1. ತೋಟಗಾರಿಕೆ

ದಾಳಿಂಬೆ ಬೆಳೆಯಲ್ಲಿ ದುಂಡಾಣು ಅಂಗಮಾರಿ ರೋಗದ ನಿಯಂತ್ರಣ

Kalmesh T
Kalmesh T
Control of Roundworm Disease in Pomegranate Crop

ದಾಳಿಂಬೆ ಸಸಿಯ ಎಲೆಯ ಮೇಲೆ ನೀರಿನಿಂದ ಕೂಡಿದ ಚುಕ್ಕೆಗಳು ಕಾಣಿಸುತ್ತವೆ.  ನಂತರ ಈ ಚುಕ್ಕೆಗಳು ಕಪ್ಪು ಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತವೆ.  ರೋಗ ಉಲ್ಬಣಗೊಂಡಾಗ, ರೋಗಪೀಡಿತ ಎಲೆಗಳು ನೆಲಕ್ಕೆ ಉದುರುತ್ತವೆ.

ಕಾಯಿ (ಹಣ್ಣು) ಗಳ ಮೇಲೆ ಚುಕ್ಕೆಗಳು ಎಣ್ಣೆಯಂತಿದ್ದು ಉಬ್ಬಿಕೊಂಡಿರುತ್ತವೆ. ನಂತರ ಆ ಜಾಗದಲ್ಲಿ ಕಾಯಿಗಳು ಸೀಳಲು ಪ್ರಾರಂಭವಾಗುವವು.

ಇಬ್ಬನಿ/ಸಿಂಪರಣೆ/ಮಳೆಯಿಂದ ದುಂಡಾಣುವಿನಬಿಳಿ ದ್ರವ ಹೊರಗೆ ಬರುವುದರಿಂದ ಕೈಗಳಿಗೆ ಅಂಟಿಸುವಂತೆ ಭಾವಿಸುತ್ತದೆ ಮತ್ತು ಒಣಗಿದ ನಂತರ ಅಂಗಮಾರಿ ರೋಗದ ಮಚ್ಚೆಗಳ ಮೇಲ್ಮೈಯಲ್ಲಿ ಬಿಳಿ ಹೊಳಪಿನ ಎನ್ಕಸ್ಡೇಶನ್ ಅನ್ನು ನೋಡಬಹುದು.  

ಈ ರೋಗವು ಕಾಂಡದ ಮೇಲೆ ಬಂದಾಗ ಕುಡಿಗಳು ಮೇಲಿನಿಂದ ಒಣಗಿ ಕಪ್ಪು ಮಚ್ಚೆಗಳು ಕಾಣುತ್ತವೆ.  ರೋಗದ ತೀವ್ರತೆ ಹೆಚ್ಚಾದಂತೆ ಕಾಂಡದ ಭಾಗವು ಸೀಳುವುದಲ್ಲದೆ ಇದರಿಂದ ರೋಗಪೀಡಿತ ಕಾಂಡ ಮುರಿದು ಬೀಳುತ್ತದೆ.

ಹತೋಟಿ ಕ್ರಮಗಳು:

ದುಂಡಾಣು ಅಂಗಮಾರಿ ರೋಗದ ತೀವ್ರತೆಯು ಹೆಚ್ಚಿದ ತೋಟಗಳಲ್ಲಿ ಅಥವಾ ರೋಗಪೀಡಿತ ಪ್ರದೇಶಗಳಲ್ಲಿರುವ ತೋಟಗಳಲ್ಲಿಕಡ್ಡಾಯವಾಗಿ ವೇಳಾಪಟ್ಟಿಯನ್ನು ಪಾಲಿಸಬೇಕು.

ದಾಳಿಂಬೆ ಬೆಳೆಯನ್ನು ಮಿರಿಗ್ ಬಹಾರ್ ನಲ್ಲಿ (ಮಳೆಗಾಲದಲ್ಲಿ) ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ರೋಗದ ತೀವ್ರತೆ ಅಧಿಕವಾಗಿದ್ದಲ್ಲಿ ದಾಳಿಂಬೆ ಬೆಳೆಯನ್ನು 3 ರಿಂದ 4 ವರ್ಷಗಳ ಕಾಲ ಹಸ್ತಬಹಾರ್ ನಲ್ಲಿ ತೆಗೆದುಕೊಳ್ಳುವುದು ಅವಶ್ಯ.

ದಾಳಿಂಬೆ ತೋಟವನ್ನು ಸ್ವಚ್ಚವಾಗಿಡುವುದು, ರೋಗ ಪೀಡಿತ ಎಲೆ, ಕಾಂಡ ಮತ್ತು ಕಾಯಿಗಳನ್ನು ಕಿತ್ತು ಸುಡಬೇಕು.

ಭೂಮಿಯ ಮೇಲೆ ಬ್ಲೀಚಿಂಗ್ ಪೌಡರ್ (ಚಿ.i 33% ಸಿ. ಎಲ್.) ಅನ್ನು 3 ರಿಂದ 4 (ಪ್ರತಿ ಹೆಕ್ಟೇರಿಗೆ 25 ಕಿ.ಗ್ರಾಂ ಪ್ರತಿ 1000 ಲೀಟರ್ ನೀರಿನಲ್ಲಿ ಬೆರೆಸಿ) ತಿಂಗಳಿಗೊಮ್ಮೆ ತೊಯ್ಯಿಸಬೇಕು.

ಚಾಟನಿ ಮಾಡುವಾಗ ಚಾಟನಿಯ ಕತ್ತರಿಯನ್ನು (2.5%) ಸೋಡಿಯಂ ಹೈಪೋಕ್ಲೋರೈಡ್ ದ್ರಾವಣದಲ್ಲಿ ಅದ್ದಿ ಚಾಟನಿ ಮಾಡುವುದರಿಂದ ರೋಗ ಹರಡುವಿಕೆಯನ್ನು ತಡೆಗಟ್ಟಬಹುದು ಮತ್ತ ತೋಟಗಳನ್ನು ಕಳೆಗಳಿಂದ ಮುಕ್ತವಾಗಿಡಬೇಕು.

Published On: 16 April 2023, 04:17 PM English Summary: Control of Roundworm Disease in Pomegranate Crop

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.