1. ಆರೋಗ್ಯ ಜೀವನ

ನಿಮಗೆ ಸದಾ ಸುಸ್ತು, ನಿಶ್ಯಕ್ತಿ, ಯಾವುದರಲ್ಲೂ ಆಸಕ್ತಿ ಇಲ್ಲದಂತಾಗಿದೆಯೇ? ಹಾಗಿದ್ದರೆ ತಪ್ಪದೇ ಇದನ್ನು ಓದಿರಿ

Kalmesh T
Kalmesh T
Do you always feel exhausted and tired? If so then do this and be cheerful Images Courtesy : Pexels

Do you always feel exhausted and tired: ನಿಮಗೆ ಯಾವಾಗಲೂ ಸುಸ್ತು ಆಗುವುದು, ನಿಶ್ಯಕ್ತಿಯ ಅನುಭವ ಆಗುವುದು, ಯಾವುದರಲ್ಲೂ ಆಸಕ್ತಿ ಇಲ್ಲದೆ ಇರುವಂತಾಗುತ್ತಿದೆಯೇ? ಹಾಗಿದ್ದರೆ ತಪ್ಪದೇ ಇದನ್ನು ಓದಿರಿ.

ಹೆಚ್ಚಿನ ಮಾಹಿತಿಗೆ ಲೇಖನದ ಕೊನೆಗೆ ವಿಡಿಯೋ ನೋಡಿ...

ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಏರುಪೇರುಗಳು ಆಗುತ್ತಿರುತ್ತವೆ. ಹೀಗೆ ಆರೋಗ್ಯದಲ್ಲಿ ಏರುಪೇರುಗಳು ಉಂಟಾದಾಗ ನಮ್ಮ ದೇಹ ಕೂಡ ಅದಕ್ಕೆ ಪ್ರತಿಯಾಗಿ ಒಂದಷ್ಟು ಲಕ್ಷಣಗಳನ್ನು ತೋರಿಸುತ್ತದೆ. ಇದನ್ನು ಅರ್ಥ ಮಾಡಿಕೊಂಡು ಸೂಕ್ತ ಉಪಚಾರ ಮಾಡಿಕೊಳ್ಳುವ ಮೂಲಕ ದೇಹ ಅಥವಾ ಆರೋಗ್ಯದ ಮೇಲೆ ಉಂಟಾದ ಪರಿಣಾಮವನ್ನು ತಪ್ಪಿಸಬೇಕು.

ಯಾವಾಗಲೂ ಸುಸ್ತು ಆದಂತಹ ಅನುಭವ ಆಗುವುದು, ಸದಾ ನಿಶ್ಯಕ್ತಿಯಿಂದ ದೇಹದ ಬಳಲುವುದು, ಯಾವುದೇ ಕೆಲಸದಲ್ಲೂ  ಆಸಕ್ತಿ ಇಲ್ಲದೆ ಇರುವಂತಾಗುವುದು ಮುಂತಾದವು. ಹೀಗೆ ಸಾಕಷ್ಟು ರೀತಿಯ ಅನಾರೋಗ್ಯದ ಪರಿಣಾಮಗಳನ್ನು ಪ್ರತಿಯೊಬ್ಬರು ಒಂದಿಲ್ಲೊಂದ ಕ್ಷಣ ಅನುಭವಿಸಿಯೇ ತೀರಿರುತ್ತಾರೆ. 

ಇವುಗಳಿಗೆಲ್ಲ ಮುಖ್ಯ ಕಾರಣವೆಂದರೆ ನೀವು ದೈಹಿಕ ಹಾಗೂ ಮಾನಸಿಕವಾಗಿ ಅನಾರೋಗ್ಯದಿಂದ ಕೂಡಿರುವಿರಿ ಎಂದು ಅರ್ಥ. ಹಾಗಿದ್ದರೆ ಹೀಗೆ ಆಗುವುದಕ್ಕೆ ಮುಖ್ಯ ಕಾರಣವೇನು? ಇದನ್ನ ಹೋಗಲಾಡಿಸಲು ನಾವು ಏನು ಮಾಡಬೇಕು? ಈ ಎಲ್ಲ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ. 

ಸದಾ ಆಯಾಸದಿಂದ ಇರುವುದಕ್ಕೆ ಕಾರಣವೇನು?

