1. ತೋಟಗಾರಿಕೆ

ತೋಟಗಾರಿಕೆ ಇಲಾಖೆಯಿಂದ ಟ್ರ್ಯಾಕ್ಟರ್, ಪಾಲಿಹೌಸ್, ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ

ಹಾಸನ ಜಿಲ್ಲೆಯ ಆಲೂರ ತಾಲೂಕಿನಲ್ಲಿ 2021-22ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಗಳಡಿಯಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳಿಗೆ ಆಗಸ್ಟ್ 8 ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಹಿರಿಯ ಸಹಾಯಕ ನಿರ್ದೇಶಕ ಕೇಶವ ತಿಳಿಸಿದ್ದಾರೆ.

ಕಂದುಬಾಳೆ, ಆಂಗಾಂಶ ಬಾಳೆ, ಅವಕ್ಯಾಡೋ (ಬೆಣ್ಣೆ ಹಣ್ಣು) ಕಾಳು ಮೆಣಸು ಮತ್ತು ಹೈಬ್ರಿಡ್ ತರಕಾರಿ ಬೆಳಗಳ ಪ್ರದೇಶ ವಿಸ್ತರಣೆ, ಕಾಳುಮೆಣಸು ಪುನಶ್ಚೇತನ, ಹಸಿರು ಮನೆ, ಮಿನಿ ಟ್ರ್ಯಾಕ್ಟರ್, ಸಮುದಾಯಕ ಕೃಷಿ ಹೊಂಡ ಹಾಗೂ ರಾಜ್ಯವಲಯ ಯೋಜನೆಗಳಡಿ ಜೇನುಪಟ್ಟಿಗೆ ಖರೀದಿಗೆ ಶೇ. 75 ರಷ್ಟು ಸಹಾಯಧನ ಲಭ್ಯವಿದೆ ಆಸಕ್ತ ರೈತರು ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ.

ಪಾಲಿಹೌಸ್ ನಿರ್ಮಾಣಕ್ಕೆ ಸಹಾಯಧನ ನೀಡಲು ಅರ್ಜಿ ಆಹ್ವಾನ

2021-22ನೇ ಸಾಲಿನ ಚಿಕ್ಕಬಳ್ಳಾಪುರ ತೋಟಗಾರಿಕೆ ಇಲಾಖೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಹಣ್ಣುಗಳು, ತರಕಾರಿ, ಹೂವು ಬೆಳೆಗಳ ಹೊಸತೋಟ ಪ್ರದೇಶ ವಿಸ್ತರಣೆ, ಪುನಸ್ಛೇತನ, ಸಂರಕ್ಷಿತ ಬೇಸಾಯದಡಿ ಪಾಲಿಹೌಸ್, ಹೊದಿಕೆ, ಯಾಂತ್ರೀಕರಣ, ನೀರು ಸಂಗ್ರಹಣ ಘಟಕಗಳಿಗೆ, ಕೋಯ್ಲೋತ್ತರ ನಿರ್ವಹಣೆ ಘಟಕಗಳಾದ ಪ್ಯಾಕ್ ಹೌಸ್, ಇತರೆ ಯೋಜನೆಗಳಡಿಯಲ್ಲಿ ಜೇನು ಕೃಷಿ ಕಾರ್ಯಕ್ರಮದಡಿಯಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಆಗಸ್ಟ್ 15 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿಗಳನ್ನು ತಾಲೂಕಿನ ತೋಟಗಾರಿಕೆ ಕಚೇರಿಗಳಲ್ಲಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಬಾಗೇಪಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ 08150282114 ಗೆ ಸಂಪರ್ಸಿಕಲು ಕೋರಲಾಗಿದೆ.

