ಕಲ್ಲುಪ್ಪಿನ ವಿಶೇಷ ಪ್ರಯೋಜನೆಗಳು
ಕಲ್ಲುಪ್ಪನ್ನು ಇಂಗ್ಲೀಷನಲ್ಲಿ ‘Rock salt’, ‘Table salt’ ಅಥವಾ ‘Halite’ ಎಂದು ಕರೆಯುತ್ತಾರೆ. ರಾಸಾಯನಿಕವಾಗಿ ‘ಸೋಡಿಯಂ ಕ್ಲೋರೈಡ್’ ಎಂಬ ಹೆಸರು. ಈ ಉಪ್ಪು ಸಾಮಾನ್ಯವಾಗಿ ದೊಡ್ಡ ದೊಡ್ಡ ನೀರಿನ ಮೂಲಗಳಿಂದ ಅಂದರೆÉ ಸಮುದ್ರದಲ್ಲಿನÀ ನೀರು ಆವಿಯಾಗಿ, ಸೋಡಿಯಂ ಮತ್ತು ಕ್ಲೋರೈಡಗಳೆಂಬ ಅಯಾನುಗಳ ಸಮ್ಮಿಶ್ರಣದಿಂದ ತಯಾರಾಗುತ್ತದೆ. ಕಲ್ಲುಪ್ಪು ಬಿಳಿ ಬಣ್ಣವನ್ನು ಹೊಂದಿದೆ, ಆದರೆ ಕೆಲವು ಕಲ್ಮಶಗಳೊಂದಿಗೆ ಮಿಶ್ರಿತವಾಗಿ ಬೂದು, ಹಳದಿ, ಕೆಂಪು, ಗುಲಾಬಿ ಅಥವಾ ನೇರಳೆ ಬಣ್ಣಗಳ ರೂಪದಲ್ಲಿ ದೊರೆಯುತ್ತದೆ.
ಲವಣಗಳಲ್ಲಿ ಅತ್ತ್ಯುತ್ತಮ ಉಪ್ಪೆಂದರೆ ಕಲ್ಲುಪ್ಪು. ಭಾರತದಲ್ಲಿ ಈ ಉಪ್ಪು ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ. ಇದು ದಪ್ಪನೆಯ ಹರಳಿನ ರೂಪದಲ್ಲಿದ್ದು ಅತಿ ಕಡಿಮೆ ರುಚಿಯನ್ನು ಹೊಂದಿದೆ ಮತ್ತು ರಾಸಾಯನಿಕವಾಗಿ ಇದನ್ನು ಸಂಸ್ಕರಿಸಿಡುವುದಿಲ್ಲ. ಸಾಮಾನ್ಯ ಉಪ್ಪುಗಳ ಪರ್ಯಾಯವಾಗಿ ಕಲ್ಲುಪ್ಪನ್ನು ಬಳಸುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಏಕೆಂದರೆ ಇದರಲ್ಲಿ ಖನಿಜಗಳು ಸಮೃದ್ಧವಾಗಿದ್ದು, ಇತರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ.
ಕಲ್ಲುಪ್ಪಿನ ಬಳಕೆ :
- ಕಲ್ಲುಪ್ಪನ್ನು ಐಸ್ಕ್ರೀಮ್ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಏಕೆಂದರೆ ಇದು ಘನೀಕರಿಸುವ ಬಿಂದುವನ್ನು ((Freezing point)) ಕಡಿಮೆ ಮಾಡಿ ಐಸ್ಕ್ರೀಮನ್ನು ಘನರೂಪಕ್ಕೆ ಬದಲಾವಣೆಯಾಗುವುದನ್ನು ತಡೆಯುತ್ತದೆ.
- ಗಡಸು ನೀರನ್ನು ಮೃದುವಾಗಿಸಲು ಕಲ್ಲುಪ್ಪನ್ನು ಬಳಸುತ್ತಾರೆ. ಕಾರಣ ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ಮ್ಯಾಗ್ನೇಶಿಯಂ ಅಯಾನುಗಳ ಜೊತೆ ಪ್ರತಿಕ್ರಿಯಿಸಿ ಗಡಸು ನೀರನ್ನು ಶುದ್ಧೀಕರಿಸುತ್ತವೆ.
