ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ (ಲಕ್ಷ್ಮೇಶ್ವರ ತಾಲೂಕ ಒಳಗೊಂಡಂತೆ ) ಸುಮಾರು 215 ಎಕರೆ ಪ್ರದೇಶದಲ್ಲಿ ಮಾವಿನ ಬೆಳೆಯನ್ನು ಬೆಳೆಯಲಾಗುತ್ತಿದೆ. ಮಾವಿನ ಬೆಳೆಗೆ ಹಲವಾರು ಕೀಟ ರೋಗಗಳ ಬಾಧೆ ತಗುಲಿದ್ದು, ಪರಿಣಾಮಕಾರಿಯಾಗಿ ನಿಯಂತ್ರಿಸಿದರೆ, ಉತ್ತಮ ಗುಣಮಟ್ಟದ ಇಳುವರಿಯನ್ನು ಪಡೆಯಬಹುದಾಗಿದೆ.
- ಹೂ ಬಿಟ್ಟಾಗ ಮತ್ತು ಪರಾಗ ಸ್ಪರ್ಷ ಆಗುತ್ತಿರುವ ಸಮಯದಲ್ಲಿ ಗಂಧಕವನ್ನು ಸಿಂಪಡಿಸಬಾರದು. ಏಕೆಂದರೆ, ಗಂಧಕವು ಪರಾಗ ಸ್ಪರ್ಷ ಕ್ರಿಯೆಗೆ ಸಹಕರಿಸುವ ಕೀಟಗಳಿಗೆ ಅರಳಿದ ಹೂವುಗಳು ಮತ್ತು ಎಳೆಯ ಕಟ್ಟಿದ ಕಾಯಿಗಳಿಗೆ ಹಾನಿಯನ್ನುಂಟು ಮಾಡುತ್ತವೆ.
- ಪರಾಗ ಸ್ಪರ್ಷ ಆಗುತ್ತಿರುವ ಸಮಯದಲ್ಲಿ ಯಾವುದೇ ಕಾರಣಕ್ಕು ಗಿಡಗಳಿಗೆ ನೀರುಣಿಸಬಾರದು ಪರಾಗ ಸ್ಪರ್ಷ ಪೂರ್ಣಗೊಂಡ ನಂತರ ಕಾಯಿಯು ಬಟಾಣಿಯಿಂದ ಗೋಲಿ ಗಾತ್ರದ ಹಂತದಲ್ಲಿ ನೀರು ಕೊಡಲು ಪ್ರಾರಂಭಿಸಬಹುದು. ಎರಡು ಮತ್ತು ಮೂರು ರಕ್ಷಾಣಾತ್ಮಕ/ಪೂರಕ ನೀರಾವರಿ ಕೈಗೊಳ್ಳಬಹುದು.
Kisan Call Center | ರೈತರ ಸಮಸ್ಯೆ ಆಲಿಸಲು "ಕಿಸಾನ್ ಕಾಲ್ ಸೆಂಟರ್" ಸ್ಥಾಪನೆ
- ಕಚ್ಚಿದ ಕಾಯಿಗಳು ಉದುರದಂತೆ ನೋಡಕೊಳ್ಳಲು ಅವುಗಳಿಗೆ ಸಸ್ಯ ಬೆಳವಣಿಗೆ ಬೋದಕ (NAA) (Plantofx) 50ppm ಪ್ರಮಾಣದಲ್ಲಿ ಸಿಂಪಡಿಸಬೇಕು (0.5M/L,ಪ್ರಮಾಣದಲ್ಲಿ ಬೆರೆಸಿ)
- ಚಿಕ್ಕ ಕಾಯಿಗಳು ಬೆಳೆಯುತ್ತಿರುವ ಹಂತದಲ್ಲಿ ಅವುಗಳಿಗೆ ಭಾರತಿಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (IIHR) ರವರು ಹೊರತಂದಿರುವ “Mango Special” ವನ್ನು ಪ್ರತಿ 10 ಲೀಟರ್ ನೀರಿನಲ್ಲಿ 50 ಗ್ರಾಂ ಪ್ರಮಾಣದಲ್ಲಿ ಕರಗಿಸಿ ಸಿಂಪಡಿಸುವುದು. ಈ ಸಿಂಪರಣಾ ದ್ರಾವಣಕ್ಕೆ ಸೋಪು ದ್ರಾವಣವನ್ನು (0.5 ಮಿ ಲೀ/ಲೀ) ಮತ್ತು ಅರ್ಧ ಹೋಳು ನಿಂಬೆ ರಸ ಬೆರೆಸಿ ಸಿಂಪಡಿಸಿದರೆ ಅದು ಪರಿಣಾಮಕಾರಿ ಕಾಯಿಲೆಗಳಿಗೆ ಅಂಟಿಕೊಳ್ಳುವುದು.
- ಪೋಟ್ಯಾಷಿಯಂ ನೈಟ್ರೇಟ್ (Potssium nitrate-KN03) (13-0-45) 20 ಗ್ರಾಂ/ಲೀ ಸಿಂಪರಣೆಯನ್ನು ಕೈಗೊಳ್ಳುವುದರಿಂದ ಮೊಗ್ಗು ಅರಳಲು ಮತ್ತು ಏಕರೂಪದ ಹೂ ಬಿಡುವಿಕೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.
ಆಹಾರ ಮತ್ತು ರಸಗೊಬ್ಬರದ ಮೇಲಿನ ಸಬ್ಸಿಡಿ ಕಡಿತಕ್ಕೆ ಸರ್ಕಾರದ ಚಿಂತನೆ
- ಯಾವುದೇ ಕೀಟನಾಶಕಗಳನ್ನು ಒಂದು ಅಥವಾ ಎರಡು ಬಾರಿಗಿಂತ ಹೆಚ್ಚಾಗಿ ಉಪಯೋಗಿಸಬಾರದು
- ಕೈಗೆಟಕಿರುವ ಹಂತದ ಸಣ್ಣ ಕಾಯಿಗಳಿಗೆ ಪೇಪರ್ ಕವರ ಹೊದಿಕೆ ಅಳವಡಿಸಿದಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಬಹುದಾಗಿದೆ. ನೇರ ಮಾರುಕಟ್ಟೆ ಸಂಪರ್ಕ ಹೊಂದಿದ ಬೆಳೆಗಾರರಿಗೆ ಇದು ಉತ್ತಮ ಕ್ರಮವಾಗಲಿದೆ. ಎಲ್ಲಾ ಕಾಯಿಲೆಗಳಿಗೆ ಕವರ ಅಳವಡಿಕೆ ಮಾಡುವ ಅಗತ್ಯವಿರುವುದಿಲ್ಲ.
ರಾಜ್ಯ ಸರ್ಕಾರದಿಂದ ಸಿಹಿಸುದ್ದಿ: ವಸತಿ ರಹಿತರಿಗೆ ನೀಡುತ್ತಿದ್ದ ಸಬ್ಸಿಡಿ 3 ಮತ್ತು 4 ಲಕ್ಷಕ್ಕೆ ಹೆಚ್ಚಳ!
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆಗೆ, ಭೇಟಿ ನೀಡಿ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಶಿರಹಟ್ಟಿ ಶ್ರೀ ಸುರೇಶ ವಿ ಕುಂಬಾರ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿ: ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು,(ಜಿ.ಪಂ) ಶಿರಹಟ್ಟಿ
Share your comments