ಸೇವಂತಿಗೆ ಹೂವಿನ ಕೃಷಿಯಲ್ಲಿ ಅನುಸರಿಸಬೇಕಾದ ಬೇಸಾಯ ಕ್ರಮಗಳ ಕುರಿತು ಇಲ್ಲಿದೆ ಮಾಹಿತಿ
ಇದನ್ನೂ ಓದಿರಿ: ಕೆ.ಜಿ ಜೇನು ತುಪ್ಪಕ್ಕೆ 8.8 ಲಕ್ಷ ಎಂದರೆ ನೀವು ನಂಬುತ್ತೀರಾ?
ಹೂವಿನ ಬೆಳೆಗಳಲ್ಲಿ ಗುಣಮಟ್ಟದ ಮತ್ತು ನಿಯಮಿತವಾಗಿ ಹೂವುಗಳನ್ನು ಪಡೆಯಲು ಗಿಡಗಳ ಬೆಳೆವಣಿಗೆಯನ್ನು ನಿಯಂತ್ರಣ ಮಾಡುವುದು ಮುಖ್ಯ ಪಾತ್ರವನ್ನು ವಹಿಸುತ್ತದೆ.
ಇದನ್ನು ಮಾಡಲು ಹಲವು ವಿಧಾನಗಳಿವೆ ಅವುಗಳೆಂದರೆ, ಬೆಳಕಿನ ಸಮಯ ನಿಯಂತ್ರಿಸುವುದು, ಸಸ್ಯದ ಬೆಳವಣಿಗೆಯನ್ನು ನಿಯಂತ್ರಣ ಮಾಡುವ ರಾಸಾಯನಿಕಗಳನ್ನು ಬಳಸುವುದು, ಚಾಟನಿ ಮಾಡುವುದು, ಕುಡಿ ಚಿವುಟುವುದು, ತಾಯಿಗಿಡದ ಪಕ್ಕದಲ್ಲಿ ಬರುವ ಮರಿಗಿಡಗಳನ್ನು ತೆಗೆಯುವುದು ಇತ್ಯಾದಿ..
ಪ್ರತಿ ಹೂವಿನ ಬೆಳೆಗಳಲ್ಲಿ ವಿವಿಧ ರೀತಿಯ ಬೆಳೆ ನಿಯಂತ್ರಣ ಕ್ರಮಗಳನ್ನು ಸೂಕ್ತ ಸಮಯದಲ್ಲಿ ಮಾಡುವುದರಿಂದ ಹೂವಿನ ಇಳುವರಿಯನ್ನು ನಿಯಂತ್ರಿಸಿ ಮಾರುಕಟ್ಟೆಯಲ್ಲಿ ಉಂಟಾಗುವ ಹೆಚ್ಚುವರಿಯನ್ನು ತಗ್ಗಿಸಬಹುದು.
ಭತ್ತದ ಕೃಷಿಯಲ್ಲಿ ಮೀನುಗಾರಿಕೆ: ಈಗ ರೈತರು ಎರಡೆರಡು ಲಾಭ ಪಡೆಯಬಹುದು!
* ಕುಡಿ ಚಿವುಟುವುದು (Pinching):
ಸೇವಂತಿಗೆ ಗಿಡವನ್ನು ಮೊದಲು ನಾಟಿ ಮಾಡಿದಾಗ ಗಿಡವು ಎತ್ತರವಾಗಿ ನೇರವಾಗಿ ಬೆಳೆದು ಕಾಂಡಗಳ ಸಂಖ್ಯೆಯು ಕಡಿಮೆ ಇರುತ್ತದೆ. ಇದನ್ನು ತಪ್ಪಿಸಲು ಸೇವಂತಿಗೆ ಗಿಡದ 1.5 ಸೆಂ.ಮಿ. ನಿಂದ 3 ಸೆಂ. ಮಿಟರ್ವರೆಗೂ ಇರುವ ಮೃದುಕಾಂಡವನ್ನು ಚಿವುಟುವುದರಿಂದ ಮರಿ ಕಾಂಡಗಳ ಸಂಖ್ಯೆಯೂ ಹೆಚ್ಚಾಗಿ ಪ್ರತಿಕಾಂಡದ ತುದಿಯಲ್ಲೂ ಹೂವುಗಳನ್ನು ಪಡೆಯಬಹುದು ಹಾಗೂ ಪರೋಕ್ಷವಾಗಿ ಹೂವು ಬಿಡುವ ದಿನಗಳನ್ನು ನಿಯಂತ್ರಿಸಬಹುದು ಮತ್ತು ಹೂವಿನ ಗುಣಮಟ್ಟವನ್ನು ಸಹ ಹೆಚ್ಚಿಸಬಹುದು.