- ಹಾಗೆಯೇ ಕಲ್ಲುಪ್ಪನ್ನು ಮೀನಿನ ಮತ್ತು ಮಾಂಸಗಳ ಜೊತೆ ಮಿಶ್ರಣ ಮಾಡಿ ಬಹಳ ದಿನಗಳ ಕಾಲ ಶೇಖರಿಸಿಡಲು ಉಪಯೋಗಿಸುತ್ತಾರೆ.
- ಪ್ರಾಣಿಗಳ ಪೋಷಣೆಯಲ್ಲೂ ಕೂಡ ಕಲ್ಲುಪ್ಪು ಸಹಾಯಕಾರಿ. ಜಾನುವಾರುಗಳು ಸೇವಿಸುವ ಸಸ್ಯಗಳಲ್ಲಿ ಸೋಡಿಯಂನ ಪ್ರಮಾಣವು ಅತ್ಯಂತ ಕಡಿಮೆಯಲ್ಲಿದ್ದು ಸೋಡಿಯಂನ ಕೊರತೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಪ್ರತ್ಯೇಕವಾಗಿ ಅಥವಾ ಮಾತ್ರೆಗಳಲ್ಲಿ ಈ ಕಲ್ಲುಪ್ಪನ್ನು ಸಂಯೋಜಿಸಿ ಪ್ರಾಣಿಗಳಿಗೆ ನೀಡಲಾಗುತ್ತದೆ.
- ಸೇವನೆಯನ್ನು ಹೊರತುಪಡಿಸಿ, ಚಳಿಗಾಲದಲ್ಲಿ ರಸ್ತೆಗಳಲ್ಲಿಯ ಹಿಮವನ್ನು ಹಿಡಿದಿಟ್ಟುಕೊಳ್ಳಲು ಕಲ್ಲುಪ್ಪಿನ ಚೀಲಗಳನ್ನು ಬದಿಗಳಲ್ಲಿ ಸಂಗ್ರಹಿಸಿಡಲಾಗುತ್ತದೆ.
ಕಲ್ಲುಪ್ಪಿನ ಆರೋಗ್ಯಕಾರಿ ಲಾಭಗಳು :
- ಶ್ವಾಸಕೋಶದ ತೊಂದರೆಗಳನ್ನು ತಡೆಗಟ್ಟುತ್ತದೆ - ಸೈನಸ್, ಮೈಗ್ರೇನ್ ಮತ್ತು ಇತರೆ ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ. ಪ್ರತಿನಿತ್ಯ ಬೆಳಿಗ್ಗೆ ಒಂದು ಚಮಚ ಕಲ್ಲುಪ್ಪು ಕರಗಿಸಿದ ನೀರಿನಿಂದ ಬಾಯಿಯನ್ನು ಮುಕ್ಕಳಿಸುವುದರಿಂದ ಒಣಕೆಮ್ಮು, ಗಂಟಲು ನೋವು, ಊತ ಹಾಗೂ ಟಾನ್ಸಿಲ್ಗಳಂತಹ ತೊಂದರೆಗಳನ್ನು ನಿವಾರಣೆ ಮಾಡಬಹುದು.
- ಜೀರ್ಣಕ್ರಿಯೆಗೆ ಸಂಭಂಧಿಸಿದ ತೊಂದರೆಗಳನ್ನು ದೂರ ಮಾಡುತ್ತದೆ – ಎದೆ ಉರಿ ಮತ್ತು ಆಮ್ಲತೆಯನ್ನು (Acidity) ಕಡಿಮೆಗೊಳಿಸಿ ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದ ಹಸಿವು ಕೂಡ ಹೆಚ್ಚುತ್ತದೆ.
