ಆರೋಗ್ಯವಾಗಿರಲು ನೀರು, ಆಹಾರ ಎಷ್ಟು ಮುಖ್ಯವೋ ಅದೇ ರೀತಿ ಹಣ್ಣುಗಳು ನೈಸರ್ಗಿಕವಾಗಿ ಬಂದ ಅಪೂರ್ವ ಕೊಡುಗೆ ಪರಂಗಿ ಒಂದು ವಿಶಿಷ್ಟವಾದ ಹಣ್ಣಾಗಿದೆ. ಪರಂಗಿ ಹಣ್ಣಿನ ವಿಶೇಷತೆಯ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ನಾವು ತಯಾರುಮಾಡುವ ಹಣ್ಣುಗಳ ಸಲಾಡ್ ಗಳಲ್ಲಿ ಪರಂಗಿ ಹಣ್ಣು ಇರಲೇಬೇಕು. ಆಗಲೇ ಅದಕ್ಕೊಂದು ಕಳೆ. ಅದೇ ರೀತಿ ನಮ್ಮ ಮುಖದ ಕಳೆ ಅಥವಾ ಹೊಳಪು ಹೆಚ್ಚಾಗಬೇಕು ಎಂದರೆ ಅದರಲ್ಲಿ ಪರಂಗಿ ಹಣ್ಣಿನ ಪಾತ್ರ ಇರಲೇಬೇಕು
ಮನೆಯಲ್ಲಿ ತಯಾರು ಮಾಡುವ ಫೇಸ್ ಪ್ಯಾಕ್ ಅಥವಾ ಫೇಸ್ ಮಾಸ್ಕ್ ಗಳಲ್ಲಿ ಅತ್ಯಂತ ಪ್ರಮುಖವಾಗಿ ಬಳಕೆ ಮಾಡುವ ಹಣ್ಣುಗಳ ಫೇಸ್ ಪ್ಯಾಕ್ ವಿಚಾರ ಬಂದರೆ ಅದರಲ್ಲಿ ಪರಂಗಿ ಹೆಣ್ಣಿಗೆ ಮೊದಲನೆಯ ಸ್ಥಾನ ಕೊಡುತ್ತಾರೆ. ಪರಂಗಿಹಣ್ಣಿನ ಇಷ್ಟೊಂದು ಒಳ್ಳೆಯ ಗುಣಗಳಿಗೆ ಕಾರಣ ಏನಿರಬಹುದು ಮತ್ತು ನಮಗೆ ಪರಂಗಿಹಣ್ಣಿನ ಬಳಕೆಯಿಂದ ಏನೆಲ್ಲಾ ಲಾಭಗಳಿವೆ ಎಂಬುದನ್ನು ಈಗ ತಿಳಿದುಕೊಳ್ಳೋಣ...
ಪರಂಗಿ ಹಣ್ಣನ್ನು ವೈಜ್ಞಾನಿಕವಾಗಿ ಕ್ಯಾರಿಕಾ ಪಪಾಯ ಎಂದು ಕರೆಯುತ್ತಾರೆ. ಪರಂಗಿ ಮಧ್ಯ ಅಮೇರಿಕಾದಲ್ಲಿ ಹುಟ್ಟಿದ ಹಣ್ಣಿನಜಾತಿಗೆ ಸೇರಿದೆ. ಇದರಲ್ಲಿ ವಿಟಮಿನ್ ‘ಎ’ ವಿಟಮಿನ್ ‘ಸಿ’ ಕ್ಯಾಲ್ಸಿಯಂ, ಪ್ರೋಟಿನ್ ಮತ್ತು ಪೊಟ್ಯಾಸಿಯಂ ಹೇರಳವಾಗಿದೆ. ವರ್ಷ ಪೂರ್ತಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಪಪಾಯ ಉಳಿದ ಹಣ್ಣುಗಳಿಗೆ ಹೋಲಿಸಿದರೆ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು. ಇದು ಹದೃಯ ಕಾಯಿಲೆಯಿಂದ ಹಿಡಿದು ಕರುಳಿನ ಆರೋಗ್ಯದವರೆಗೆ ಹಲವು ರೀತಿಯಲ್ಲಿ ಆರೋಗ್ಯವನ್ನು ಕಾಪಾಡುತ್ತದೆ. ಪರಂಗಿ ಹಣ್ಣು ಮಾತ್ರವಲ್ಲದೆ, ಎಲೆ ಕಾಯಿ ಮತ್ತು ಹೂವುಗಳನ್ನು ಸಹ ವಿವಿಧ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಪುರಾತನ ಕಾಲದಿಂದಲೂ ಈ ಹಣ್ಣನ್ನು ಯಥೇಚ್ಚವಾಗಿ ನಾಟಿ ಔಷಧಿಯಲ್ಲಿ ಬಳಸುತ್ತಿದ್ದಾರೆ.