* ವಿವಿಧ ರೀತಿಯ ಕುಡಿ ಚಿವುಟುವಿಕೆ:
ಅ) ಮೃದು ಕಾಂಡವನ್ನು ಚಿವುಟುವುದು (Soft pinching): ಇದರಲ್ಲಿ ಸೇವಂತಿಗೆ ಸಸ್ಯದ ತುದಿಯ ಮೃದು ಭಾಗದ 2 ರಿಂದ 3 ಎಲೆಗಳ ಜೊತೆಗೆ ತುದಿ ಚಿವುಟುವುದು, ಈ ರೀತಿ ಮಾಡುವುದರಿಂದ ಗಿಡದ ಎತ್ತರವನ್ನು ಕಡಿಮೆ ಮಾಡಬಹುದು.
ಆ) ಗಟ್ಟಿ (ಬಲಿತ) ಕಾಂಡವನ್ನು ಚಿವುಟುವುದು (Hard pinching): ಇದರಲ್ಲಿ ಸೇವಂತಿಗೆ ಸಸ್ಯದ ಬಲಿತ ಕಾಂಡದವರೆಗೂ ಚಿವುಟುವುದು, ಇದರಿಂದ ಗಿಡದ ಎತ್ತರವನ್ನು ಕಡಿಮೆ ಮಾಡಬಹುದು ಹಾಗೂ ಗಿಡವು ಪೊದೆಯಾಕಾರದಲ್ಲಿ ಬೆಳೆಯುತ್ತದೆ. ಇದನ್ನು ಸಾಮಾನ್ಯವಾಗಿ ಕುಂಡಗಳಲ್ಲಿ ಬೆಳೆಯಲು ಈ ಕ್ರಮವನ್ನು ಅನುಸರಿಸಲಾಗುವುದು.
Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…
* ಆಧಾರ ಒದಗಿಸುವುದು:
ಸಾಮಾನ್ಯವಾಗಿ ಸೇವಂತಿಗೆ ಗಿಡವು 75 ರಿಂದ 90 ಸೆಂ.ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಆದಾ ಕಾರಣ ಬಲಿತ ಕಾಂಡಗಳಿಗೆ ಆಧಾರ ಒದಗಿಸುವುದು ತುಂಬ ಅವಶ್ಯಕ.
ಆಧಾರ ಒದಗಿಸದಿದ್ದರೆ ಕಾಂಡಗಳು ಬಗ್ಗಿ ಹೂವಿನ ಬೆಲೆ ಮಾರುಕಟ್ಟೆಯಲ್ಲಿ ಕಡಿಮೆ ಆಗುತ್ತದೆ. ಆಧಾರ ಒದಗಿಸಲು ವಿವಿಧ ಬಗೆಯ ಬಲೆಗಳು ಮತ್ತು ಬಿದರಿನ ಕೋಲುಗಳನ್ನು ಬಳಸಲಾಗುತ್ತದೆ.
* ಮರಿ ಕಂದುಗಳನ್ನು ತೆಗೆಯುವುದು:
ತಾಯಿಗಿಡದ ಪಕ್ಕದಲ್ಲಿ ಬರುವ ಮರಿ ಕಾಂಡಗಳನ್ನು ಆಗಿಂದ್ದಾಗ್ಗೆ ತೆಗೆಯಬೇಕು. ಇದರಿಂದಾಗಿ ತಾಯಿಗಿಡ ಚನ್ನಾಗಿ ಬೆಳೆದು ಉತ್ತಮ ಗುಣಮಟ್ಟದ ಹೂವುಗಳನ್ನು ಪಡೆಯಬಹುದು.
