ಭಾರತದಲ್ಲಿ ಡಿಜಿಟಲ್ ಪಾವತಿಯು ಇತ್ತೀಚಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.
ಆನ್ಲೈನ್ನಲ್ಲೇ ಬೆಳೆಗಳ ಖರೀದಿ ಮತ್ತು ವಿತರಣೆ!
ಹೌದು ಇತ್ತೀಚಿನ ದಿನಗಳಲ್ಲಿ ಹಲವು ಮಾದರಿಯ ಡಿಜಿಟಲ್ ವೇದಿಕೆಯ ಮೂಲಕ ಜನ ಹಣ ವರ್ಗಾವಣೆ ಮಾಡುವುದು ಹೆಚ್ಚಾಗುತ್ತಿದೆ.
ಪ್ರಸ್ತಕ ಹಣಕಾಸು ವರ್ಷದ ಮೂರನೇ ಕೈಮಾಸಿಕದಲ್ಲಿ ಇಲ್ಲಿಯವರೆಗೆ 2,300 ಕೋಟಿ ವಹಿವಾಟು ನಡೆದಿದ್ದು, 38.30 ಲಕ್ಷ ಕೋಟಿ ರೂ.
ಪಾವತಿ ಆಗಿರುವುದು ವರದಿ ಆಗಿದೆ. ಅಲ್ಲದೇ ಈ ಪಾವತಿಗಳು ಯುಪಿಐ, ಡೆಬಿಟ್, ಕೆಟ್ ಶಾರ್ಕ್,
ಪೂರ್ವಪಾವತಿ ವೇದಿಕೆ ಮತ್ತು ಮೊಬೈಲ್ ವ್ಯಾಲೆಟ್ಗಳ ಮೂಲಕ ಆಗಿದೆ ಎಂದು ವರ್ಲ್ಡ್ ಲೈನ್ ಕಾಸಿಯಾ ಡಿಜಿಟಲ್ ಪೇಮೆಂಟ್ ವರದಿ ಮಾಡಿದೆ.
Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!
ಡಿಜಿಟಲ್ ವಹಿವಾಟಿನಲ್ಲಿ ಅತೀ ಹೆಚ್ಚಾಗಿ ಯುಪಿಐ ಆ್ಯಪ್, ಫೋನ್ ಡೇ, ಗೂಗಲ್ ವಹಿವಾಟು ಹೆಚ್ಚಾಗಿದೆ.
ಅಲ್ಲದೇ ಯುಪಿಐ ಮೂಲಕ 1,965 ಕೋಟಿ ವಹಿವಾಟು ನಡೆದಿದ್ದು, 32.50 ಲಕ್ಷ ಕೋಟಿ ರೂ. ಪಾವತಿ ಆಗಿದೆ.
ಇದೇ ಕಳೆದ ಅರ್ಥಿಕ ಸಾಲಿನ 3ನೇ ತ್ರೈಮಾಸಿಕಕ್ಕೆ ಈ ಪ್ರಮಾಣವನ್ನು ಹೋಲಿಕೆ ಮಾಡಿ ನೋಡಿದರೆ,
ಡಿಜಿಟಲ್ ವಹಿವಾಟಿನಲ್ಲಿ ಶೇ.71 ವೃದ್ಧಿ ಆಗಿರುವುದು ಕಂಡುಬಂದಿದೆ.
PmKisan | ಪಿ.ಎಂ ಕಿಸಾನ್ ಸಮ್ಮಾನ್ 13ನೇ ಕಂತಿನ ಹಣಕ್ಕೆ ಕ್ಷಣಗಣನೆ!
ಅತಿ ಹೆಚ್ಚು ಸ್ವೀಕೃತಿ ಅಥವಾ ಪಾವತಿಗಳು ನಡೆದ ಬ್ಯಾಂಕ್ಗಳ ಪಟ್ಟಿಯಲ್ಲಿ ಎಸ್ಬಿಐ, ಎಚ್ ಡಿಎಫ್ ಸಿ, ಬ್ಯಾಂಕ್ ಆಫ್ ಬರೋಡ,
ಯೂನಿಯನ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮುಂಚೂಣಿಯಲ್ಲಿವೆ.
ಒಟ್ಟಾರೆ ಡಿಜಿಟಲ್ ವಹಿವಾಟಿನಲ್ಲಿ ಶೇ42 ಪ್ರಮಾಣವು ವ್ಯಕ್ತಿಯಿಂದ ವ್ಯಾಪಾರಿ (ಪಿ2 ಎಂ) ಮತ್ತು ವ್ಯಕ್ತಿಯಿಂದ ವ್ಯಕ್ತಿ (ಪಿ2ಪಿ) ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ.
ಯುಪಿಐನ ಮೂಲಕ ಬರೋಬ್ಬರಿ ಪಿ2ಎಂಗೆ 738 ಕೋಟಿ ರೂಪಾಯಿ, ಪ್ರಿಪೇಯ್ಡ್ ಕಾರ್ಡ್
ಮೂಲಕ ಮೂಲಕ 473 ಕೋಟಿ ರೂಪಾಯಿ ಹಾಗೂ ಎಂ-ಬ್ಯಾಲೆಟ್ ಮೂಲಕ 382 ಕೋಟಿ ರೂಪಾಯಿ ಪಾವತಿ ಆಗಿದೆ.
ಚಿನ್ನದ ಬೆಲೆಯಲ್ಲಿ ಅಲ್ಪ ಬದಲಾವಣೆ, ಇಂದಿನ ಚಿನ್ನದ ಬೆಲೆ ಎಷ್ಟಿದೆ ?
ಅಲ್ಲದೇ ಕೆಡಿಟ್ ಕಾರ್ಡ್ ಮೂಲಕ 4,833 ಕೋಟಿ ರೂಪಾಯಿ ಡೆಬಿಟ್ ಕಾರ್ಡ್ ನಿಂದ 2,073 ಕೋಟಿ ರೂಪಾಯಿ ಪಾವತಿಸಲಾಗಿದೆ.
ಈ ಎರಡೂ ಕಾರ್ಡ್ಗಳ ಮೂಲಕವೇ ಶೇ.65ರಷ್ಟು ವಹಿವಾಟು ನಡೆದಿದೆ.
ಚಿನ್ನ-ಬೆಳ್ಳಿ ದರ ತುಸು ಏರಿಕೆ
ಪ್ರಸಕ್ತ ತ್ರೈಮಾಸದಲ್ಲಿ ಬಂಗಾರದ ಬೆಲೆಯು 227 ರೂಪಾಯಿ ಏರಿಕೆ ಆಗಿದೆ. 10 ಗ್ರಾಂ ಬೆಲೆ 54,386 ರೂಪಾಯಿಗೆ ತಲುಪಿದೆ.
ಅಲ್ಲದೇ ಬೆಳ್ಳಿ ಬೆಲೆಯು 1,166 ರೂಪಾಯಿಗೆ ಹೆಚ್ಚಳವಾಗಿದೆ. ಕೆ.ಜಿ.ದರ 62,270 ರೂಪಾಯಿಗೆ ಏರಿಕೆ ಕಂಡಿದೆ.
ಉಳಿದಂತೆ ಡಾಲರ್ ಎದುರು ರೂಪಾಯಿ ಮೌಲ್ಯ 52 ಪೈಸೆ ಕುಸಿತಕಂಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ 81.85 ರೂ.
ವಿನಿಮಯ ದರ ಸ್ಥಿರವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Share your comments