ಔಷಧಿಯ ಗುಣಗಳು
- ಪರಂಗಿ ಹಣ್ಣು ಅಜೀರ್ಣದ ತೊಂದರೆಯನ್ನು ನಿವಾರಿಸಲು ಸಹಕಾರಿ.
- ಇದರಲ್ಲಿ ಕ್ಯಾಲೋರಿಗಳು ಕಡಿಮೆ ಮತ್ತು ಪೋಷಕಾಂಶಗಳು ಹೆಚ್ಚಿಸುವುದರಿಂದ ತೂಕ ಇಳಸಿಕೊಳ್ಳಲು ಒಳ್ಳೆಯ ಆಹಾರ.
- ಪರಂಗಿ ನೋವನ್ನು ಉಪಶಮನ ಮಾಡುವ ಗುಣಗಳ್ಳಿದ್ದು, ಆರ್ಥಟಿಸ್, ಒಸ್ಟೆಒಪೊರೊಸಿಸ್ ಇನ್ನಾವುದೇ ಬಗೆಯ ನೋವಿನಿಂದ ಶೀಘ್ರವಾಗಿ ಗುಣವಾಗಲು ಸಹಾಯ ಮಾಡುತ್ತದೆ.
- ಪರಂಗಿ ಹಣ್ಣನ್ನು ಹೆಚ್ಚು ಸೇವಿಸುವುದರಿಂದ ನೆಗಡಿ ಮತ್ತು ಕೆಮ್ಮು ನಿಂದದೂರ ಉಳಿಯಬಹುದುಇದರಲ್ಲಿ ವಿಟಮಿನ್ ‘ಸಿ’ ಹಚ್ಚಾಗಿರುವುದರಿಂದರೋಗ ನಿರೋಧಕ ಶಕ್ತಿ ಹಚ್ಚಾಗುತ್ತದೆ.
- ಈ ಹಣ್ಣನ್ನು ಸೇವಿಸುವುದರಿಂದ ಮುಟ್ಟಿನ ನೋವು ಕಡಿಮೆಯಾಗಬಹುದು ಹಾಗೂ ಮುಟ್ಟಿನ ಸಮಸ್ಯೆಯಿಂದ ದೂರವಿರಬಹುದು.
- ಗ್ಯಾಸ್ಟಿಕ್ ಸಮಸ್ಯೆಗೆ ಪರಂಗಿ ಹಣ್ಣು ಸಿದ್ದೌಷಧವಾಗಿದ್ದು, ಕರುಳು ಹಾಗೂ ಜೀರ್ಣಂಗಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಯಾದರೂ ನಿವಾರಿಸಬಲ್ಲುದು.
- ಇದರ ಎಲೆಯ ರಸವನ್ನು ಸೇವಿಸುವುದರಿಂದಡೆಂಗ್ಯೂ ಎಂಬ ಮಾರಾಣಂತಿಕ ರೋಗವನ್ನು ರಕ್ತದ ಕಿರುತಟ್ಟೆಗಳ ಪ್ರಮಾಣ ಹೆಚ್ಚಿಸುವುದರಿಂದ ತಡೆಗಟ್ಟಬಹುದು. ಪರಂಗಿ ಹಣ್ಣಿನ ಬೀಜದಲ್ಲಿ ಆಂಟಿ ಬ್ಯಾಕ್ಟಿರಿಯಲ್ ಗುಣವಿರುವುದರಿಂದ ಮೂತ್ರ ಪಿಂಡ ವೈಫಲ್ಯಜಠರ ಸಮಸ್ಯೆಯವನ್ನು ನಿವಾರಿಸುತ್ತದೆ.
- ಇದರಲ್ಲಿ ವಿಟಮಿನ್ ‘ಸಿ’ ಮತ್ತು ವಿಟಮಿನ್ ‘ಇ’ ಹಾಗೂ ಆಂಟಿಆಕ್ಸಿಡೆಂಟ್ ಅಂಶ ಇರುವುದರಿಂದ ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ಮುಖದ ಹಾಗೂ ದೇಹಕ್ಕೆ ಬರುವ ವಯಸ್ಸಾದ ಚಿಹ್ನೆಗಳು ದೂರವಾಗಿ ವಯಸ್ಕರಂತೆ ಕಾಣಬಹುದು.
