1. ಸುದ್ದಿಗಳು

ಸರ್ಕಾರಿ ನೌಕರರ ಗಮನಕ್ಕೆ: ಈ ದಿನ ಬರಲಿದೆಯಂತೆ ನಿಮ್ಮ ಖಾತೆಗೆ 18 ತಿಂಗಳ ಬಾಕಿ ಡಿಎ!

Kalmesh T
Kalmesh T
18 Months Due DA on your account as this day comes! Pic Credit: Zee News

Dearness allowances : ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ. ಈ ದಿನ ಬರಲಿದೆಯಂತೆ ನಿಮ್ಮ ಖಾತೆಗೆ 18 ತಿಂಗಳ ಬಾಕಿ ಡಿಎ ಹಣ. ಇಲ್ಲಿದೆ ವಿವರ

18 months Dearness allowances : ಕೇಂದ್ರ ಸರ್ಕಾರಿ ನೌಕರರು ಬಹಳ ದಿನಗಳಿಂದ ಕಾಯುತ್ತಿರುವ ಡಿಎ ಬಾಕಿ ಕುರಿತು ಸರ್ಕಾರದಿಂದ ಘೋಷಣೆಯಾಗಿದೆ ಎಂದು ಮಾಧ್ಯಮ ವರದಿಯಾಗಿವೆ.

ಇದೀಗ ಕೇಂದ್ರ ಸರ್ಕಾರ ಯಾವಾಗ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾಯುತ್ತಿದ್ದಾರೆ. ಅದರಲ್ಲಿ 18 ತಿಂಗಳಿನ ಡಿಎ ಬಾಕಿಗೆ ಸಂಬಂಧಿಸಿದೆ.

ಮಾಧ್ಯಮ ವರದಿಗಳ ಪ್ರಕಾರ ಸರ್ಕಾರ ಶೀಘ್ರದಲ್ಲೇ 18 ತಿಂಗಳ ಡಿಎ ಬಾಕಿ ಹಣವನ್ನು ನೌಕರರ ಖಾತೆಗೆ ವರ್ಗಾಯಿಸಲಿದೆ.

Dearness allowances: ಲೋಕಸಭೆಯಲ್ಲೂ 18 ತಿಂಗಳ ಡಿಎ ಬಾಕಿ ಇರುವ ಬಗ್ಗೆ ಸರ್ಕಾರವು ಮಾಹಿತಿಯನ್ನು ನೀಡಿದೆ. 48 ಲಕ್ಷ ನೌಕರರು ಮತ್ತು 68 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಡಿಎ ಬಾಕಿ ಹಣವನ್ನು ಶೀಘ್ರದಲ್ಲೇ ಪಡೆಯಬಹುದು ಎನ್ನಲಾಗುತ್ತಿದೆ.

ಸರ್ಕಾರವು 18 ತಿಂಗಳ ಡಿಎ ಬಾಕಿಯ ಬಗ್ಗೆ ಶೀಘ್ರದಲ್ಲೇ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಕೊರೊನಾ ಎಲ್ಲೆಡೆ ಹಬ್ಬಿದ್ದ ಸಮಯದಲ್ಲಿ ತುಟ್ಟಿಭತ್ಯೆಯ 3 ಕಂತುಗಳನ್ನು ಸರ್ಕಾರ ತಡೆ ಹಿಡಿದಿತ್ತು.

2021 ರ ಜೂನ್ ತಿಂಗಳಲ್ಲಿ ಮತ್ತೆ ತುಟ್ಟಿ ಭತ್ಯೆ ನೀಡುವುದನ್ನು ಆರಂಭಿಸಲಾಗಿತ್ತು. ಇತ್ತೀಚೆಗೆ ಕೇಂದ್ರ ಸರ್ಕಾರಿ ನೌಕರರ ಡಿಎಯನ್ನು ಹೆಚ್ಚಿಸಲಾಗಿದೆ.
ಸರ್ಕಾರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಿದ್ದು, ನೌಕರರ ತುಟ್ಟಿಭತ್ಯೆ ಶೇ 42ಕ್ಕೆ ಏರಿದೆ. ಜುಲೈ 2023 ರಲ್ಲಿ, ಉದ್ಯೋಗಿಗಳ ಡಿಎಯನ್ನು ಮತ್ತೆ ಹೆಚ್ಚಿಸಲಾಗುತ್ತದೆ.

ಇತ್ತೀಚೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಶೇ.4ರಷ್ಟು ಡಿಎ ಹೆಚ್ಚಿಸಿರುವುದು ಗೊತ್ತೇ ಇದೆ. ಸದ್ಯ ಶೇ.42 ಡಿಎ ಲಭ್ಯವಿದೆ. ಪ್ರತಿ ವರ್ಷ ಜನವರಿಯಲ್ಲಿ ಒಮ್ಮೆ ಮತ್ತು ಜುಲೈನಲ್ಲಿ ಉದ್ಯೋಗಿಗಳಿಗೆ ಡಿಎ ಹೆಚ್ಚಾಗುತ್ತದೆ.

ನೌಕರರಿಗೆ ತುಟ್ಟಿಭತ್ಯೆ ಹೆಚ್ಚಿಸಿದರೆ, ಪಿಂಚಣಿದಾರರಿಗೆ ತುಟ್ಟಿಭತ್ಯೆ ಹೆಚ್ಚಿಸಲಾಗುವುದು. ಡಿಎ ಹೆಚ್ಚಳದಿಂದ 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.

Published On: 25 April 2023, 04:03 PM English Summary: 18 Months Due DA on your account as this day comes!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.