಅತಿದೊಡ್ಡ ದೇಶವಾಗಿದೆ.  

2020ರ ಮಾಹಿತಿಯ ಪ್ರಕಾರ, ಸಿರಿಧಾನ್ಯದ ರಫ್ತುಗಳು ನಿರಂತರವಾಗಿ ಶೇಕಡ 3% ಪ್ರಮಾಣ ಹೆಚ್ಚಳವಾಗುತ್ತಿದೆ. 2020ಕ್ಕೆ ಕೊನೆಗೊಳ್ಳುವ ಐದು ವರ್ಷಗಳು 2020-21 ರಲ್ಲಿ, (ಡಾಲರ್‌ ಅನ್ವಯ)26.97 ಮಿಲಿಯನ್ ಮೌಲ್ಯದ ಸಿರಿಧಾನ್ಯಗಳನ್ನು ರಫ್ತು ಮಾಡಲಾಗಿದೆ.

ಸಿರಿಧಾನ್ಯಗಳನ್ನು ರಫ್ತು ಮಾಡುವ ದೇಶಗಳಲ್ಲಿ ಉಕ್ರೇನ್, ಭಾರತ, ಚೀನಾ, ನೆದರ್‌ಲ್ಯಾಂಡ್‌, ಫ್ರಾನ್ಸ್, ಪೋಲೆಂಡ್ ಮತ್ತು ಅರ್ಜೆಂಟೀನಾ ಪ್ರಮುಖವಾಗಿ ಗುರುತಿಸಿಕೊಂಡಿವೆ.
2020-21ರಲ್ಲಿ ಭಾರತದಿಂದ ಸಿರಿಧಾನ್ಯಗಳನ್ನು ಆಮದು ಮಾಡಿಕೊಳ್ಳುವ ಪ್ರಮುಖ ಮೂರು ದೇಶಗಳಲ್ಲಿ ನೇಪಾಳ, ಯುಎಇ ಮತ್ತು ಸೌದಿ ಅರೇಬಿಯಾ ಗುರುತಿಸಿಕೊಂಡಿದೆ. ಸಿರಿಧಾನ್ಯವನ್ನು ಜಾಗತಿಕವಾಗಿ ಪ್ರಚಾರ ಮಾಡುವ ತುರ್ತು ಇಂದಿದೆ. 

ಸಿರಿಧಾನ್ಯದ ಕುರಿತು ನೀತಿಗಳು ಮತ್ತು ಕಾರ್ಯಗಳು

ಸಿರಿಧಾನ್ಯಗಳ ಉತ್ತೇಜನಕ್ಕೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ದೇಶೀಯ ಮತ್ತು ಜಾಗತಿಕ ಬೇಡಿಕೆ ಮತ್ತು ಜನರಿಗೆ ಪೌಷ್ಟಿಕಾಂಶದ ಆಹಾರವನ್ನು ಒದಗಿಸಲು, ಪೌಷ್ಟಿಕಾಂಶದ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನೂ ಆಚರಿಸಿದೆ. 

ಏಪ್ರಿಲ್, 2018ರಲ್ಲಿ ಸಿರಿಧಾನ್ಯಗಳನ್ನು ಪೌಷ್ಟಿಕ-ಧಾನ್ಯವನ್ನಾಗಿಯೂ ಗುರುತಿಸಲಾಗಿದೆ. ಅಲ್ಲದೇ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಪೋಷಣ್‌ ಅಡಿಯಲ್ಲಿಯೂ ಸಿರಿಧಾನ್ಯವನ್ನು ಸೇರಿಸಲಾಗಿದೆ.

ಮಿಷನ್ ಅಭಿಯಾನ ಅಡಿಯಲ್ಲಿ 500ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಸಿರಿಧಾನ್ಯ ಮೌಲ್ಯ ಸರಪಳಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವೂ ಈ ನಿಟ್ಟಿನಲ್ಲಿ ಸಮಗ್ರ ಕಾರ್ಯತಂತ್ರವನ್ನು ಸಿದ್ಧಪಡಿಸಿದೆ.

ಭಾರತೀಯ ಸಿರಿಧಾನ್ಯಗಳ ಪ್ರಚಾರದ ಭಾಗವಾಗಿ 2022ರ ಡಿಸೆಂಬರ್‌ ವಿಶೇಷ ಅಭಿಯಾನವೂ ಪ್ರಾರಂಭವಾಗಲಿದೆ. 

ಸಿರಿಧಾನ್ಯಗಳ ಪ್ರಚಾರ ಮತ್ತು ಬಳಕೆಯಲ್ಲಿ ಭಾರತದ ಸಾಧನೆ
ಭಾರತದಲ್ಲಿ ಅಗ್ರ ಐದು ಸಿರಿಧಾನ್ಯಗಳನ್ನು ಉತ್ಪಾದಿಸುವ ರಾಜ್ಯಗಳಲ್ಲಿ ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತು ಮಧ್ಯಪ್ರದೇಶ ಸೇರಿವೆ. ಸಿರಿಧಾನ್ಯ ರಫ್ತಿನ ಪಾಲು ಒಟ್ಟು ಸುಮಾರು 1 ಪ್ರತಿಶತ ಇದೆ. ಭಾರತದಿಂದ ಸಿರಿಧಾನ್ಯಗಳ  ರಫ್ತು ಮುಖ್ಯವಾಗಿ ಧಾನ್ಯಗಳು ಸೇರಿವೆ. 