* ಬೆಳಕಿನ ಅವಧಿಯನ್ನು ನಿಯಂತ್ರಿಸುವುದು:
ಸೇವಂತಿಗೆಯನ್ನು ಹಗಲು ಚಿಕ್ಕದಿರುವ ದಿನಗಳಲ್ಲಿ (Oct-Dec) ಬೆಳೆಯಲು ಅತಿ ಸೂಕ್ತವಾದ ಹೂವಿನ ಬೆಳೆಯಾಗಿದೆ. ಇದಕ್ಕೆ ಹೆಚ್ಚು ಬೆಳಕನ್ನು ನೀಡಿದರೆ ಗಿಡ ಎತ್ತರಕ್ಕೆ ಬೆಳೆಯುತ್ತದೆ ಮತ್ತು ಕತ್ತಲು ಹೆಚ್ಚು ನೀಡಿದರೆ, ಹೂ ಬಿಡಲು ಪ್ರಾರಂಭವಾಗುವುದು.
Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…
ಆದಾ ಕಾರಣ ಬೆಳಕನ್ನು ಕೃತಕವಾಗಿ ನಿಯಂತ್ರಿಸಿ, ಸೇವಂತಿಗೆಯನ್ನು ವರ್ಷಪೂರ್ತಿ ಬೆಳೆಯಬಹುದು, ಸಸಿಯನ್ನು ನಾಟಿ ಮಾಡಿದ ತಕ್ಷಣ ಬೆಳಕನ್ನು ಒದಗಿಸುವುದು, ಇದಕ್ಕಾಗಿ 60 ವ್ಯಾಟ್ ಬಲ್ಬುಗಳನ್ನು 4 ಅಡಿ ಅಂತರದಲ್ಲಿ ಮತ್ತು ಗಿಡದಿಂದ 2 ಅಡಿ ಎತ್ತರದಲ್ಲಿ ಅಳವಡಿಸಿ ದಿನಕ್ಕೆ 4 ಘಂಟೆಗಳ ಕಾಲ 4 ರಿಂದ 6 ವಾರಗಳವರೆಗೆ ಹೆಚ್ಚು ಬೆಳಕನ್ನು ನೀಡುವುದು.
ಇದಾದ ನಂತರ ಗಿಡಗಳಲ್ಲಿ ಮೊಗ್ಗನ್ನು ಪಡೆಯಲು ಕೃತಕವಾಗಿ ಕತ್ತಲೆಯನ್ನು ಸೃಷ್ಟಿಸುವುದು ಇದಕ್ಕಾಗಿ ಗಿಡಗಳ ಮೇಲೆ 150 ಗೇಜ್ ಗಾತ್ರದ ಕಪ್ಪು ಪ್ಲಾಸ್ಟಿಕ್ ಹಾಳೆಯನ್ನು ಸಂಜೆ 4 ಅಥವಾ 5 ಘಂಟೆಯಿAದ ಬೆಳಿಗ್ಗೆ 7 ಘಂಟೆಯವರೆಗೂ ಹೊದಿಸುವುದು (4 ರಿಂದ 6 ವಾರಗಳವರೆಗೆ). ಇದರಿಂದ ಮೊಗ್ಗುಗಳು ದಪ್ಪವಾಗಿ ಹೂ ಅರಳಲು ಪ್ರಾರಂಭವಾಗುತ್ತದೆ.
* ಮೊಗ್ಗು ಚಿವುಟುವುದು:
ಉತ್ಕೃಷ್ಟ ಗುಣಮಟ್ಟದ (Standard type) ಹೂವು ಪಡೆಯಲು ಮುಖ್ಯ ಮೊಗ್ಗನ್ನು ಹೊರತುಪಡಿಸಿ ಪಕ್ಕದಲ್ಲಿ ಬರುವ ಮೊಗ್ಗುಗಳನ್ನು ಬಟಾಣಿ ಗಾತ್ರ ಇರುವಾಗಲೇ ಚಿವುಟಬೇಕು. ಕಡಿಮೆ ಗುಣಮಟ್ಟದ (Spray type) ಹೆಚ್ಚು ಹೂವು ಪಡೆಯಲು ಮುಖ್ಯ ಮೊಗ್ಗನ್ನು ಚಿವುಟಬೇಕು ಮತ್ತು ಪಕ್ಕದಲ್ಲಿ ಬರುವ ಮೊಗ್ಗುಗಳನ್ನು ಬೆಳೆಯಲು ಬಿಡಬೇಕು.
Share your comments