1. ಸುದ್ದಿಗಳು

ಪದ್ಮಶ್ರೀ ಪ್ರಶಸ್ತಿ ಸ್ವೀಕಾರಕ್ಕೂ ಮೊದಲು ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿದ 125 ವಯಸ್ಸಿನ ಯೋಗ ಗುರು

KJ Staff
KJ Staff
125-year-old Yoga Guru Swami Sivananda gets Padma Shri

ಆ ವೃದ್ಧ ರಾಷ್ಟ್ರಪತಿ ಭವನದ ಹಾಲ್‌ನಲ್ಲಿ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ನಡೆದು ಬರುತ್ತಿದ್ದಂತೆಯೇ ಸಭಾಂಗಣದಲ್ಲಿದ್ದವರೆಲ್ಲ ಬೆರಗು ಗಣ್ಣಿನಿಂದ ನೋಡುತ್ತಿದ್ದರು. ಹಾಗೇ ನೋಡುತ್ತಿದ್ದಂತೆ ಆ ವ್ಯಕ್ತಿ ಪ್ರಧಾನಿ ಬಳಿ ಬಂದು ಮಂಡಿಯೂರಿ ನಮಸ್ಕರಿಸಿದರು. ಪ್ರಧಾನಿ ಮೋದಿ ಸಹ ಎದ್ದು ನಿಂತು ಶಿರಬಾಗಿ ಪ್ರತಿವಂದಿಸಿದರು.

ಇದನ್ನೂ ಓದಿ:GOODNEWS: ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ ಧನ.. ಅರ್ಜಿ ಸಲ್ಲಿಕೆ ಹೇಗೆ..?

ಏಂಥಾ ಮುಗ್ಧತೆ..!

ರಾಷ್ಟ್ರಪತಿ ಭವನದಲ್ಲಿ ನಿನ್ನೆ ನಡೆದ ಪದ್ಮ ಪ್ರಶಸ್ತಿ ಸಮಾರಂಭದಲ್ಲಿ ತಮ್ಮ ಸರಳ ವ್ಯಕ್ತಿತ್ವದಿಂದ ಗಮನ ಸೆಳೆದವರು, ಉತ್ತರ ಪ್ರದೇಶದ 125 ವರ್ಷ ಪ್ರಾಯದ ಯೋಗಗುರು ಸ್ವಾಮಿ ಶಿವಾನಂದ. ಪ್ರಧಾನಿಗೆ ನಮಸ್ಕರಿಸಿದ ಬಳಿಕ ಸ್ವಾಮಿ ಶಿವಾನಂದ ಅವರು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೂ ಮಂಡಿಯೂರಿ ನಮಸ್ಕರಿಸಿದರು. 125 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ ಅವರ ಸಾಧನೆಯನ್ನು ಗುರುತಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಇವರು ಪ್ರಶಸ್ತಿ ಸ್ವೀಕಾರಕ್ಕೂ ಮೊದಲು ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ದೇಶದ ಉನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಸೋಮವಾರ ಪ್ರಧಾನ ಮಾಡಿದರು.

ಇದನ್ನೂ ಓದಿ:ಶೇ.86 ರಷ್ಟು ರೈತರು ಕೃಷಿ ಕಾಯ್ದೆಗಳನ್ನ ಬೆಂಬಲಿಸಿದ್ದರು..ಸುಪ್ರೀಂ ವರದಿ

8 ಜನರಿಗೆ ಪದ್ಮಭೂಷಣ
ಭಾರತದ ಫಸ್ಟ್‌ CDS ಬಿಪಿನ್‌ ರಾವತ್‌ ಮತ್ತು ರಾಧೇಶ್ಯಾಮ್‌ ಖೇಮ್ಕಾ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗಿದೆ. ರಾವತ್‌ ಅವರ ಪರವಾಗಿ ಅವರ ಪುತ್ರಿ ಪ್ರಶಸ್ತಿಯನ್ನು ಸ್ವೀಕಾರ ಮಾಡಿದರು. ಖೇಮ್ಕಾ ಪರವಾಗಿ ಅವರ ಕುಟುಂಬಸ್ಥರು ಪ್ರಶಸ್ತಿ ಸ್ವೀಕರಿಸಿದರು.ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌, ಮಾಜಿ ಸಿಎಜಿ ರಾಜೀವ್‌ ಮೆಹರ್ಷಿ, ಸೀರಂ ಸಂಸ್ಥೆಯ ಸಂಸ್ಥಾಪಕ ಸೈರಸ್‌ ಪೂನಾವಾಲ ಟಾಟಾ ಕಂಪನಿಯ ಅಧ್ಯಕ್ಷ ಎನ್‌. ಚಂದ್ರಶೇಖರನ್‌ , ಸೇರಿದಂತೆ 8 ಜನರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.
ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. ಈ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್/ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಪ್ರಶಸ್ತಿ ನೀಡಿ ಗೌರವಿಸುತ್ತಾರೆ.

ಇದನ್ನೂ ಓದಿ:ಹೋಳಿ ಹಬ್ಬದಲ್ಲಿ ಮುಖ ಹಾಗೂ ಕೂದಲಿನ ರಕ್ಷಣೆ ಹೇಗೆ..?ಇಲ್ಲಿವೆ 5 ಬೆಸ್ಟ್‌ ಟಿಪ್ಸ್‌

ಈ ವರ್ಷ 128 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. 4 ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 107 ಪದ್ಮಶ್ರೀ ಪ್ರಶಸ್ತಿಗಳನ್ನು ಈ ಪಟ್ಟಿ ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 34 ಮಹಿಳೆಯರು, ವಿದೇಶಿಯರು/NRI/PIO/OCI ವರ್ಗದಿಂದ 10 ವ್ಯಕ್ತಿಗಳು ಮತ್ತು 13 ಜನರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗಿದೆ.

ಇದನ್ನೂ ಓದಿ:Job updates: ONGC ಯಲ್ಲಿ ನೇಮಕಾತಿ ಆರಂಭ..ಈ ಪದವಿ ಪಡೆದವರಿಗೆ ಆದ್ಯತೆ

Published On: 22 March 2022, 10:38 AM English Summary: 125-year-old Yoga Guru Swami Sivananda gets Padma Shri

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.