1. ಆರೋಗ್ಯ ಜೀವನ

ಕಪ್ಪುಅಕ್ಕಿ ಸೇವನೆ: ದೇಹದ ಕೊಬ್ಬು ಕರಗಿಸಲು ಸಹಕಾರಿ!

Hitesh
Hitesh
Consumption of black rice: helps to dissolve body fat!

ಫ್ಯಾಷನ್‌ ಜಗತ್ತಿನಲ್ಲಿ ಇದೀಗ ಬ್ಲಾಕ್‌ ವಾಟರ್‌ ಸಿಕ್ಕಾಪಟ್ಟೆ ಪ್ರಸಿದ್ಧಿ ಪಡೆದುಕೊಂಡಿದೆ. ಅದೇ ರೀತಿ ಆರೋಗ್ಯ ಕಾಳಜಿಯ ದೃಷ್ಟಿಯಿಂದಾಗಿ ಕಪ್ಪು ಅಕ್ಕಿಯು ಆರೋಗ್ಯಕ್ಕೆ ಉತ್ತಮವಾಗಿದೆ.

ಕಪ್ಪು ಅಕ್ಕಿಯನ್ನು ತಿನ್ನುವುದರಿಂದ ಯಾವೆಲ್ಲ ಲಾಭಗಳಿವೆ. ಕಪ್ಪು ಅಕ್ಕಿಯನ್ನು ಏಕೆ ಸೇವಿಸಬೇಕು ಎನ್ನುವುದಕ್ಕೆ ಇಲ್ಲಿದೆ ವಿವರ.

ಕಪ್ಪು ಅಕ್ಕಿಯನ್ನು ಪಕ್ವವಾಗಿ ಬಿಸಿ ಮಾಡಿದ ನಂತರದಲ್ಲಿ ನೇರಳೆ ಬಣ್ಣ ಮೂಡುತ್ತದೆ. ಕಪ್ಪು ಅಕ್ಕಿಯನ್ನು ಸೇವಿಸುವುದರಿಂದ ಮಧುಮೇಹ ಸಮಸ್ಯೆ ನಿಯಂತ್ರಣ ಸಾಧ್ಯವಿದೆ.   

ಕಪ್ಪು ಅಕ್ಕಿಯಲ್ಲಿ ಮೆಗ್ನೀಷಿಯಂ ಮತ್ತು ನಾರಿನ ಅಂಶದ ಪ್ರಮಾಣವನ್ನು ಹೆಚ್ಚಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದಕ್ಕೆ ಬಹುವಾಗಿ ಸಹಕಾರಿ ಆಗಿದೆ.

ಅಲ್ಲದೇ ದೇಹದಲ್ಲಿರುವ ಇನ್ಸುಲಿನ್ ಸರಿಯಾಗಿ ಉಪಯೋಗವಾಗುವುದಕ್ಕೆ ಸಹಕಾರಿ ಆಗಿದೆ.   

ಮಾಂಡೌಸ್‌ ಚಂಡಮಾರುತ: ರಾಜ್ಯದ ವಿವಿಧ ಜಿಲ್ಲೆಯಲ್ಲಿ ಧಾರಾಕಾರ ಮಳೆ

ಇದೆಲ್ಲದರೊಂದಿಗೆ ಕಪ್ಪು ಅಕ್ಕಿಯಲ್ಲಿ ವಿಟಮಿನ್ ಅಂಶಗಳು, ಪ್ರೋಟೀನ್ ಮತ್ತು ಖನಿಜಾಂಶಗಳು ಹೆಚ್ಚಿಗೆ ಇರುವುದರಿಂದ ಆರೋಗ್ಯಕ್ಕೆ ಹಲವು ಉಪಯೋಗಗಳಿವೆ.  

ಬಿಳಿ ಬಣ್ಣದ ಅಕ್ಕಿಗೆ ಹೋಲಿಸಿದರೆ ಒಳ್ಳೆಯದಾಗಿದೆ. ಅಷ್ಟೇ ಅಲ್ಲದೆ ಹೃದಯದ ಕಾಯಿಲೆಗಳನ್ನು ಇದು ದೂರ ಮಾಡುವುದರಿಂದ ಮಧುಮೇಹ ಸಮಸ್ಯೆ

ಇರುವವರಿಗೆ ಹಾಗೂ ಬೊಜ್ಜಿನ ಸಮಸ್ಯೆ ಇರುವವರಿಗೆ ಇದು ಉತ್ತಮ ಆಹಾರ ಪದಾರ್ಥವಾಗಿದೆ.