ದೇಹದಲ್ಲಿ ಸದಾ ಆಯಾಸದ ಅನುಭವ ಆಗುವುದು. ಎಷ್ಟೊ ಜನರಿಗೆ ಸದಾ ದೈಹಿಕ ಅಥವಾ ಮಾನಸಿಕ ಬಳಲಿಕೆಯ ಅನುಭವವಾಗುತ್ತದೆ. ಇದಕ್ಕೆ ಕಾರಣ ಪೌಷ್ಠಿಕಾಂಶಗಳ ಕೊರತೆ (Vitamin Deficiency), ಹಾರ್ಮೋನುಗಳ ಸಮಸ್ಯೆ (Hormonal Problem), ಜತೆಗೆ ಜೀವನ ಶೈಲಿಯೂ (Life Style) ಕೂಡ ಈ ತರದ ಬಳಲಿಕೆಗೆ ಕಾರಣವಾಗುತ್ತವೆ.

ಇದನ್ನು ಹೋಗಲಾಡಿಸಲು ಏನು ಮಾಡಬೇಕು?

* ತಾಜಾ ಸೊಪ್ಪು, ತರಕಾರಿಗಳ ಸೇವನೆ (Consumption of fresh greens and vegetables) :  ಆಹಾರದಲ್ಲಿ ತಾಜಾ ಸೊಪ್ಪು ತರಕಾರಿ, ಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು.

ಇದು ದೇಹಕ್ಕೆ ಬೇಕಾದ ಸಾಕಷ್ಟು ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ಅಲ್ಲದೇ ಆರೋಗ್ಯದ ವೃದ್ಧಿಯಲ್ಲಿ ಹಸಿರು ತಾಜಾ ಸೊಪ್ಪು-ತರಕಾರಿಗಳು ಬಹುದೊಡ್ಡ ಪಾತ್ರವನ್ನು ವಹಿಸುತ್ತವೆ.

* ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳುವುದು (Taking proper rest):

ದಿನನಿತ್ಯದ ನಮ್ಮವೇ ಆದ ಹಲವಾರು ರಗಳೆಗಳ ನಡುವೆ ನಾವೆಲ್ಲ ಸರಿಯಾದ ವಿಶ್ರಾಂತಿಯನ್ನ ತೆಗೆದುಕೊಳ್ಳುವುದನ್ನು ಮರೆತಿರುತ್ತೇವೆ. ಆದ್ದರಿಂದ ಸರಿಯಾದ ಸಮಯದಲ್ಲಿ ನಿದ್ದೆ ಮಾಡುವ ಮೂಲಕ ವಿಶ್ರಾಂತಿ ಪಡೆಯಬೇಕು.

ಇನ್ನೂ ಕೆಲವರಿಗೆ ಮಧ್ಯಾಹ್ನ ಮಲಗುವ ರೂಢಿಯಿರುತ್ತದೆ. ಇದು ಈ ಕಿರುನಿದ್ದೆ ಮೆದುಳಿಗೆ ಹೆಚ್ಚು ಅಗತ್ಯವಿರುವ ವಿಶ್ರಾಂತಿಯನ್ನು ನೀಡುತ್ತದೆ ಕೂಡ. ಆದರೆ ಎಚ್ಚರಗೊಂಡ ಕೂಡಲೇ ಕೆಲಸ ಮಾಡದೇ, ಮೆದುಳಿಗೆ ಕೊಂಚ ಸಮಯ ನೀಡಬೇಕು.

* ಪೌಷ್ಟಿಕಾಂಶಯುಕ್ತ ಆಹಾರ ಸೇವನೆ (Consuming nutritious food):

ದೈಹಿಕ ಬಳಲಿಕೆಗೆ ಮುಖ್ಯ ಕಾರಣವೇ ಪೌಷ್ಟಿಕಾಂಶಗಳ ಕೊರತೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಪೌಷ್ಠಿಕಾಂಶಯುಕ್ತ ಪದಾರ್ಥಗಳು ಇರುವಂತೆ ನೋಡಿಕೊಳ್ಳಿ.

ದೇಹದ ಶಕ್ತಿ ಹೆಚ್ಚಲು ಸೂಕ್ತ ವೈದ್ಯರ ಸಲಹೆಯ ಮೇರೆಗೆ ಪ್ರೋಟೀನ್ ಪೌಡರ್‌ ಸೇವಿಸಿ. ಪ್ರೋಟೀನ್ ನಿಮ್ಮ ಮನಸ್ಥಿತಿಯನ್ನು ಉತ್ತಮವಾಗಿಸಲು ಸಹಾಯ ಮಾಡುತ್ತದೆ.