ವಿಶ್ವದಲ್ಲಿ ಭಾರತವು ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ವಿಭಾಗದ ಪ್ರಕಾರ, ವಿಶ್ವ ಉತ್ಪಾದನೆಯಲ್ಲಿ 2022 ರಲ್ಲಿ ಸಿರಿಧಾನ್ಯದ ಪ್ರಮಾಣವು 30.464 ಮಿಲಿಯನ್ ಮೆಟ್ರಿಕ್ ಟನ್ (MMT) ಮತ್ತು ಭಾರತದ ಪಾಲು 12.49 ಮಿಲಿಯನ್‌ ಮೆಟ್ರಿಕ್‌ ಟನ್‌ ಆಗಿದೆ. ಇದು ಒಟ್ಟು ಸಿರಿಧಾನ್ಯದ  ಉತ್ಪಾದನೆಯ 41 ಪ್ರತಿಶತವನ್ನು ಹೊಂದಿದೆ.  

ಸಿರಿಧಾನ್ಯದ ಬಳಕೆ ಮತ್ತು ಉತ್ಪಾದನೆಯಲ್ಲಿ ಭಾರತದ ಪಾತ್ರ

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಪ್ರಕಾರ, 2016 - 2017 ರಲ್ಲಿ, ಸಿರಿಧಾನ್ಯದ ಕೃಷಿಯು 60 ಕಡಿಮೆ ವ್ಯಾಪ್ತಿ ಪ್ರದೇಶದೊಂದಿಗೆ (14.72 ಮಿಲಿಯನ್ ಹೆಕ್ಟೇರ್‌ಗೆ) ಕುಸಿಯಿತು. ಬಳಕೆಯ ಮಾದರಿಯಲ್ಲಿ ಬದಲಾವಣೆ, ಗೋಧಿ ಮತ್ತು ಭತ್ತದ ಕೃಷಿಗಾಗಿ ನೀರಾವರಿ ಪ್ರದೇಶವನ್ನು ಪರಿವರ್ತಿಸುವುದು, ಸಿರಿಧಾನ್ಯದ ಅಲಭ್ಯತೆ, ಕಡಿಮೆ ಇಳುವರಿ, ಆಹಾರ ಪದ್ಧತಿ, ಕಡಿಮೆ ಬೇಡಿಕೆಯೂ ಇದಕ್ಕೆ ಪ್ರಮುಖ ಕಾರಣವಾಗಿದೆ.  
ನಮ್ಮಲ್ಲಿ ಸಿರಿಧಾನ್ಯಗಳ ಉತ್ಪಾದನೆಯೊಂದಿಗೆ ಅದರ ಬಳಕೆಯನ್ನು ಹೆಚ್ಚಿಸುವ ಅಂಶವನ್ನೂ ಗಣನೆಗೆ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಪ್ರಪಂಚದಾದ್ಯಂತದ ಸಮುದಾಯಗಳ ಆಹಾರ ಪದ್ಧತಿ ಹಾಗೂ ಯಾವ ಮಾದರಿಯ ಆಹಾರವನ್ನು ಬಳಸುತ್ತಾರೆ ಎನ್ನುವುದನ್ನೂ ಗಮನಕ್ಕೆ ತೆಗೆದುಕೊಳ್ಳುವ ಅವಶ್ಯಕತೆ ಇದೆ.  ಬದಲಾದ ಕಾಲಘಟ್ಟದಲ್ಲಿ ಸಿರಿಧಾನ್ಯಗಳ ಪಾಕವಿಧಾನಗಳ ಬಳಕೆಯೂ ಮರೆಯಾಗಿದೆ. ಅವುಗಳನ್ನು ಪುನರುಜ್ಜೀವನಗೊಳಿಸಿಕೊಳ್ಳುವ ತುರ್ತು ಸಹ ಇದೆ. 

ಭಾರತವು ಈಗಾಗಲೇ ವಿವಿಧ ಹಂತಗಳಲ್ಲಿ ಸಿರಿಧಾನ್ಯಗಳ ರಫ್ತು ಹಾಗೂ ಬಳಕೆಯ ಪ್ರಮಾವಣವನ್ನು ಹೆಚ್ಚಿಸಿಕೊಳ್ಳಲು ಬೇಕಾದ ಪೂರಕ ವಾತಾವರಣವನ್ನು ಸೃಷ್ಟಿಸುತ್ತಿದೆ. ಸಿರಿಧಾನ್ಯ ಬೆಳೆಯುವುದು ಹಾಗೂ ಬಳಸುವುದಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸುತ್ತಿದೆ. ಜಾಗತಿಕವಾಗಿ ಸಿರಿಧಾನ್ಯದಲ್ಲಿ ನಿರಂತರ ನಾಯಕತ್ವವನ್ನು ಪಡೆದುಕೊಳ್ಳಲು ಇದನ್ನು ಇನ್ನಷ್ಟು ಬಳಸಿಕೊಳ್ಳಬೇಕಾಗಿದೆ.    

Nandini and Amul| ನಂದಿನಿ ಮತ್ತು ಅಮುಲ್‌ ಬ್ರ್ಯಾಂಡ್‌ ವಿಲೀನಕ್ಕೆ ವಿರೋಧ  

Published On: 04 January 2023, 05:41 PM English Summary: 2023 Year of Cereals: Awareness of Cereals from India

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.