1. ಸುದ್ದಿಗಳು

2000rs note|2000 ನೋಟು ಬದಲಾವಣೆಯ ಬಗ್ಗೆ ಆರ್‌ಬಿಐ ಹೇಳಿದ್ದೇನು; ಟ್ರೋಲ್‌ ಯಾಕೆ ?

Hitesh
Hitesh
2000rs note|What RBI said about the change of 2000 note; Why troll?

2016ರ ನವೆಂಬರ್‌ನಲ್ಲಿ ಅಂದರೆ ನೋಟು ಬ್ಯಾನ್‌ ಸಂದರ್ಭದಲ್ಲಿ ಚಾಲ್ತಿಗೆ ಬಂದಿದ್ದ ಎರಡು ಸಾವಿರ ರೂಪಾಯಿಯ ನೋಟುಗಳು

ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಕಣ್ಮರೆ ಆಗಲಿವೆ. 

ಈ ನಡುವೆ 2000 ಸಾವಿರ ರೂ. ನೋಟು ಬದಲಾವಣೆಗೆ ಜನ ಸಖತ್‌ ಐಡಿಯಾ ಉಪಯೋಗಿಸುತ್ತಿದ್ದಾರೆ.

ಆಗಿದ್ದರೆ, ಇದರ ಹಿನ್ನೆಲೆ ಏನು ಎನ್ನುವುದು ಇಲ್ಲಿದೆ.

ಕೇಂದ್ರ ಸರ್ಕಾರವು 2016ರ ನವೆಂಬರ್‌ನಲ್ಲಿ ಗುಲಾಬಿ ಬಣ್ಣದ 2,000 ಸಾವಿರ ರೂಪಾಯಿ ನೋಟುಗಳನ್ನು ಪರಿಚಯಿಸಿತ್ತು.

ಆದರೆ, 2018ರಲ್ಲಿಯೇ 2000 ರೂಪಾಯಿ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿರುವುದಾಗಿ ಸದನದಲ್ಲಿ ಹೇಳಲಾಗಿತ್ತು. 

ಇನ್ನು ಮುಂದೆ 2000 ಮುಖಬೆಲೆಯ ನೋಟ್‌ಗಳ ಚಲಾವಣೆ ನಿಲ್ಲಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ.

ಇದರಿಂದ ಈ ವರ್ಷಾಂತ್ಯದ ವೇಳೆಗೆ ಎರಡು ಸಾವಿರ ರೂ ನೋಟು ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ. 

2023ರ ಸೆಪ್ಟೆಂಬರ್ 30ರ ಒಳಗೆ ಜನ ಬ್ಯಾಂಕ್‌ಗಳಲ್ಲಿ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಆದರೆ, ಒಂದು ಬಾರಿಗೆ  20,000 ರೂಪಾಯಿ ಮೌಲ್ಯದ 2ಸಾವಿರ ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ.
--------------
2000 ಸಾವಿರ ಹಿಂಪಡೆತಕ್ಕೆ ಕಾರಣವೇನು ? 

ಕ್ಲೀನ್ ನೋಟ್ ಅಭಿಯಾನದಡಿ 2000 ಸಾವಿರ ರೂಪಾಯಿ ನೋಟ್‌ಗಳನ್ನು ಆರ್‌ಬಿಐ ಹಿಂಪಡೆಯುತ್ತಿರುವುದಾಗಿ ಹೇಳಲಾಗಿದೆ.

ಅಲ್ಲದೇ 2000 ಸಾವಿರ ರೂಪಾಯಿ ಮುಖಬೆಲೆಯ ನೋಟು ಹೆಚ್ಚು ಬಳಕೆಯಲ್ಲಿ ಇಲ್ಲ ಎನ್ನಲಾಗಿದ್ದು,

ಈ ಎಲ್ಲ ಕಾರಣಗಳಿಂದ 2,000 ಸಾವಿರ ರೂಪಾಯಿ ನೋಟು ಚಲಾವಣೆಗೆ ಅಂತ್ಯ ಹಾಡಲಾಗುತ್ತಿದೆ ಎನ್ನಲಾಗಿದೆ.
-------------- 

2000 ಸಾವಿರ ರೂಪಾಯಿ ಬದಲಾವಣೆಗೆ ಸರ್ಕಸ್‌!