Healthy Foods

* ಬೆಳಗಿನ ಸೂರ್ಯನ ಬಿಸಿಲಿಗೆ ಮೈಯೊಡ್ಡುವುದು (Vitamin D supplement from the sun )

ದೇಹಕ್ಕೆ ವಿಟಮಿನ್‌ ಡಿ ತುಂಬಾ ಮುಖ್ಯವಾಗಿದೆ. ಸೂರ್ಯನಿಂದ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ. ದೇಹಕ್ಕೆ ಸರಿಯಾದ ಸೂರ್ಯನ ಬೆಳಕು ಸಿಗದೇ ಇದ್ದಾಗ ಅದು ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ.

ನಿದ್ದೆಗೆ ಕಾರಣವಾಗುವ ಮೆಲಟೋನಿನ್ ಉತ್ಪತ್ತಿಗೆ ಪ್ರಚೋದಿಸುತ್ತದೆ. ಹೀಗಾಗಿ ದಿನದ ಒಂದಷ್ಟು ಹೊತ್ತು ಸೂರ್ಯನ ಬೆಳಕು ಪಡೆಯಿರಿ. ಅದು ಬೆಳಗಿನ ಸಮಯದಲ್ಲಿ ಆದರೆ ತುಂಬಾ ಒಳ್ಳೆಯದು.

* ಟಿ.ವಿ, ಲ್ಯಾಪ್‌ಟಾಪ್‌, ಮೊಬೈಲ್‌ಗಳಿಂದ ದೂರವಿರುವುದು (Stay away from TV, laptop, mobiles):

ಯಾವಾಗಲೂ ಮೊಬೈಲ್‌ ಮತ್ತು ಟಿ.ವಿ, ಲ್ಯಾಪ್‌ಟಾಪ್‌ಗಳಳಂತ ಎಲೆಕ್ಟ್ರಾನಿಕ್‌  ವಸ್ತುಗಳ ಮುಂದೆ ಕೂಡದೆ ಸಾಧ್ಯವಾದಷ್ಟು ಅವುಗಳನ್ನ ಬಿಟ್ಟು ಸಹಜವಾಗಿ ಇರುವುದನ್ನು ರೂಢಿಸಿಕೊಳ್ಳಬೇಕು. ಮೊಬೈಲ್‌ನ ಗೀಳಂತೂ ತೀರ ಕೆಟ್ಟದ್ದು ಎನ್ನುತ್ತವೆ ಸಾಕಷ್ಟು ಸಂಶೋಧನೆಗಳು.

ಸಂಜೆಯ ನಂತರ ನಿಮ್ಮ ಲ್ಯಾಪ್ಟಾಪ್ ಬೆಳಕನ್ನು ಮಂದಗೊಳಿಸಿ. ಈ ಸಾಧನಗಳು ಹೊರಸೂಸುವ ನೀಲಿ ಬೆಳಕು ನಿದ್ದೆಗೆ ಭಂಗ ತರುತ್ತವೆ. ಇನ್ನು ಮಲಗುವ ಕನಿಷ್ಟ ಒಂದು ಗಂಟೆ ಮೊದಲು ಟಿವಿ, ಮೊಬೈಲ್‌  ಮೊಬೈಲ್ ಫೋನ ಬಳಕೆ ಮಾಡದಿರಿ.

* ನಿಯಮಿತ ವ್ಯಾಯಾಮ ಮಾಡುವುದು (Exercising regularly) :

ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ವ್ಯಾಯಾಮ ತುಂಬಾ ಮುಖ್ಯವಾದದ್ದು. ಆದ್ದರಿಂದ ಪ್ರತಿದಿನ ಸಾಮಾನ್ಯ ವ್ಯಾಯಾಮವನ್ನಾದರೂ ಮಾಡುವ ರೂಢಿ ಇರಬೇಕು.

ಇದರಿಂದ ದೈಹಿಕವಾಗಿ ರಕ್ತಪರಿಚಲನೆಗೆ, ಮನಸ್ಸು ಸ್ಥಿತವಾಗಿರುವುದಕ್ಕೆ, ದೇಹ ಕ್ರೀಯಾಶೀಲವಾಗಿರುವುದಕ್ಕೆ ಅನುಕೂಲವಾಗಿರುತ್ತದೆ.

* ಹಾಡು ಕೇಳುವುದು, ಪುಸ್ತಕ ಓದುವುದು (Listening to music, reading a book)

ದಿನನಿತ್ಯದ ಹಲವಾರು ರಗಳೆಗಳ ನಡುವೆ ಮನಸ್ಸಿಗೆ ನೆಮ್ಮದಿ ಇಲ್ಲದಂತಾದಾಗ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಸಹಜ. ಹಾಗಿದ್ದಾಗ ಮನಸ್ಸನ್ನು ಶಾಂತಗೊಳಿಸುವುದು ಮುಖ್ಯ.

