ಕ್ಯಾರೆಟ್ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲಿ ಕೆಂಪಾದ ಕ್ಯಾರೇಟ್ ಕಂಡರೆ ಸಾಕು, ತಿಂದು ರುಚಿ ನೋಡಬೇಕೆನ್ನಿಸುತ್ತದೆ. ನೀವೂ ಕೂಡ ಕ್ಯಾರೆಟ್ ತಿನ್ನುತ್ತೀರಾ. ಹೌದು ಎಂದಾದರೆ ನಿಮಗೆ ಒಳ್ಳೆಯ ಸುದ್ದಿ ಇದೆ.
ಪ್ರತಿನಿತ್ಯ ಕ್ಯಾರೆಟ್ ತಿನ್ನುವುದರಿಂದ ಅನೇಕ ರೀತಿಯ ಪೋಷಕಾಂಶಗಳು ಲಭಿಸುತ್ತವೆ ಕ್ಯಾರೆಟ್ ತಿನ್ನುವುದರ ಜೊತೆಗೆ, ನಿಮ್ಮ ದೇಹದಲ್ಲಿ ಅನೇಕ ಕಾಯಿಲೆಗಳನ್ನು ತಪ್ಪಿಸುತ್ತೀರಿ. ಕ್ಯಾರೆಟ್ ತಿನ್ನುವುದರಿಂದನಮಗರಿವಿಲ್ಲದೆ ಯಾವ ಯಾವ ರೋಗಗಳನ್ನು ತಪ್ಪಿಸಬಹುದು ಎಂಬುದರ ಮಾಹಿತಿ ಇಲ್ಲಿದೆ.
ಕ್ಯಾನ್ಸರ್ ಅಪಾಯ ಕಡಿಮೆ:
ಆ್ಯಂಟಿ-ಅಕ್ಸಿಡೆಂಟ್ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವಲ್ಲಿ ಪರಿಣಾಮಕಾರಿಯಾಗಿದೆ. ದೇಹದ ಪ್ರತಿರೋಧವನ್ನು ಹೆಚ್ಚಿಸಲು ಕ್ಯಾರೆಟ್ಗಳಲ್ಲಿ ಹೇರಳವಾಗಿರುವ ಆ್ಯಂಟಿ-ಅಕ್ಸಿಡೆಂಟ್ಗಳು ಬಹಳ ಸಹಾಯಕ. ಅಷ್ಟೇ ಅಲ್ಲದೆ, ಕ್ಯಾರೆಟ್ನಲ್ಲಿರುವ ಬೀಟಾ ಕ್ಯಾರೋಟಿನ್ ಅಂಶವು ಪ್ರಾಸ್ಟೇಟ್ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.
ಕಣ್ಣಿನ ಆರೋಗ್ಯಕ್ಕೆ ಉತ್ತಮ:
ಗಜ್ಜರಿಯಲ್ಲಿ ವಿಟಮಿನ್ ಎ ಸಮೃದ್ಧವಾಗಿರುವದರಿಂದ ದೃಷ್ಟಿ ಸುಧಾರಣೆ ಮತ್ತು ರಾತ್ರಿ ಕುರುಡುತನದ ಪರಿಸ್ಥಿತಿಗಳನ್ನು ತಪ್ಪಿಸಲು ಸಹಕಾರಿಯಾಗಿದೆ. ಕಣ್ಣುಗಳು ದೀರ್ಘಕಾಲ ಆರೋಗ್ಯದಿಂದಿರುತ್ತವೆ.
ದೇಹದ ಪ್ರತಿರಕ್ಷಣಾ ಸಾಮಥ್ರ್ಯ ಹೆಚ್ಚಿಸಲು:
ಗಜ್ಜರಿಯು ಹಲವಾರು ಪ್ರತಿ ರಕ್ಷಣಾ ಸಾಮಥ್ರ್ಯವನ್ನು ಹೊಂದಿರುತ್ತದೆ. ಇದು ವಿಟಮಿನ್ ಸಿ ಯ ಅಧಿಕ ಮೂಲವಾಗಿದ್ದು ಇದು ಬಿಳಿ ರಕ್ತ ಕಣಗಳ ಚಟುವಟಿಕೆಯನ್ನು ಉತ್ತೇಜಿಸುತ್ತದೆ ಮತ್ತು ಮಾನವ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ರಕ್ತದೊತ್ತಡ ನಿಯಂತ್ರಣ:
ಗಜ್ಜರಿಯಲ್ಲಿ ಪೋಟ್ಯಾಸಿಯಂ ಜಾಸ್ತಿ ಇರುತ್ತದೆ. ಹಾಗಾಗಿ ವಾಸ್ಕೋಡೀಲೇಟರ್, ರಕ್ತನಾಳಗಳು ಮತ್ತು ಅಪಧಮನಿಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಕ್ಯಾರೆಟ್ನಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡ ಹೆಚ್ಚಾಗುವುದನ್ನು ಮತ್ತು ಕಡಿಮೆಯಾಗುವುದನ್ನು ನಿಯಂತ್ರಿಸುತ್ತದೆ. ಅದಕ್ಕಾಗಿಯೇ ಕ್ಯಾರೆಟ್ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ.
ಲೇಖಕರು: ಶಗುಪ್ತಾ ಅ ಶೇಖ
Share your comments