1. ತೋಟಗಾರಿಕೆ

ಬೆಳೆ ಹಾನಿ ತಪ್ಪಿಸಲು ಕವರ್ ಬ್ಯಾಗ್‌ನ ಮೊರೆ!

Kalmesh T
Kalmesh T
More of a cover bag to avoid crop damage!

ಸಾಮಾನ್ಯವಾಗಿ ರೈತರು ಪ್ರತಿದಿನ ಒಂದಲ್ಲ ಒಂದು ಸಮಸ್ಯೆಯನ್ನು ಅನುಭವಿಸುತ್ತಲೇ ಇರುತ್ತಾರೆ. ಇಡಿ ಜಗತ್ತಿಗೆ ಅನ್ನವನ್ನು ನೀಡುವ ರೈತ ಮಾತ್ರ ಸದಾ ಪರದಾಡುವುದು ಸ್ಥಿತಿಯಲ್ಲಿರುವುದು ಕಾಣುತ್ತೇವೆ. ಬೆಳೆ ಬೆಳೆಯುವಾಗ ಒಂದು ಸಮಸ್ಯೆಯಾದರೆ, ಬೆಳೆದ ನಂತರ ಅದನ್ನು ಕಾಯವುದು ಇನ್ನೂ ದೊಡ್ಡ ಸವಾಲು.

ಹೇಗೋ ಬೆಳೆಯನ್ನು ಕಾಪಾಡಿಕೊಂಡು ಕೊಯ್ಲಿನವರೆಗೆ ತರುವ ಹೊತ್ತಿಗೆ ಕೀಟ ಬಾಧೆ, ರೋಗ ಬಾಧೆ, ಹಿಮ, ಮಳೆ, ಹವಾಮಾನ ಬದಲಾವಣೆ ಪರಿಣಾಮದಿಂದ ಇಳುವರಿಯಲ್ಲಿ ವ್ಯತ್ಯಾಸ ಹೀಗೆ ಹತ್ತಾರು ಸಮಸ್ಯೆಗಳನ್ನು ಒಡಲಲ್ಲೆ ಕಟ್ಟಿಕೊಂಡು ಬದುಕುವ ಜೀವ ರೈತನದು.

ಇದನ್ನು ಓದಿರಿ: ಗುಡ್‌ ನ್ಯೂಸ್‌: ಹೈನುಗಾರರಿಗೆ ಕ್ರೆಡಿಟ್‌ ಕಾರ್ಡ್‌! ದೇಶದಲ್ಲೆ ಮೊದಲು

Navy Recruitment : 12ನೇ ತರಗತಿ ಪಾಸ್ ಆದವರಿಗೆ ನೇಮಕಾತಿ..69,000 ವರೆಗೆ ಸಂಬಳ

ಆದರೆ, ಇಲ್ಲೊಂದಷ್ಟು ಜನ ರೈತರು ಇಂಥ ಕೀಟ ಬಾಧೆ, ರೋಗ ಬಾಧೆ, ಹಿಮ, ಮಳೆ, ಹವಾಮಾನ ಬದಲಾವಣೆ ಪರಿಣಾಮದಿಂದ ಇಳುವರಿಯಲ್ಲಿ ವ್ಯತ್ಯಾಸವಾಗುವುದನ್ನು ತಡೆದು ಉತ್ತಮ ಫಸಲನ್ನು ಪಡೆಯುವ ಮಾರ್ಗವನ್ನು ಕಂಡು ಕೊಂಡಿದ್ದಾರೆ. ಮತ್ತು ಆ ಮಾರ್ಗವನ್ನು ಅನುಸರಿಸುತ್ತ ಮೊದಲಿಗಿಂತ ನೆಮ್ಮದಿಯ ವಾತಾವರಣದಲ್ಲಿ ಬದುಕುತಿದ್ದಾರೆ. ಹಾಗಿದ್ದರೆ ಅದೇನಪ್ಪ ಆ ರೈತರು ಕಂಡುಕೊಂಡು ಅಂತ ಅದ್ಬುತ ಮಾರ್ಗ ಎಂದು ಕುತೂಹಲ ಮೂಡುತ್ತಿದೆಯೇ? ಇಲ್ಲಿದೆ ವಿವರ.

ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರು ತಮ್ಮ ತೋಟದ ಬೆಳೆಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ಈಗ ಹೊಸ ಕಾರ್ಯಕ್ಕೆ ಮುಂದಾಗಿದ್ದಾರೆ. ತಮ್ಮ ತೋಟದಲ್ಲಿ ಬೆಳೆದ  ಮಾವಿನ ಬೆಳೆಗೆ wax coated biodegradable ಚೀಲಗಳನ್ನು ಹಾಕುವ ಮೂಲಕ ಕೀಟ ಬಾಧೆ ಹಾಗೂ ರೋಗ ಬಾಧೆಯಿಂದ ಬಚಾವಾಗಲು ಪರಿಹಾರ ಕಂಡುಕೊಂಡಿದ್ದಾರೆ.

ಎಚ್ಚರಿಕೆ: ಕರ್ನಾಟಕದಲ್ಲಿ ಭಾರೀ ಮಳೆ! ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಹೌದು! ಚಿಕ್ಕಬಳ್ಳಾಪುರದ ಈ ರೈತರು ತಮ್ಮ ತೋಟದಲ್ಲಿ ಮಾವನ್ನು ಬೆಳೆದಿದ್ದಾರೆ. ಈಗ ಮಾವು ಕಾಯಿ ಕಚ್ಚುವ ಹಂತದಲ್ಲಿ ಕೀಟಗಳ ಬಾಧೆಯಿಂದ ಇಳುವರಿಯಲ್ಲಿ ವ್ಯತ್ಯಾಸವಾಗುತ್ತದೆ.

ಈ ಸಮಸ್ಯೆಯನ್ನು ಹೋಗಲಾಡಿಸಿಲು ಮಾವಿನ ಕಾಯಿಗಳ ಮೇಲೆ wax coated biodegradable ಚೀಲಗಗಳಿಂದ ಮುಚ್ಚುತ್ತಿದ್ದಾರೆ.

ಈ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಮುಂದೆ Whatsapp ಕಾರ್ಯನಿರ್ವ ಹಿಸಲ್ಲ..! ಕಾರಣವೇನು.

ಪ್ರತಿಯೊಂದು ಮಾವಿನ ಕಾಯಿಯ ಮೇಲೂ ಈ ತರದ wax coated biodegradable ಚೀಲಗಳನ್ನು ಪ್ರತ್ಯೇಕವಾಗಿ ಹಾಕುವ ಮೂಲಕ ಈ ನುಶಿ, ಕೀಟ, ಪಕ್ಷಿಗಳ ದಾಳಿಗೆ ಸಿಲುಕಿ ಮಾವು ಹಾಳಾಗುವುದನ್ನು ತಪ್ಪಿಸಿದ್ದಾರೆ. ಇದನ್ನು ಪತ್ರಕರ್ತ ನಿರಂಜನ ಕಗ್ಗೆರೆ ಅವರು ತಮ್ಮ twitter ಖಾತೆಯಲ್ಲಿ ಹಂಚಿಕೊಂಡಿದಾರೆ.

ಈ ಮೂಲಕ ಚಿಕ್ಕಬಳ್ಳಾಪುರದ ರೈತರು ತಾವು ಕಷ್ಟಪಟ್ಟು ಬೆಳೆದ ಮಾವಿನ ಬೆಳೆಗೆ ಯಾವುದ್ಯಾವುದೋ ರೋಗ ಹತ್ತುವುದರಿಂದ ಕಾಪಾಡಿಕೊಂಡಿದ್ದಾರೆ.  ಮತ್ತು ಇದನ್ನು ಕಂಡ ಅನೇಕ ರೈತರು ಕೂಡ ಇದನ್ನು ಮೆಚ್ಚಿಕೊಂಡಿದ್ದಾರೆ.

ಮತ್ತಷ್ಟು ಓದಿರಿ: ಇನ್ಮುಂದೆ Aadhaar-Pan Link ಫ್ರೀ ಇಲ್ಲ..ಸ್ವಲ್ಪ ಯಾಮಾರಿದ್ರೆ 1 ಸಾವಿರ Fine..!

Navy Recruitment : 12ನೇ ತರಗತಿ ಪಾಸ್ ಆದವರಿಗೆ ನೇಮಕಾತಿ..69,000 ವರೆಗೆ ಸಂಬಳ

Published On: 02 April 2022, 03:20 PM English Summary: More of a cover bag to avoid crop damage!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.