ಆದ್ದರಿಂದ ನಿಮಗಿಷ್ಟವಾದ ಹಾಡುಗಳನ್ನು ಕೇಳುವುದು, ನಿಮಗೆ ಇಷ್ಟವಾಗುವ ಪುಸ್ತಕಗಳನ್ನು ಓದುವುದನ್ನ ಮಾಡಬೇಕು. ಇದರಿಂದ ಮನಸ್ಸು ಖುಷಿಯಾಗಿ ಸದಾ ಲವಲವಿಕೆಯಿಂದ ಇರಬಹುದು.

* ಹೆಚ್ಚು ಫಾಸ್ಟ್‌ಫುಡ್ ಸೇವಿಸದೆ ಇರುವುದು (Avoid eating too much fast food)

ಆರೋಗ್ಯದ ದೃಷ್ಟಿಯಿಂದ ನೋಡಿದಾಗ ಅತಿಯಾದ ಫಾಸ್ಟ್‌ಫುಡ್ ಸೇವನೆ ಒಳ್ಳೆಯದಲ್ಲ. ಬಾಯಿರುಚಿಗೆ ಮನಸೋತು ಅತಿಯಾಗಿ ಫಾಸ್ಟ್‌ಫುಡ್ ತಿಂದರೆ ಆರೋಗ್ಯ ಹದಗೆಡುವುದಲ್ಲದೇ, ಅದು ನಿಮ್ಮನ್ನು ಮಂಕು ಮಾಡಬಹುದು.

* ವೈದ್ಯರನ್ನ ಸಂಪರ್ಕಿಸುವುದು (Consulting a Doctor)

ಇನ್ನೂ ಆರೋಗ್ಯದಲ್ಲಿ ಸುಧಾರಣೆ ಕಂಡುಬರದೆ ಇದ್ದಾಗ ತಪ್ಪದೇ ಸಂಬಂಧಪಟ್ಟ ವೈದ್ಯರನ್ನ ಸಂಪರ್ಕಿಸಿ ಸೂಕ್ತ ಚಿಕಿತ್ಸೆ, ಸಲಹೆಗಳನ್ನು ತೆಗೆದುಕೊಳ್ಳಬೇಕು.  ವೈದ್ಯರ ಬಳಿ ಸಂಕೋಚ ಪಡದೆ ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬೇಕು.

ಇನ್ನೂ ಕೊನೆಯದಾಗಿ ಹೇಳುವುದಾದರೇ ದೈಹಿಕ ಆರೋಗ್ಯವೇ ಆಗಿರಲಿ ಅಥವಾ ಮಾನಸಿಕ ಆರೋಗ್ಯವೇ ಆಗಿರಲಿ ಯಾವುದನ್ನು ನಿರ್ಲಕ್ಷ್ಯ ಮಾಡಬೇಡಿ. ಮನುಷ್ಯ ಆರೋಗ್ಯವಂತನಾಗಿರಲು ಈ ಎರಡು ಬಹಳ ಮುಖ್ಯ. ಅಷ್ಟಿಲ್ಲದೇ ನಮ್ಮ ಹಿರಿಯರು ಆರೋಗ್ಯವೇ ಭಾಗ್ಯ ಎಂದಿದ್ದಾರೆಯೇ!

ಹೀಗೆ ನಿಮಗೂ ಕೂಡ ಈ ತರದ ದೈಹಿಕ ಅಥವಾ ಮಾನಸಿಕ ಸಮಸ್ಯೆಗಳು ಕಾಡುತ್ತಿದ್ದರೆ ಒಮ್ಮೆ ತಪ್ಪದೇ ಈ ಮುಂದಿನ ಸಲಹೆಗಳನ್ನು ಪಾಲಿಸಿ ನೋಡಿ, ಆಮೇಲೆ ನೀವು ಲವಲವಿಕೆಯಿಂದ ಇರುತ್ತೀರಿ.

ನೇರಳೆ ಹಣ್ಣಿನ ಬೀಜಗಳಲ್ಲಿದೆ ಅದ್ಬುತ ಶಕ್ತಿ: ಇದನ್ನೂ ನೀವು ತಿಳಿದಿರಲೆಬೇಕು…

Work From Home: “ವರ್ಕ್‌ ಫ್ರಂ ಹೋಮ್‌”ನಲ್ಲಿ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಗೊತ್ತೆ?

Published On: 26 June 2023, 04:07 PM English Summary: Do you always feel exhausted and tired? If so then do this and be cheerful

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.