ಈ ರೀತಿಯ ಅಕ್ಕಿಯಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿದ್ದು, ಕಪ್ಪು ಅಕ್ಕಿಯಿಂದ ತಯಾರು ಮಾಡುವ ಅನ್ನ ಸೇವಿಸುವುದರಿಂದಾಗಿ ದೇಹದಲ್ಲಿ ಫ್ರೀ ರಾಡಿಕಲ್ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಲು ಸಹಕಾರಿ ಆಗಿದೆ.

ಅಲ್ಲದೇ ಮಧುಮೇಹ ಸಮಸ್ಯೆ ಇರುವವರಿಗೆ ಜೀವಕೋಶಗಳ ಹಾನಿ ಉಂಟಾಗುವುದನ್ನು ತಡೆಯಲು ಅನುಕೂಲಕರವಾಗಿದೆ.

ಅಲ್ಲದೇ ಇದರಲ್ಲಿನ ನಾರಿನ ಅಂಶವು ಅಪಾರ ಪ್ರಮಾಣದಲ್ಲಿ ಸಹಕಾರಿ ಆಗಿದೆ. ಈ ಅಕ್ಕಿಯನ್ನು ಬಳಸಿದ ನಂತರದಲ್ಲಿ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಏರಿಕೆ ಆಗಲಿದೆ.

ದೇಹದಲ್ಲಿ ಕೊಬ್ಬಿನ ಪ್ರಮಾಣ ಕರಗಿಸುತ್ತದೆ

ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ಇಳಿಕೆ ಮಾಡಲು ಇದು ಅತ್ಯಂತ ಸಹಕಾರಿ ಆಗಿದೆ. ಬೊಜ್ಜಿನ ಸಮಸ್ಯೆಗೆ ಕಪ್ಪು ಅಕ್ಕಿ ಸೇವನೆ ಸುಲಭವಾಗಿದೆ.

ಕಪ್ಪು ಅಕ್ಕಿಯಿಂದ ತಯಾರು ಮಾಡುವ ಅನ್ನವನ್ನು ಸೇವನೆ ಮಾಡುವುದರಿಂದ ಅವರ ದೇಹಕ್ಕೆ ನಾರಿನ ಅಂಶ ಮತ್ತು ಪ್ರೋಟಿನ್ ಅಂಶ ಹೆಚ್ಚಾಗಿ ಸಿಗುತ್ತದೆ.

Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!

Consumption of black rice: helps to dissolve body fat!

ಈ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ತುಂಬಾ ಕಡಿಮೆ ಇದೆ. ನಿಮ್ಮ ಹೊಟ್ಟೆ ಹಸಿವಿನ ನಿಯಂತ್ರಣದಲ್ಲಿ ಇದು ಸಹಾಯ ಮಾಡುವ ಜೊತೆಗೆ ನಿಮ್ಮನ್ನು ದೀರ್ಘಕಾಲ ಹೊಟ್ಟೆ ತುಂಬುವಂತೆ ಮಾಡುತ್ತದೆ.

ಸಕ್ಕರೆ ಕಾಯಿಲೆ ಇರುವವರಿಗೆ ಆಹಾರದ ಡಯಟ್ ಬಹಳ ಮುಖ್ಯವಾಗಿದೆ. ಈ ಆಹಾರದ ಸೇವೆನೆಯಿಂದಾಗಿ ಆಹಾರದಲ್ಲಿ ದೇಹಕ್ಕೆ ಸಮರ್ಪಕವಾದ

ಪ್ರಮಾಣದಲ್ಲಿ ಬೇಕಾಗಿರುವಂತಹ ಎಲ್ಲಾ ಬಗೆಯ ಪ್ರೋಟೀನ್, ಆರೋಗ್ಯಕರ ಕೊಬ್ಬು ಮತ್ತು ವಿಟಮಿನ್ ಅಂಶಗಳು ಜೊತೆಗೆ ಪೌಷ್ಟಿಕಾಂಶಗಳನ್ನು ಪೂರೈಸುತ್ತದೆ.  

ಕಪ್ಪು ಅಕ್ಕಿಯನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಗ್ಲೈಸಿಮಿಕ್ ಸೂಚ್ಯಂಕ ನಿಯಂತ್ರ ಣಕ್ಕೆ ಬರುತ್ತದೆ ಮತ್ತು ಸಕ್ಕರೆ ಪ್ರಮಾಣ ಅತ್ಯುತ್ತಮವಾಗಿ ನಿರ್ವಹಣೆ ಆಗುತ್ತದೆ.  

ರಾಜ್ಯದಲ್ಲಿ “ಪಕ್ಷಿ ಉತ್ಸವ”; ಎಲ್ಲಿ ಮತ್ತು ಯಾವಾಗ ಇಲ್ಲಿದೆ ವಿವರ!

Published On: 09 December 2022, 11:29 AM English Summary: Consumption of black rice: helps to dissolve body fat!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.