ಶೇ. 50 ರಷ್ಟು ಸಹಾಯಧನದಲ್ಲಿ ಟ್ರ್ಯಾಕ್ಟ್ರರ್ ಖರೀದಿಗೆ ರೈತರಿಂದ ಅರ್ಜಿ ಆಹ್ವಾನ

ಕೃಷಿಯಲ್ಲಿ ಯಂತ್ರೋಪಕರಣ, ಆಧುನುಕ ಪದ್ಧತಿ ಹೆಚ್ಚಾಗುತ್ತಿದೆ. ಕೃಷಿಯಲ್ಲಿ ಬದಲಾವಣೆ ತರಲು, ಹಾಗೂ ಕೃಷಿ ಚಟುವಟಿಕೆಗಳನ್ನು ಸುಲಭಗೊಳಿಸಲು ಇತ್ತೀಚೆಗೆ ರೈತರು ಕೃಷಿ ಯಂತ್ರೋಪಕರಣಗಳ ಕಡೆ ವಾಲುತ್ತಿರುವದು ಸಂತಸದ ಸಂಗತಿ. ಸರ್ಕಾರವೂ ಸಹ ರೈತರಿಗೆ ಅನುಕೂಲವಾಗಲೆಂದು ಸಬ್ಸಿಡಿಯಲ್ಲಿ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಹಾಯ ಮಾಡುತ್ತಿದೆ.

ರೈತರಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೈಸೂರು ತೋಟಗಾರಿಕೆ ಇಲಾಖೆಯ ವತಿಯಿಂದ 2021-22ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಪ್ರದೇಶ ವಿಸ್ತರಣೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದ್ದು, ರೈತರಿಗೆ ಕಡಿಮೆ ದರದಲ್ಲಿ ಟ್ರ್ಯಾಕ್ಟರ್ ಹಾಗೂ ಜೇನು, ಹೂವು, ಹಣ್ಣು  ಬೆಳೆಗಳ ಪ್ರದೇಶ ವಿಸ್ತರಣೆಗೆ ಸಹಾಯಧನ ನೀಡಲಾಗುತ್ತಿದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಲ್ಲಿ ಬಾಳೆ, ತರಕಾರಿ, ಹೂವಿನ ಬೆಳೆಗಳ ಪ್ರದೇಶ ವಿಸ್ತರಣೆ, ಹಣ್ಣು ಮಾಗಿಸುವ ಘಟಕ, ಜೇನು ಕೃಷಿ, ಹಸಿರುಮನೆ ಘಟಕ, 20 ಎಚ್.ಪಿ ಅಶ್ವಶಕ್ತಿ ಟ್ರ್ಯಾಕ್ಟರ್ ಖರೀದಿ, ಶೀತಲ ಶೈತ್ಯಗಾರ ನಿರ್ಮಾಣಕ್ಕಾಗಿ ಸಹಾಯಧನ ನೀಡಲಾಗುವುದು.

ತೋಟಗಾರಿಕೆ ಯಾಂತ್ರೀಕರಣ ಕಾರ್ಯಕ್ರಮದಡಿ ಸಾಮಾನ್ಯ ವರ್ಗಕ್ಕೆ ಶೇ. 40 ರಷ್ಟು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 50 ರಷ್ಟು ಸಹಾಯಧನ ನೀಡಲಾಗುವುದು. ಆಗಸ್ಟ್ 5 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ನಿರ್ದೇಶಕರು ದೂರವಾಣಿ ಸಂಖ್ಯೆ 0821-2430450, ವರುಣ ಮೊ. 97421 59724, ಜಯಪುರ ಹೋಬಳಿ ಮೊಬೈಲ್ ನಂಬರ್ 9686766291, ಇಲವಾಲ ಹೋಬಳಿ ಮೊಬೈಲ್ ನಂಬರ್  70267 19516, ಕಸಬಾ ಹೋಬಳಿ 99013 87284 ಗೆ ಸಂಪರ್ಕಿಸಬಹುದೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲಿಚ್ಚಿಸುವ ರೈತರು ಸ್ವಂತ ಜಮೀನು ಹೊಂದಿರಬೇಕು. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹೊಂದಿರಬೇಕು. ಗಣಕೀಕರಣ ಬೆಳೆ ದೃಢೀಕರಣ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ಹೊಂದಿರಬೇಕು.

Published On: 27 July 2021, 01:04 PM English Summary: Application invited for subsidy to farmers from Horticulture Department

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.