- ಜಂತು ಹುಳುಗಳ ನಿವಾರಣೆ - ಸರಿಯಾದ ಆಹಾರ ಪದ್ಧತಿಯಿಲ್ಲದೆ ಮತ್ತು ಅಜೀರ್ಣ ಕ್ರಿಯೆಯಿಂದ ಹೊಟ್ಟೆಯಲ್ಲಿ ಬೆಳೆದ ಜಂತು ಹುಳುಗಳನ್ನು ನಿವಾರಣೆ ಮಾಡಲು ಕಲ್ಲುಪ್ಪು ಸಹಾಯ ಮಾಡುತ್ತದೆ.
- ಒತ್ತಡವನ್ನು ಕಡಿಮೆ ಮಾಡುತ್ತದೆ - ಪ್ರತಿನಿತ್ಯ ಕಲ್ಲುಪ್ಪನ್ನು ನೀರಿನಲ್ಲಿ ಕರಗಿಸಿ ಕುಡಿಯವುದರಿಂದ ದೇಹದ ಮತ್ತು ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಬಹುದು.
- ದೇಹದ ತೂಕವನ್ನು ನಿಯಂತ್ರಿಸುತ್ತದೆ – ದಿನನಿತ್ಯ ಕಲ್ಲುಪ್ಪನ್ನು ಸೇವಿಸುವುದರಿಂದ, ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಿ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಕ್ಕೆ ಮೂಲ ಕಾರಣ ಇದರಲ್ಲಿರುವ ಖನಿಜಾಂಶಗಳು. ಇವುಗಳು ಇನ್ಸುಲಿನ್ ಎಂಬ ಹಾರ್ಮೋನನ ಸ್ರವಿಕೆಯನ್ನು ಪುನಃ ಸಕ್ರಿಯಗೊಳಿಸಿ ರಕ್ತದಲ್ಲಿ ಸಕ್ಕರೆ ಅಂಶವನ್ನು ಸಮತೋಲನದಲ್ಲಿಡುತ್ತವೆ. ಇದರಿಂದ ಹೆಚ್ಚಿನ ಹಸಿವಾಗುವಿಕೆ ಮತ್ತು ಅಧಿಕ ಆಹಾರ ಸೇವನೆಯನ್ನು ನಿಯಂತ್ರಣದಲ್ಲಿಡಬಹುದು ಹಾಗೂ ದೇಹದ ತೂಕವನ್ನು ಕಡಿಮೆ ಮಾಡಬಹುದು.
ಎಚ್ಚರಿಕೆ :
- ಕಲ್ಲುಪ್ಪನ್ನು ದಿನನಿತ್ಯ 6 ಗ್ರಾಂ ಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು ಏಕೆಂದರೆ ಇದರಲ್ಲಿ ಹೆಚ್ಚಿನ ಸೋಡಿಯಂ ಅಂಶವಿದೆ. ಹೆಚ್ಚು ಸೋಡಿಯಂನ ಒದಗುವಿಕೆ ನಮ್ಮ ದೇಹಕ್ಕೆ ಮಾರಕವಾಗುವುದು. ಅದರಲ್ಲಿಯು ಅಧಿಕ ರಕ್ತದ ಒತ್ತಡವಿರುವ (High Blood Pressure) ವ್ಯಕ್ತಿಯು ಕಲ್ಲುಪ್ಪನ್ನು ಸೇವಿಸಲೇಬಾರದು ಇದರಿಂದ ಅವರ ಜೀವಕ್ಕೆ ಹಾನಿ ಕೂಡ ಸಂಭವಿಸಬಹುದು. ಆದ್ದರಿಂದ ಕಲ್ಲುಪ್ಪನ್ನು ಮಸಾಲೆ ಪದಾರ್ಥ ಮತ್ತು ಇತರೆ ಗಿಡಮೂಲಿಕೆಗಳೊಂದಿಗೆ ಉಪಯೋಗಿಸುವುದು ಸೂಕ್ತ.
Share your comments