ಸೌಂದರ್ಯ ವೃದ್ದಿಗೆ ಸಹಕಾರಿ ಪರಂಗಿ
- ಪಪಾಯದಲ್ಲಿ ನಾರಿನಂಶ ಹೆಚ್ಚಿರುವುದರಿಂದ ಚರ್ಮದಕಾಂತಿಯನ್ನು ವರ್ಧಿಸುತ್ತದೆ. ಇದರಲ್ಲಿ ಪೆಪೆಸ್ಕಿಣ್ವ ಇರುದರಿಂದ ಸತ್ತ ಚರ್ಮದ ಜೇವಕೋಶಗಳನ್ನು ಮತ್ತು ನಿಷ್ಕ್ರೀಯ ಪ್ರೋಟಿನ್ತೆಗೆದುಹಾಕಲು ಸಹಕಾರಿ.
- ಪರಂಗಿ ಹಣ್ಣನ್ನು ಕುಟ್ಟಿಅದರ ಮಿಶ್ರಣವನ್ನು ಪ್ರತಿನಿತ್ಯ ಮುಖಕ್ಕೆ ಲೇಪಿಸುವುದರಿಂದ ಮುಖದಕಾಂತಿ ಹಚ್ಚಾಗುತ್ತದೆ.
- ಪರಂಗಿ ಹಣ್ಣಿನ ತಿರುಳಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಇದನ್ನು ಫೇಸ್ ಪ್ಯಾಕ್ನಂತೆ ಮುಖಕ್ಕೆ ಹಚ್ಚಿ 15 ನಿಮಿಷ ಬಟ್ಟು ನಂತರ ಮುಖ ತೊಳೆಯುದರಿಂದ ಮುಖದ ಚರ್ಮ ಮೃದುವಾಗುತ್ತದೆ.
- ಮೊಸರು ಹಾಗೂ ಪರಂಗಿ ಹಣ್ಣನ್ನು ಚೆನ್ನಾಗಿ ಮಿಶ್ರಣ ಮಾಡಿತಲೆಕೂದಲಿನ ಬುಡಕ್ಕೆ ಹಚ್ಚುವುದರಿಂದತಲೆ ಹೂಟ್ಟು ನಿವಾರಣೆಯಾಗುತ್ತದೆ.
- ಕಚ್ಚಾ ಪಪಾಯವನ್ನು ನುಣ್ಣಗೆಕುಟ್ಟಿ ಮುಖಕ್ಕೆ ಹಚ್ಚಿ ಅರ್ಧಗಂಟೆ ನಿಮ್ಮಚರ್ಮದ ಮೇಲೆ ಅನೂತ್ಯ ಕಲೆಗಳು ಮತ್ತು ಮೊಡವೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಮುಖದ ಜೊತೆಗೆ ನೋಯುತ್ತಿರುವ ಮತ್ತು ಬಿರುಕು ಬಿಟ್ಟ ಹಿಮ್ಮಡಿಯನ್ನು ಚಿಕಿತ್ಸೆಗೆ ಬಳಸಬಹುದು.
- ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಧ್ಯಾಯನದ ಪ್ರಕಾರ ಕನಿಷ್ಠ ವಾರಕ್ಕೆ 3 ಬಾರಿ ಹಣ್ಣನ್ನು ತಿನ್ನುವುದರಿಂದ ಕೂದಲು ತೆಳುವಾಗುವುದು ಕಡಿಮೆಯಾಗುತ್ತದೆ.
- ಕೂದಲನ್ನು ಮೃದು ಮತ್ತು ಸುಗಮ ಮಾಡುವ ಖನಿಜಗಳು. ಜೀವಸತ್ವಗಳು ಮತ್ತು ಕಿಣ್ವಗಳು ಇರುವುದರಿಂದ ನೈಸರ್ಗಿಕ ಕಂಡಿಷನರ್ ಹಾಗೆ ವರ್ತಿಸುತ್ತದೆ.
ಲೇಖನ: ಡಾ. ಹೀನಾ, ಎಮ್.ಎಸ್. ಮತ್ತು ಡಾ.ಆರ್. ಬಿ. ನೆಗಳೂರ, ವಿಷಯತಜ್ಞರು, ಕೃಷಿ ವಿಜ್ಞಾನ ಕೇಂದ್ರ, ಇಂಡಿ
Share your comments