ಆರ್‌ಬಿಐ ಎರಡು ಸಾವಿರ ರೂಪಾಯಿ ಕುರಿತು ಪ್ರಕಟಣೆ ಹೊರಡಿಸುತ್ತಿದ್ದಂತೆಯೇ ಜನರಲ್ಲಿ ಗೊಂದಲ ಸೃಷ್ಟಿಯಾಗಿತ್ತು.

ಅಲ್ಲದೇ ಇದನ್ನು 2 ಸಾವಿರ ರೂಪಾಯಿ ನೋಟು ಹೇಗೆ ಬದಲಾವಣೆ ಮಾಡಿಕೊಳ್ಳಬೇಕು ಎನ್ನುವ ಗೊಂದಲಕ್ಕೆ ಬಿದಿದ್ದು,

ಹಲವು ಸರ್ಕಸ್‌ ಶುರು ಮಾಡಿಕೊಂಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಚಿನ್ನ ಖರೀದಿ ಮಾಡುವುದು,

ಹೋಮ್‌ ಡಿಲವರಿ ಟೈಮ್‌ನಲ್ಲಿ 2,000 ಸಾವಿರ ರೂಪಾಯಿ ನೀಡುತ್ತಿದ್ದಾರೆ.

ಜೊಮೊಟೊ ಸಹ ಈ ಬಗ್ಗೆ ಟ್ವೀಟ್‌ ಮಾಡಿದ್ದು, ಜನ ಹೆಚ್ಚು ಕ್ಯಾಶ್‌ ಅನ್‌ ಡಿಲವರಿಯಲ್ಲಿ 2 ಸಾವಿರ ರೂಪಾಯಿ

ನೋಟು ನೀಡುತ್ತಿದ್ದಾರೆ ಎಂದು ಹೇಳಿದೆ. ಅಲ್ಲದೇ ಚಿನ್ನ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಚಿನ್ನದ ಬೆಲೆಯೂ ಹೆಚ್ಚಳವಾಗಿದೆ.
--------------  

2000rs note|What RBI said about the change of 2000 note; Why troll? (Photo @zomato)

ಕೊನೆಯದಾಗಿ ಎರಡು ಸಾವಿರ ರೂಪಾಯಿ ಕುರಿತ ಪಾಯಿಂಟ್ಸ್‌ ಇಲ್ಲಿದೆ

  •  ಇದೀಗ ಯಾವುದೇ ಬ್ಯಾಂಕ್‌ನಲ್ಲಿಯಾದರೂ ನೀವು 2000 ಮುಖಬೆಲೆಯ ನೋಟುಗಳನ್ನು ಬೇರೆ ಮುಖಬೆಲೆಯ ನೋಟುಗಳಾಗಿ ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. 
  • ಈ ವರ್ಷ ಸೆಪ್ಟೆಂಬರ್ 30ರವರೆಗೆ ಎಲ್ಲಾ ಬ್ಯಾಂಕುಗಳಲ್ಲಿ 2000 ಬ್ಯಾಂಕ್ ನೋಟುಗಳಿಗೆ ಠೇವಣಿ ಅಥವಾ
  • ವಿನಿಮಯ ಸೌಲಭ್ಯ ಇರಲಿದೆ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ. 
  • ನೀವು ಎರಡು ಸಾವಿರ ರೂಪಾಯಿ ನೋಟು ಹೊಂದಿದ್ದರೆ ನಿಮ್ಮ ಖಾತೆಯಲ್ಲಿ ಜಮೆ ಮಾಡಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು.   
  • 2000 ರೂಪಾಯಿ ನೋಟುಗಳ ವಿನಿಮಯಕ್ಕೆ ಯಾವುದೇ ನಿರ್ಬಂಧ ಇಲ್ಲ. 
Published On: 27 May 2023, 02:28 PM English Summary: 2000rs note|What RBI said about the change of 2000 note; Why troll?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.