ಅನಾನಸ್ ನಂಬಲಾಗದಷ್ಟು ರುಚಿಕರವಾದ ಮತ್ತು ಆರೋಗ್ಯಕರ ಹಣ್ಣು. ಅನಾನಸ್ ಕೇವಲ ಸಕ್ಕರೆಭರಿತ ಹಣ್ಣು ಅಲ್ಲ, ಬದಲಿಗೆ ಹಲವಾರು ಪೋಷಕಾಂಶಗಳನ್ನೂ, ಫೈಟೋ ನ್ಯೂಟ್ರಿಯೆಂಟ್ ಗಳನ್ನೂ ಹೊಂದಿರುವ ಫಲವಾಗಿದ್ದು ಇದರ ಸೇವನೆಯಿಂದ ಫಲವತ್ತತೆ ಹೆಚ್ಚುವುದು, ಉರಿಯೂತ ನಿವಾರಣೆಯಾಗುವುದು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆ ತಗ್ಗುವುದು. ಬನ್ನಿ ಹಣ್ಣಿನ ಇನ್ನಷ್ಟು ಆರೋಗ್ಯಕಾರಿ ಪ್ರಯೋಜನಗಳು ಏನು ಎಂಬುದನ್ನು ನೋಡೋಣ..
ಅನಾನಸ್ ಹಣ್ಣಿನಲ್ಲಿ ಕ್ಯಾಲೋರಿಗಳು ಕಡಿಮೆ ಇದ್ದರೂ ಖನಿಜಾಂಶಗಳು ಮತ್ತು ವಿಟಾಮಿನ್ಗಳು ಹೇರಳವಾಗಿರುತ್ತವೆ. ಅನಾನಸ್ ಮತ್ತು ಅದರ ಸಂಯುಕ್ತಗಳು ಜೀರ್ಣಕ್ರಿಯೆಗೆ ಸಹಾಯ ಮಾಡುವದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವದು.
ವಿಟಮಿನ್ ಸಿ ಹೊಂದಿದೆ:
ಅನಾನಸ್ ವಿವಿಧ ರೀತಿಯ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತದೆ. ಅವುಗಳಲ್ಲಿ ವಿಟಮಿನ್ ಸಿ ಮತ್ತು ಮ್ಯಾಂಗನಿಸ್ ಸಮೃದ್ಧವಾಗಿದೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಆಹಾರದಿಂದ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮ್ಯಾಂಗನಿಸ್ ನೈಸರ್ಗಿಕವಾಗಿ ಕಂಡುಬರುವ ಖನಿಜವಾಗಿದ್ದು ಅದು ಬೆಳವಣಿಗೆಗೆ ಸಹಾಯ ಮಾಡುತ್ತದೆ, ಆರೋಗ್ಯಕರ ಚಯಾಪಚಯವನ್ನು ನಿರ್ವಹಿಸುತ್ತದೆ.
ಮಧಮೇಹ ನಿಯಂತ್ರಣ:
ಅನಾನಸ್ ನಲ್ಲಿ ಫ್ಲೇವನಾಯಡುಗಳು ಮತ್ತು ಫೀನಾಲಿಕ್ ಆಮ್ಲಗಳು ಇದೆ. ರೋಗ ನಿರೋಧಕ ಹೊಂದಿರುತ್ತದೆ..ಇದು ಆಂಟಿಆಕ್ಸಿಡೆಂಟ್ಗಲಳ ಉತ್ತಮ ಮೂಲವಾಗಿದೆ. ಇದು ದೀರ್ಘಕಾಲದ ಕಾಯಿಲೆಗಳಾದ ಹೃದ್ರೋಗ, ಮಧುಮೇಹ ಮತ್ತು ಕೆಲವು ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅನಾನಸ್ ಹಣ್ಣಿನ ರಸವನ್ನು ಸೇವಿಸುವುದರಿಂದ ಉರಿ ಮೂತ್ರದ ಸಮಸ್ಯೆಯು ಶಮನವಾಗುತ್ತದೆ. ಇದು ಪ್ರೋಟೀನ್ಗಆಳನ್ನು ಒಡೆಯವ ಮೂಲಕ ಜೀರ್ಣಕಾರಿ ಕಿಣ್ವಗಳ ಗುಂಪಾದ ಬ್ರೊಮೆಲೈನ್ ಅನ್ನು ಹೊಂದಿರುತ್ತದೆ. ಇದು ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ.
ಕ್ಯಾನ್ಸರ್ ಅಪಾಯ ಕಡಿಮೆ: ಅನಾನಸ್ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಸಂಯುಕ್ತಗಳನ್ನು ಹೊಂದಿರತ್ತದೆ. ಇವೆರಡು ಕ್ಯಾನ್ಸರ್ಗೆಿ ಸಂಬಂಧಿಸಿವೆ.
ರೋಗ ನಿರೋಧಕ ಶಕ್ತಿ ಹೆಚ್ಚು: ಅನಾನಸ ಜೀವಸತ್ವಗಳು, ಖನಿಜಗಳು ಮತ್ತು ಬ್ರೊಮೆಲೇನ್ ಕಿಣ್ವಗಳನ್ನು ಹೊಂದಿರುತ್ತದೆ. ಒಟ್ಟಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಲೇಖಕರು: ಶಗುಪ್ತಾ ಅ.ಶೇಖ
Share your comments